ದೊಡ್ಡಬಳ್ಳಾಪುರ: ನಗರದ ನ್ಯಾಯಾಲಯದಲ್ಲಿ ಸೆ. 30 ರಂದು ನಡೆದ ಬೃಹತ್ ಲೋಕ ಅದಾಲತ್‍ನಲ್ಲಿ 2060 ಪ್ರಕರಣಗಳು ಇತ್ಯರ್ಥಗೊಂಡು, ಸುಮಾರು 90,24,46 ಮೊತ್ತದ ವ್ಯವಹಾರಗಳು ಸುಖಾಂತ್ಯಗೊಂಡಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕು 2ನೇ ಸ್ಥಾನವನ್ನು ಪಡೆದಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಅರವಿಂದ ಸಾಯಿಬಣ್ಣ ಹಾಗರಗಿ ಹಾಗೂ ಸದಸ್ಯ ಕಾರ್ಯದರ್ಶಿ ಕೆ.ಆರ್.ದೀಪ ಅವರು ಮಾಹಿತಿ ನೀಡಿದ್ದಾರೆ.
ಮೆಗಾ ಲೋಕ ಆದಾಲತ್‍ನಲ್ಲಿ 5 ನ್ಯಾಯಾಲಯದಿಂದ 36 ಸಿವಿಲ್ ಪ್ರಕರಣಗಳು, 2024 ಕ್ರಿಮಿನಲ್ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುವ ಮೂಲಕ ಶೀಘ್ರ ನ್ಯಾಯದಾನವಾಗಿದೆ. ಇದರಲ್ಲಿ ಅತೀ ಮುಖ್ಯವಾಗಿ 34 ಪಾಲು ವಿಭಾಗ ದಾವೆಗಳು ರಾಜಿಯಲ್ಲಿ ಅಂತ್ಯವಾಗಿದ್ದು,ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಚೆಕ್ ಪ್ರಕರಣಗಳು ರಾಜಿಯಲ್ಲಿ ಅಂತ್ಯವಾಗಿರುವುದು ವಿಶೇಷವಾಗಿದೆ ಎಂದು ತಿಳಿಸಿರುವ ಅವರು ಮೆಗಾ ಲೋಕ ಅದಾಲತ್ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….