ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರು “The Incarnation – Sita” ಚಿತ್ರದಲ್ಲಿ ಸೀತೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಮಂಗಳವಾರ ಅಧಿಕೃತವಾಗಿ ಘೋಷಣೆಯಾಗಿದೆ.
ಅಲೌಖಿಕ್ ದೇಸಾಯಿ ನಿರ್ದೇಶನದ ಪೌರಾಣಿಕ ಸಿನಿಮಾದಲ್ಲಿ ಕಂಗನಾ ಸೀತೆ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಕೆ.ವಿ ವಿಜಯೇಂದ್ರ ಪ್ರಸಾದ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.
ಈ ವಿಷಯ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿತ್ತು. ಈ ಮೊದಲು ಸೀತೆ ಪಾತ್ರಕ್ಕೆ ಕರೀನಾ ಕಫೂರ್ ಅವರಿಗೆ ಆಫರ್ ಮಾಡಲಾಗಿತ್ತು. ಆದರೆ, ವ್ಯಾಪಕ ವಿರೋಧ ಕೂಡ ವ್ಯಕ್ತವಾಗಿತ್ತು. ಸೈಫ್ ಅಲಿಖಾನ್ ಜೊತೆ ಮದುವೆಯಾದ ಈ ನಟಿ ಸೀತೆ ಪಾತ್ರದಲ್ಲಿ ನಟಿಸುವುದು ಬೇಡ ಎನ್ನುವ ಕೂಗು ಸಾಮಾಜಿಕ ಜಾಲತಾಣದಲ್ಲಿ ಬಂದಿತ್ತು. ಈ ಕಾರಣ ಬೇಬೋ ಅವರನ್ನು ಚಿತ್ರತಂಡ ಕೈ ಬಿಟ್ಟು ಕಂಗನಾ ಅವರಿಗೆ ಮಣೆ ಹಾಕಿದೆ.
ಕಂಗನಾ ಅವರು ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಇದೇ ಮೊದಲಲ್ಲ. ‘ಮಣಿಕರ್ಣಿಕಾ’ ಚಿತ್ರದಲ್ಲಿ ಅವರು ನಟಿಸಿದ್ದಾರೆ. ಇದೀಗ ಸೀತಾ ಪಾತ್ರಕ್ಕೆ ರೆಡಿಯಾಗುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..