ದೊಡ್ಡಬಳ್ಳಾಪುರ: ಸೋಮವಾರ ರಾತ್ರಿ ಅಬ್ಬರಿಸಿರುವ ಮಳೆರಾಯ ತಾಲೂಕಿನಲ್ಲಿ 94ಮಿಮೀ ಮಳೆ ಸುರಿದಿದ್ದಾನೆ.
ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರೂಪ ನೀಡಿರುವ ಮಾಹಿತಿ ಅನ್ವಯ, ತಾಲೂಕಿನ ಕಸಬ ಹೋಬಳಿ 94 ಮಿಮೀ, ದೊಡ್ಡಬೆಳವಂಗಲ ಹೋಬಳಿ 125 ಮಿಮೀ, ಮಧುರೆ ಹೋಬಳಿ 46 ಮಿಮೀ, ಸಾಸಲು ಹೋಬಳಿ 74 ಮಿಮೀ, ತೂಬಗೆರೆ ಹೋಬಳಿ 76 ಮಿಮೀ ಮಳೆಯಾಗಿದೆ.
ಉಳಿದಂತೆ ದೊಡ್ಡಬೆಳವಂಗಲ ಗ್ರಾಪಂ ವ್ಯಾಪ್ತಿಯಲ್ಲಿ ಅತಿ ಹೆಚ್ಚು 125ಮಿಮೀ ದಾಖಲೆ ಮಳೆಯಾಗಿದ್ದರೆ, ಬಾಶೆಟ್ಟಹಳ್ಳಿ 105 ಮಿಮೀ, ದರ್ಗಾಜೋಗಹಳ್ಳಿ 94 ಮಿಮೀ, ಕೆಸ್ತೂರು 118 ಮಿಮೀ ಹಾಗೂ ಅರಳು ಮಲ್ಲಿಗೆ 96 ಮಿಮೀ ಮಳೆಯಾಗಿದೆ.
ಇನ್ನು ಸೋಮವಾರ ಸುರಿದ ಮಳೆ ಹಲವು ಬೆಳವಣಿಗೆಗೆ ಕಾರಣವಾಗಿದೆ. ದೊಡ್ಡ ತುಮಕೂರು ಕೆರೆ ಮಳೆ ನೀರಿನಿಂದ ಕೋಡಿ ಹರಿದಿದ್ದರೆ, ಹುಸ್ಕೂರು ಗ್ರಾಮದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಕೆಸ್ತೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಹುಸ್ಕೂರು ಗ್ರಾಮದ ಹೊರವಲಯದಲ್ಲಿನ ರಾಜ ಕಾಲುವೆಗೆ ಅಡ್ಡಿಯುಂಟಾಗಿ ಗ್ರಾಮಕ್ಕೆ ನೀರು ಹರಿದು, ಸಮಾರು ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಗ್ರಾಮಸ್ಥರು ರಾತ್ರು ಪೂರ ಜಾಗರಣೆ ಮಾಡುವಂತಾಗಿತ್ತು.
ರಾಜ ಕಾಲುವೆ ತೆರವಿಗೆ ಕ್ರಮ: ಹುಸ್ಕೂರು ಗ್ರಾಮಕ್ಕೆ ನೀರು ನುಗ್ಗಿರುವ ಕುರಿತಂತೆ ತಾಲೂಕುಪಂಚಾಯಿತಿ ಇಒ ಟಿ.ಮುರುಡಯ್ಯ ಹರಿತಲೇಖನಿಗೆ ಪ್ರತಿಕ್ರಿಯೆ ನೀಡಿದ್ದು, ಪಿಡಿಒ ಹಾಗೂ ಸಿಬ್ಬಂದಿ ಕೂಡಲೆ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ಹಾಗೂ ರಾಜ ಕಾಲುವೆ ಹೂಳು ತೆರವು ಮಾಡಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ದೊಡ್ಡತುಮಕೂರು ಕೆರೆ ಕೋಡಿ: 2000 ಇಸವಿಯಲ್ಲಿ ತುಂಬಿ ಕೋಡಿ ಹರಿದಿದ್ದ ದೊಡ್ಡತುಮಕೂರು ಕೆರೆ ಭಾನುವಾರ ಸುರಿದ ಮಳೆಗೆ ಕೋಡಿ ಹರಿದಿದೆ. ಸುಮಾರು 21 ವರ್ಷಗಳ ನಂತರ ಕೆರೆ ಕೋಡಿ ಹರಿದಿರುವುದರಿಂದ ದೊಡ್ಡತುಮಕೂರು, ಗೌಡಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆಂದು ಗ್ರಾಮಪಂಚಾಯಿತಿ ಸದಸ್ಯ ಲೋಕೇಶ್ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……