ದಸರಾ ಮಹೋತ್ಸವ-2021ರ ದೀಪಾಲಂಕಾರ ನಾಳಿಯಿಂದ ಆರಂಭ

ಮೈಸೂರು: ಮೈಸೂರು ದಸರಾ ಮಹೋತ್ಸವದ ಸಲುವಾಗಿ ಮೈಸೂರು ನಗರ ವ್ಯಾಪ್ತಿಯಲ್ಲಿ ಅಕ್ಟೋಬರ್ 07 ರಿಂದ ಅಕ್ಟೋಬರ್ 15ರವರೆಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಿ ಚಾಲನೆಗೊಳಿಸಲಾಗಿದೆ.

Guarantee scheme
ಎನ್ ವಿಶ್ವನಾಥ್

ಮೈಸೂರು ನಗರದ ಹೊರ ವರ್ತುಲ ರಸ್ತೆಯ ಒಳ ಭಾಗಕ್ಕೆ ಸೇರಿದ ರಸ್ತೆಗಳು, ವೃತ್ತಗಳನ್ನು ದೀಪಾಲಂಕಾರಗೊಳಿಸಲಾಗಿದ್ದು, ಅತ್ಯಂತ ಆಕರ್ಷಣಿಯ ಹಾಗೂ ವಿನೂತನ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಗಿದೆ.

ಈ ದೀಪಾಲಂಕಾರವನ್ನು ಪ್ರತೀ ದಿನ ಸಂಜೆ 6:30 ರಿಂದ ರಾತ್ರಿ 9:30 ಗಂಟೆಯವರೆಗೆ ಬೆಳಗಿಸಲಾಗುವುದು. ಮೈಸೂರು ನಗರದ ನಿವಾಸಿಗಳು, ಪ್ರವಾಸಿಗರು, ಯಾತ್ರಾರ್ಥಿಗಳು, ಪ್ರಮುಖ ಗಣ್ಯ ವ್ಯಕ್ತಿಗಳು ದೀಪಾಲಂಕಾರವನ್ನು ವೀಕ್ಷಿಸಲು ಬರುತ್ತಿರುವುದರಿಂದ ರಸ್ತೆಗಳಲ್ಲಿ ಜನ ದಟ್ಟಣೆ, ವಾಹನ ದಟ್ಟಣೆ ಹೆಚ್ಚಾಗುತ್ತಿದೆ.

ದೀಪಾಲಂಕಾರವನ್ನು ವೀಕ್ಷಿಸುವ ಜನರು ವಿದ್ಯುತ್ ದೀಪಗಳನ್ನು ಸ್ಪರ್ಶಿಸುವುದು, ಸೆಲ್ಫಿ ತೆಗೆದುಕೊಳ್ಳುವುದು, ಸ್ಪರ್ಶಿಸಲು ಪ್ರಯತ್ನಿಸುವುದು, ಮಾರ್ಗಗಳನ್ನು ಸ್ಪರ್ಶಿಸುವಂತೆ ಮಕ್ಕಳಿಗೆ ಪ್ರೇರೇಪಿಸುವುದು ಇತ್ಯಾದಿ ಅಸುರಕ್ಷಿತ ಚಟುವಟಿಕೆಗಳನ್ನು ಮಾಡಿದರೆ ವಿದ್ಯುತ್ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಸುರಕ್ಷತೆಯನ್ನು ಕಾಪಾಡಲು ಚಾ.ವಿ.ಸ.ನಿ.ನಿ. ವತಿಯಿಂದ ಈಗಾಗಲೇ ಅಗತ್ಯ ಸಿಬ್ಬಂದಿ ವರ್ಗದವರು, ಅಧಿಕಾರಿಗಳನ್ನು ಆಯ್ದ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗಿದೆ.

ದೀಪಾಲಂಕಾರ ರಸ್ತೆಗಳು ಮತ್ತು ವೃತ್ತಗಳಲ್ಲಿ ಗಸ್ತು ತಿರುಗಿ ವಾಹನ ಬಳಕೆ ಮಾಡಿ ಧ್ವನಿ ವರ್ಧಕದ ಮೂಲಕ ಈಗಾಗಲೇ ಸುರಕ್ಷತೆಯ ಮೂಲಕ ಅರಿವು ಮೂಡಿಸುವ ಕ್ರಮ ಕೈಗೊಳ್ಳಲಾಗಿದೆ. ಆದರೂ ಸಾರ್ವಜನಿಕರು ಅವಘಡಗಳ ಬಗ್ಗೆ ಲೆಕ್ಕಿಸದೆ ದೀಪಾಲಂಕಾರ ವ್ಯವಸ್ಥೆಯನ್ನು ಸ್ಪರ್ಶಿಸಲು ಪ್ರಯತ್ನಿಸಬಾರದೆಂದು ತಿಳಿಸಲಾಗಿದೆ. ಪೊಲೀಸ್ ಆಯುಕ್ತರು, ಮೈಸೂರು ನಗರದÀವರಿಗೂ ಸಹ ಈ ಬಗ್ಗೆ ಮನವಿ ಮಾಡಿದ್ದು ಅಗತ್ಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಅಗತ್ಯ ಸಿಬ್ಬಂದಿ ವರ್ಗದವರನ್ನು ನಿಯೋಜಿಸಿ ಕೊಡುವಂತೆ ಕೋರಲಾಗಿದೆ.

ಚಾ.ವಿ.ಸ.ನಿ.ನಿ. ಇಲಾಖೆಯು ದಸರಾ ಮಹೋತ್ಸವ ದಿವಸಗಳಂದು ಸಾರ್ವಜನಿಕರಿಗಾಗಿ, ಅತ್ಯಂತ ಕಾಳಜಿವಹಿಸಿ ವಿನೂತನ ವಿನ್ಯಾಸದಿಂದ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದ್ದು, ಸುರಕ್ಷತಾ ದೃಷ್ಟಿಯಿಂದ ಸಾರ್ವಜನಿಕರು ದೀಪಾಲಂಕಾರವನ್ನು ವೀಕ್ಷಿಸುವಾಗ ಯಾವುದೇ ರೀತಿಯಾಗಿ ದೀಪಾಲಂಕಾರ ಸ್ಪರ್ಶಿಸುವ ಪ್ರಯತ್ನ ಮಾಡಬಾರದು, ತಮ್ಮ ಜೊತೆಯಲ್ಲಿರುವ ಮಕ್ಕಳನ್ನು ಯಾವುದೇ ಕಾರಣಕ್ಕೂ ವಿದ್ಯುತ್ ದೀಪ ಹಾಗೂ ತಂತಿಗಳನ್ನು ಮುಟ್ಟಲು ಪ್ರಯತ್ನಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಲಾಗಿದೆ.

ಯಾವುದೇ ವಿದ್ಯುತ್ ತಂತಿಗಳು ತುಂಡಾಗಿ ನೆಲದ ಮೇಲೆ ಬಿದ್ದಿದ್ದರೆ ತುರ್ತಾಗಿ 1912ಗೆ ಕರೆ ಮಾಡುವುದು.

ಸೆಲ್ಫಿ ಅಥವಾ ಫೋಟೋ ತೆಗೆಯುವ ಸಂದರ್ಭದಲ್ಲಿ ವಿದ್ಯುತ್‌ತಂತಿ ಮತ್ತು ವಿದ್ಯುತ್ ಬಲ್ಬ್ಗಳಿಂದ ದೂರ ಇರಬೇಕಾಗಿದ್ದು, ವಿದ್ಯುತ್ ಕಂಬಗಳಿಗೆ, ವಿದ್ಯುತ್ ತಂತಿಗಳಿಗೆ ತಾಗಿ ನಿಲ್ಲಬಾರದು. ಮಳೆ ಬರುವ ಸಮಯದಲ್ಲಿ ವಿದ್ಯುತ್ ಕಂಬ ಹಾಗೂ ತಂತಿಗಳಿAದ ದೂರ ಇರುವುದು. ದೀಪಾಲಂಕಾರ ವ್ಯವಸ್ಥೆಯನ್ನು ಹಾನಿ ಮಾಡುವ / ವಿಕಾರಗೊಳಿಸುವ ಪ್ರಯತ್ನ ಮಾಡಬಾರದು.

ಮಳೆ ಬರುವ ಸಮಯದಲ್ಲಿ ವಿದ್ಯುತ್ ಕಂಬ ಹಾಗೂ ತಂತಿಗಳಿಂದ ದೂರಇರುವುದು. ವಿದ್ಯುತ್ ದೀಪಾಲಂಕಾರ ವ್ಯವಸ್ಥೆಯಲ್ಲಿನ ದೋಷ ಅಥವಾ ದೂರುಗಳಿದ್ದಲ್ಲಿ ತಕ್ಷಣವೇ ಚಾ.ವಿ.ಸ.ನಿ.ನಿ.ಯ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಎನ್.ಆರ್.ಮೊಹಲ್ಲಾ ವಿಭಾಗದ ಕಾರ್ಯ ಮತ್ತು ಪಾಲನೆ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….

ರಾಜಕೀಯ

ಕೆಲವೇ ಕೆಲವು ಮುಖಂಡರಿಗೆ ಸೀಮಿತವಾದ ದೊಡ್ಡಬಳ್ಳಾಪುರ ಶಕ್ತಿ..!?; ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಸ್ಪೋಟ..!!

ಕೆಲವೇ ಕೆಲವು ಮುಖಂಡರಿಗೆ ಸೀಮಿತವಾದ ದೊಡ್ಡಬಳ್ಳಾಪುರ ಶಕ್ತಿ..!?; ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಸ್ಪೋಟ..!!

ಇಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ (Guarantee scheme) ಶಕ್ತಿ ಯೋಜನೆಯ ಸಂಭ್ರಮಾಚರಣೆ ನಡೆಯುತ್ತಿದೆ.

[ccc_my_favorite_select_button post_id="111094"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಶೆಡ್ ‌ನಿರ್ಮಾಣ ಮಾಡಲಾಗಿದೆ Municipal council

[ccc_my_favorite_select_button post_id="110824"]
FROM DODDABALAPURA RAILWAY POLICE: ರೈಲಿಗೆ ಸಿಲುಕಿ ವ್ಯಕ್ತಿ ಸಾವು..

FROM DODDABALAPURA RAILWAY POLICE: ರೈಲಿಗೆ ಸಿಲುಕಿ ವ್ಯಕ್ತಿ ಸಾವು..

ಸುಮಾರು 35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ಸಿಲುಕಿ ಸಾವನಪ್ಪಿರುವ (Dies) ಘಟನೆ ದೊಡ್ಡಬಳ್ಳಾಪುರ- ರಾಜಾನುಕುಂಟೆ ನಡುವಿನ ***

[ccc_my_favorite_select_button post_id="111089"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!