ದೊಡ್ಡಬಳ್ಳಾಪುರ: ಕೃಷಿ ಜಾಗೃತಕೋಶ ತಾಲೂಕಿನ ಆರ್ಗ್ಯಾನಿಕ್ಸ್ ಕೇಂದ್ರದ ಮೇಲೆ ದಾಳಿ ನಡೆಸಿದೆ.
ತಾಲೂಕಿನ ಚೌಗೊಂಡನಹಳ್ಳಿಯಲ್ಲಿನ ಪ್ರಗತಿ ಆರ್ಗ್ಯಾನಿಕ್ ನಲ್ಲಿ ಅನಧಿಕೃತ ಜೈವಿಕ ಕೀಟನಾಶಕ ಹಾಗೂ ಜೈವಿಕ ಗೊಬ್ಬರ ಪೋಷಕಾಂಶ ತಯಾರಿಸಿದ್ದ ಆರೋಪದ ಮೇಲೆ ತಂಡ ದಾಳಿ ನಡೆಸಿದೆ.
ಇಡೀ ದಿನ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಸುಮಾರು 5ಲಕ್ಷ ರೂ.ಮೌಲ್ಯದ ಜೈವಿಕ ಕೀಟನಾಶಕ ಮತ್ತು ಜೈವಿಕ ಗೊಬ್ಬರ ಸೂಕ್ಷ್ಮ ಪೋಷಕಾಂಶವನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ, ದೊಡ್ಡಬಳ್ಳಾಪುರ ಕೃಷಿ ಇಲಾಖೆ ಎಡಿಎ ಸುಶೀಲಮ್ಮ ಹಾಗೂ ವಿಚಕ್ಷಣಾದಳದ ಎಡಿಎ ಪ್ರಮೋದ್, ನಾಗರಾಜ್ ದಾಳಿಯ ನೇತೃತ್ವವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..