ದೊಡ್ಡಬಳ್ಳಾಪುರ: ಎಲ್ಲ ವರ್ಗದ ಪಡಿತರ ಚೀಟಿದಾರರ ಇ-ಕೆವೈಸಿ ಸಂಗ್ರಹಣೆ ಕಾರ್ಯದ ಅವಧಿಯನ್ನು ವಿಸ್ತರಿಸಲಾಗಿದೆ. ತಾಲೂಕಿನ ಪಡಿತರ ಚೀಟಿದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಶಿರಸ್ತೇದಾರ್ ರಮೇಶ್ ತಿಳಿಸಿದ್ದಾರೆ.
ಈ ಕುರಿತು ಹರಿತಲೇಖನಿಗೆ ಮಾಹಿತಿ ನೀಡಿರುವ ಅವರು, ಪ್ರತಿ ದಿನ ನ್ಯಾಯಬೆಲೆ ಅಂಗಡಿಗಳಲ್ಲಿ 07 ರಿಂದ ರಾತ್ರಿನ 08ರ ವರೆಗೆ ಇ-ಕೆವೈಸಿ ಸಂಗ್ರಹಣೆ ಕಾರ್ಯವನ್ನು ದಿನಾಂಕ 11-09-2021 ರಿಂದ ದಿನಾಂಕ 15-09-2021ರ ವರೆಗೆ ಮುಂದುವರೆಸಲಾಗಿದೆ.
ದಿನಾಂಕ 16-09-2021 ರಿಂದ ದಿನಾಂಕ 30-09-2021ರವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿದಿನ ಮಧ್ಯಾಹ್ನ 12 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಮಾತ್ರ ಇ-ಕೆವೈಸಿ ಸಂಗ್ರಹಣೆ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ.
ಆದ್ದರಿಂದ ಮೇಲಿನ ವೇಳಾಪಟ್ಟಿಯಂತೆ ಜಿಲ್ಲೆಯ ಎಲ್ಲಾ ಅಂತ್ಯೋದಯ ಹಾಗೂ ಪಿಹೆಚ್‍ಹೆಚ್ (ಬಿಪಿಎಲ್) ಹಾಗೂ ಎನ್ ಪಿಹೆಚ್ ಹೆಚ್ (ಎ.ಪಿ.ಎಲ್.) ಪಡಿತರ ಚೀಟಿ ಹೊಂದಿರುವ ಕುಟುಂಬದ ಎಲ್ಲಾ ಸದಸ್ಯರು ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ, ಒಂದು ಬಾರಿ Electronic Know Your Customer (ಇ.ಕೆವೈಸಿ) ನೀಡಲು ಮತ್ತೊಮ್ಮೆ ತಿಳಿಸಲಾಗಿದೆ.
ಪಡಿತರ ಚೀಟಿಯಲ್ಲಿರುವ ಕುಟುಂಬದ ಎಲ್ಲಾ ಸದಸ್ಯರು ತಮ್ಮ ನ್ಯಾಯಬೆಲೆ ಅಂಗಡಿಗೆ ಹೋಗಿ ಬೆರಳಚ್ಚು ನೀಡುವ ಪ್ರಕ್ರಿಯೆಯಾಗಿರುತ್ತದೆ. ಇ-ಕೆವೈಸಿ ಸೇವೆಯು ಉಚಿತ ಸೇವೆಯಾಗಿರುತ್ತದೆ. ಇದಕ್ಕಾಗಿ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿ ಸಂಚಾಲಕರಿಗೆ ಯಾವುದೇ ದುಡ್ಡು ನೀಡುವ ಅವಶ್ಯಕತೆ ಇಲ್ಲ.
ಒಂದು ವೇಳೆ ಈ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ಸಂಬಂಧಪಟ್ಟ ತಹಶೀಲ್ದಾರರು ಹಾಗೂ ತಾಲೂಕಿನ ಆಹಾರ ಶಿರಸ್ತೇದಾರ್, ನಿರೀಕ್ಷಕರುಗಳಿಗೆ ಮತ್ತು ಉಪ ನಿರ್ದೇಶಕರು, ಆಹಾರ, ನಾಗರಿಕ ಸರಬರಾಜ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ದೊಡ್ಡಬಳ್ಳಾಪುರ ಇವರಿಗೆ ದೂರು ಸಲ್ಲಿಸಬೇಕು.
ಸರ್ಕಾರವು ಇ-ಕೆವೈಸಿ. ನೀಡಲು ಈ ತಿಂಗಳ ಅಂತ್ಯದವರೆಗೆ ಅಂದರೆ ಸೆಪ್ಟೆಂಬರ್ 30 ರವರೆಗೆ ಕೊನೆಯ ಅವಕಾಶ ನೀಡಿದ್ದು, ಒಂದು ವೇಳೆ ಈ ಅವಧಿಯಲ್ಲಿ ಇ-ಕೆವೈಸಿ, ನೀಡದಿದ್ದಲ್ಲಿ, ಪಡಿತರ ಚೀಟಿಯಿಂದ ಅಂತಹ ಸದಸ್ಯರುಗಳ ಹೆಸರು ಕಡಿಮೆಯಾಗಿ ಪಡಿತರ ಪದಾರ್ಥ ಬಾರದೇ ಇದ್ದಲ್ಲಿ ನೇರವಾಗಿ ಪಡಿತರ ಚೀಟಿದಾರರೇ ಜವಾಬ್ದಾರರಾಗುತ್ತಾರೆ. ಆದ್ದರಿಂದ ಇ-ಕೆವೈಸಿ ನೀಡಲು ಬಾಕಿ ಇರುವ ಪಡಿತರ ಚೀಟಿದಾರರು ಇದಕ್ಕೆ ಆಸ್ಪದ ನೀಡದೇ, ಇ-ಕೆವೈಸಿ ನೀಡಲು ಬಾಕಿ ಇರುವ ಎಲ್ಲಾ ಪಡಿತರ ಚೀಟಿದಾರರುಗಳಿಗೆ ಸೂಚನೆ ನೀಡಲಾಗಿದೆ ಎಂದು ರಮೇಶ್ ಅವರು ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..