ಹೊಸದಿಲ್ಲಿ: ಅಡುಗೆ ಎಣ್ಣೆಗಳ ಬೆಲೆಯನ್ನು ನಿಯಂತ್ರಣದಲ್ಲಿ ಇರಿಸುವುದಕ್ಕಾಗಿ ಕೇಂದ್ರ ಸರಕಾರವು ತಾಳೆ, ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಗಳ ಆಮದು ಸುಂಕವನ್ನು ಶೇ. 2.11ರಷ್ಟು ಕಡಿಮೆ ಮಾಡಿದೆ. ಸುಂಕ ಇಳಿಕೆಯಿಂದಾಗಿ ಪ್ರತೀ ಲೀಟರ್ ಅಡುಗೆ ಎಣ್ಣೆಯ ಬೆಲೆ 4 ರೂ.ಗಳಿಂದ 5 ರೂ.ಗಳ ವರೆಗೆ ಕಡಿಮೆಯಾಗಲಿದೆ.
ಇದರಿಂದ ಕೇಂದ್ರ ಸರಕಾರಕ್ಕೆ 1,100 ಕೋಟಿ ರೂ. ಆದಾಯ ನಷ್ಟವಾಗಲಿದೆ ಎಂದು ಕೇಂದ್ರ ಆಹಾರ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ಮೂರು ಕಚ್ಚಾ ಮತ್ತು ಸಂಸ್ಕರಿತ ದರ್ಜೆಯ ಎಣ್ಣೆಗಳ ಆಮದು ಸುಂಕ ತಗ್ಗಿಸಲಾಗಿದೆ.
ವಿತ್ತ ಸಚಿವಾಲಯದ ಪ್ರಕಟನೆಯ ಪ್ರಕಾರ ಕಚ್ಚಾ ತಾಳೆ ಎಣ್ಣೆಯ ಆಮದು ಸುಂಕವನ್ನು ಶೇ. 10ರಿಂದ ಶೇ. 2.5ಕ್ಕೆ, ಕಚ್ಚಾ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಗಳ ಆಮದು ಸುಂಕವನ್ನು ಶೇ. 7.5ರಿಂದ ಶೇ. 2.5ಕ್ಕೆ ಇಳಿಕೆ ಮಾಡಲಾಗಿದೆ.
ಈ ಕ್ರಮದಿಂದ ತಾಳೆ ಎಣ್ಣೆ, ಸೋಯಾಬೀನ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಬೆಲೆ ಶೇ. 24.75ರಷ್ಟು ಕಡಿಮೆಯಾಗುವ ನಿರೀಕ್ಷೆಯನ್ನು ಸರಕಾರ ಹೊಂದಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..