ದೊಡ್ಡಬಳ್ಳಾಪುರ: ತಾಲೂಕಿನ ಪುರಾತನವಾದ ಮೆಳೇಕೋಟೆ ಕೆರೆ ಸತತ ಮಳೆಯಿಂದಾಗಿ ಇಂದು ಮುಂಜಾನೆ ಕೋಡಿ ಹರಿದಿದ್ದು, ಜನರ ಮನದಲ್ಲಿ ಸಂತಸ ಮನೆ ಮಾಡಿದೆ.
ಸುಮಾರು 21ವರ್ಷಗಳ ನಂತರ ಕೋಡಿ ಹರಿಯುತ್ತಿರುವ ಮೆಳೇಕೋಟೆ ಕೆರೆಯನ್ನು 1926ರಲ್ಲಿ ಸುಮಾರು 86 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ.
2000ರಲ್ಲಿ ಅಲ್ಪ ಪ್ರಮಾಣದಲ್ಲಿ ಕೋಡಿ ಹರಿದ್ದು, 21 ವರ್ಷಗಳ ನಂತರ ಇಂದು ಪೂರ್ಣ ಪ್ರಮಾಣದಲ್ಲಿ ತುಂಬಿ ಬೀಡಿಕೆರೆಗೆ ನೀರು ಹರಿಯುತ್ತಿದೆ.
ಈ ಕೆರೆಗೆ ಸಾರ್ವಜನಿಕರು ಸಹಯೋಗದೊಂದಿಗೆ ಕೆಲ ವರ್ಷಗಳ ಹಿಂದೆ ಆಗಿನ ಜಿಲ್ಲಾಧಿಕಾರಿ ಕರೀಗೌಡ ನೇತೃತ್ವದಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿತ್ತು.
ಅಂತರ್ಜಲ ವೃದ್ಧಿ: ಮೆಳೇಕೋಟೆ ಕೆರೆ ತುಂಬಿ ಕೋಡಿ ಹರಿಯುವ ನೀರಿನಿಂದ ಹಲವು ಸಣ್ಣ ಪುಟ್ಟ ಕೆರೆ ತುಂಬಿ, ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ನೀರು ವೃದ್ಧಿಯಾಗುತ್ತದೆ ಎಂದು ಚೋಗೊಂಡಹಳ್ಳಿ ಕೃಷ್ಣಮೂರ್ತಿ (ಕಿಟ್ಟಿ) ಹರಿತಲೇಖನಿಗೆ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……