ಬೆಂ.ಗ್ರಾ.ಜಿಲ್ಲೆ: ಕಾರಹಳ್ಳಿ ಬಿಎಸ್‌ಎಫ್ ಕ್ಯಾಂಪ್‌ಗೆ ಸೆಪ್ಟೆಂಬರ್ 11 ರಂದು ಮೇಘಾಲಯದಿಂದ ಬಂದಂತಹ 740 ಜನ ಯೋಧರಲ್ಲಿ ಒಟ್ಟು 83 ಯೋಧರಿಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಕಾರಹಳ್ಳಿ ಬಿಎಸ್‌ಎಫ್ ಕ್ಯಾಂಪ್‌ಗೆ ಭೇಟಿ ನೀಡಿ, ಪರಿಶೀಲಿಸಿದರು.
ಕೋವಿಡ್ ಸೋಂಕಿತ ಯೋಧರ ಪೈಕಿ 48 ಜನರನ್ನು ದೇವನಹಳ್ಳಿಯ ಸಾರ್ವಜನಿಕ ಆಸ್ಪತ್ರೆ, 22 ಆಕಾಶ್ ಆಸ್ಪತ್ರೆ, 13 ಯಲಹಂಕ ಕೋವಿಡ್ ಕೇರ್ ಸೆಂಟರ್ ನಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದರು.ಉಳಿದವರಿಗೂ ಇಂದು ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ದೃಢಪಟ್ಟವರನ್ನು ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕಂಟೈನ್ಮೆಂಟ್ ಜೋನ್ ಮಾಡಲಾಗಿದ್ದು, ಬಿಎಸ್‌ಎಫ್‌ನಿಂದ ಕಾರಹಳ್ಳಿಯ ಜನವಸತಿ ಪ್ರದೇಶಕ್ಕೆ ಓಡಾಟವನ್ನು ನಿರ್ಬಂಧ ವಿಧಿಸಲಾಗಿದೆ ಎಂದರಲ್ಲದೆ, ಕೋವಿಡ್ ನಿಯಮ ಪಾಲನೆ ಮಾಡಲು ತಿಳಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..