ನಟ ಡಾ.ವಿಷ್ಣುವರ್ಧನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ನಿವೃತ್ತ ಯೋಧ ವಿಜಯೇಂದ್ರ ರಾವ್ ಒತ್ತಾಯ

ದೊಡ್ಡಬಳ್ಳಾಪುರ: ನಗರದ ದರ್ಗಾಜೋಗಹಳ್ಳಿಯಲ್ಲಿ ಹೃದಯವಂತ ಡಾ.ವಿಷ್ಣುವರ್ಧನ್ ಸಂಘದ ವತಿಯಿಂದ ನಡೆದ ನಟ ಡಾ.ವಿಷ್ಣುವರ್ಧನ್ 71ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ನಿವೃತ್ತ ಯೋಧರಾದ ವಿಜಯೇಂದ್ರ ರಾವ್ ರವರು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, 1950 ಸೆಪ್ಟೆಂಬರ್ 18 ರಂದು ಜನಿಸಿದ ಸಂಪತ್ ಕುಮಾರ್ 1955 ರಲ್ಲಿ ಶಂಕರ್ ಸಿಂಗ್ ನಿರ್ಮಾಣದ ಭಕ್ತಿ ಪ್ರಧಾನ ಚಿತ್ರ ಶಿವಶರಣೆ ನಂಬೆಯಕ್ಕ ಎಂಬ  ಚಿತ್ರದಲ್ಲಿ ಬಾಲನಟನಾಗಿ ಪ್ರವೇಶ ಮಾಡಿದ ನಂತರ, ಎಸ್.ಎಲ್.ಭೈರಪ್ಪ ರವರ ಕಾದಂಬರಿ ಆಧಾರಿತ ವಂಶವೃಕ್ಷ ಚಿತ್ರದಲ್ಲಿ ಸಣ್ಣ ಪಾತದಲ್ಲಿ ಅಭಿನಯಿಸಿದರು.

ಚಿತ್ರಬ್ರಹ್ಮ ಪುಟ್ಟಣ್ಣ ಕಣಗಲ್ ನಿರ್ದೇಶನದ ನಾಗರಹಾವು ಮೂಲಕ ನಾಯಕನಟನಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಇಮೇಜ್ ಸೃಷ್ಟಿ ಮಾಡಿದ ವಿಷ್ಟುದಾದ, ಹಲವು ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿ ಭಾರತ ದೇಶದಲ್ಲಿ ಒಬ್ಬ ಉತ್ತಮ ನಟನಾಗುವ ಮೂಲಕ ಹಲವಾರು ಪ್ರಶಸ್ತಿ ಗಳು ತಮ್ಮ ಮುಡಿಗೇರಿಸಿಕೊಂಡರು ಎಂದು ಸ್ಮರಿಸಿದರು

45 ವರ್ಷ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂತಹ ಒಬ್ಬ ಶ್ರೇಷ್ಠ ನಟನಿಗೆ ಕೇಂದ್ರ ಸರ್ಕಾರ ದ ಪ್ರತಿಷ್ಠಿತ ಪ್ರಶಸ್ತಿಯಾದ ಪದ್ಮಶ್ರೀ ನೀಡದೇ ಇರುವುದು ನಮ್ಮೆಲ್ಲರ ದೌರ್ಭಾಗ್ಯ.

ಮಹಾನ್ ನಟ ವಿಷ್ಣುವರ್ಧನ್ ಅವರಿಗೆ ಈಗಲಾದರೂ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಸರ್ಕಾರವನ್ನು ಅವರು ಒತ್ತಾಯಿಸಿದರು.

ಈ ಕಾರ್ಯಕ್ರಮದಲ್ಲಿ ಕಸಭಾ ಕಾಂಗ್ರೆಸ್ ಅದ್ಯಕ್ಷ ಆಪ್ಪಿ ವೆಂಕಟೇಶ್ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದರು,ಕಲಾವಿದರಾದ ಹೆಚ್ ಪ್ರಕಾಶ್ ರಾವ್,ಗ್ರಾಮ ಪಂಚಾಯಿತಿ ಸದಸ್ಯರಾದ ರಂಗನಾಥ್, ಎ ವಿ ಚಂದ್ರಶೇಖರ್, ಹೃದಯವಂತ ಡಾ ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಲಕ್ಷ್ಮಣ್, ಚೇತನ್, ವಿನೋದ್, ಗೋವಿಂದ್, ಮಂಜುನಾಥ್ ಮತ್ತು ಪದಾಧಿಕಾರಿಗಳು ಭಾಗವಹಿಸಿದರು.

ಕಾರ್ಯಕ್ರಮದ ನಂತರ ಡಾ.ವಿಷ್ಣುವರ್ಧನ್ ಹೆಸರಿನಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..‌

ರಾಜಕೀಯ

ಸಂಸತ್‌ನಲ್ಲಿ ಆಪರೇಷನ್ ಸಿಂಧೂರ ಕದನವಿರಾಮದ ಕಾವೇರಿದ ಚರ್ಚೆ: ರಾಹುಲ್ ಗಾಂಧಿ ಸವಾಲು, ಮೋದಿ ಸ್ಪಷ್ಟನೆ

ಸಂಸತ್‌ನಲ್ಲಿ ಆಪರೇಷನ್ ಸಿಂಧೂರ ಕದನವಿರಾಮದ ಕಾವೇರಿದ ಚರ್ಚೆ: ರಾಹುಲ್ ಗಾಂಧಿ ಸವಾಲು, ಮೋದಿ

ಚಳಿಗಾಲದ ಅಧಿವೇಶನದಲ್ಲಿ ಆಪರೇಷನ್ ಸಿಂಧೂರ (Operation Sindoor), ಏಕಾಏಕಿ ಕದನ ವಿರಾಮ (ceasefire) ಘೋಷಣೆ ಕುರಿತು ತೀವ್ರ ಚರ್ಚೆಗೆ ಕಾರಣವಾಗಿತ್ತು.

[ccc_my_favorite_select_button post_id="111876"]
ಆಗಸ್ಟ್ 4 ರಿಂದ ಅಮೇರಿಕಾದಲ್ಲಿ ಶಾಸಕಾಂಗ ಶೃಂಗಸಭೆ 2025: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಯಾಣ

ಆಗಸ್ಟ್ 4 ರಿಂದ ಅಮೇರಿಕಾದಲ್ಲಿ ಶಾಸಕಾಂಗ ಶೃಂಗಸಭೆ 2025: ವಿಧಾನ ಪರಿಷತ್ ಸಭಾಪತಿ

ಆಗಸ್ಟ್ 4 ರಿಂದ 6ನೇ ತಾರೀಖಿನವರೆಗೆ ಅಮೇರಿಕಾದ ಬೋಸ್ಟನ್ ನಗರದಲ್ಲಿ ನಡೆಯುವ "ಶಾಸಕಾಂಗ ಶೃಂಗಸಭೆ 2025”ರಲ್ಲಿ (Legislative Summit 2025) ಪಾಲ್ಗೊಳ್ಳಲು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಇಂದು ಬೆಳಗಿನ ಜಾವ

[ccc_my_favorite_select_button post_id="111777"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ: ದೊಡ್ಡಬಳ್ಳಾಪುರದ ಕ್ರೀಡಾಪಟುಗಳು ಆಯ್ಕೆ

ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ: ದೊಡ್ಡಬಳ್ಳಾಪುರದ ಕ್ರೀಡಾಪಟುಗಳು ಆಯ್ಕೆ

ಜು.25ರಿಂದ 28ರವರೆಗೆ ನಡೆಯಲಿರುವ ಪುರುಷರ ಸೀನಿಯರ್ -ನ್ಯಾಷನಲ್ಸ್ ಕಬಡ್ಡಿ ಚಾಂಪಿಯನ್‌ಶಿಪ್(Kabaddi Championship) ಪಂದ್ಯಾವಳಿ

[ccc_my_favorite_select_button post_id="111553"]
ದೊಡ್ಡಬಳ್ಳಾಪುರ: ಕೃಷಿ ಹೊಂಡಕ್ಕೆ ಮತ್ತೊಂದು ಬಲಿ.!

ದೊಡ್ಡಬಳ್ಳಾಪುರ: ಕೃಷಿ ಹೊಂಡಕ್ಕೆ ಮತ್ತೊಂದು ಬಲಿ.!

ಸರ್ಕಾರಗಳು ಮುಂಜಾಗ್ರತೆ ಕ್ರಮ ಕೈಗೊಳ್ಳಿ ಎಂದು ಎಷ್ಟೇ ಸೂಚನೆ ನೀಡಿದರು, ಕೃಷಿ ಹೊಂಡದಲ್ಲಿ (Agricultural pit) ಆಕಸ್ಮಿಕವಾಗಿ ಬಿದ್ದು ಸಾವನಪ್ಪುತ್ತಿರುವ ಪ್ರಕರಣಗಳು ಮಾತ್ರ ನಿಲ್ಲುತ್ತಿಲ್ಲ.

[ccc_my_favorite_select_button post_id="111873"]
ದೊಡ್ಡಬಳ್ಳಾಪುರ: ಕ್ಯಾಂಟರ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಕ್ಯಾಂಟರ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು..!

ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ (Accident) ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ತಾಲ್ಲೂಕಿನ ಮಧುರೆ ರಸ್ತೆಯಲ್ಲಿನ ಖಾಸಗಿ

[ccc_my_favorite_select_button post_id="111623"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!