ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ದಾಖಲೆ ಪ್ರಮಾಣದ ಮಳೆಯ ನಡುವೆಯೂ..ವಿದ್ಯುತ್ ವ್ಯತ್ಯವಾಗದಂತೆ ನಿರಂತವಾಗಿ ಶ್ರಮಿಸುತ್ತಿರುವ ಬೆಸ್ಕಾಂ ಸಿಬ್ಬಂದಿಗಳ ಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿದ್ಯುತ್ ಕಂಬಗಳು ನೆಲಕೊರಗಿದ್ದರೆ, ಗಿಡ – ಮರಗಳ ಕೊಂಬೆ ಮುರಿದು ಬಿದ್ದು ವಿದ್ಯುತ್ ತಂತಿಗಳು ತುಂಡರಿಸಿ ಬಿದ್ದು ವಿದ್ಯುತ್ ಕಡಿತ ಉಂಟಾಗುತ್ತಿದೆ.
ಬೆಸ್ಕಾಂ ಇಲಾಖೆ ಮೂಲಗಳ ಪ್ರಕಾರ ತಾಲೂಕಿನಲ್ಲಿ ಸುಮಾರು 25ಕ್ಕು ಹೆಚ್ಚು ವಿದ್ಯುತ್ ಕಂಬ, ಮೂರು ಟ್ರಾನ್ಸಫರ್ಮರ್ ಸುಟ್ಟಿದ್ದರೆ, ಹಲವು ಕಡೆ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದು ನಿರಂತರ ವಿದ್ಯುತ್ ಪೂರೈಕೆಗೆ ತಡೆಯಾಗಿತ್ತು. ಆದರೆ ಬೆಸ್ಕಾಂ ಸಿಬ್ಬಂದಿಗಳು ಮಳೆಯಲ್ಲಿಯೂ ಕರ್ತವ್ಯ ನಿರ್ವಹಿಸಿ ವಿದ್ಯುತ್ ಕಡಿತ ಹೆಚ್ಚಿನ ರೀತಿ ಉಂಟಾಗದಂತೆ ಕಾರ್ಯ ನಿರ್ವಹಿಸಿದ್ದಾರೆ.
ಕಳೆದ ಕೆಲ ದಿನಗಳಲ್ಲಿ ಮಳೆ, ರಾತ್ರಿ ಎನ್ನದೆ. ನೀರಲ್ಲಿ ಇಳಿದು ತುಂಡಾದ ಕಂಬಗಳ ತೆರವು ಗೊಳಿಸಿ ನೂತನ ಕಂಬವ ನೆಟ್ಟು ವಿದ್ಯುತ್ ಪೂರೈಕೆಗೆ ಬೆಸ್ಕಾಂ ಸಿಬ್ಬಂದಿ ಕೈಗೊಂಡ ಕಾರ್ಯ ರೋಚಕವಾಗಿದೆ.
ತಾಲೂಕಿನ ತಿಪ್ಪಾಪುರ ಕೆರೆಯಲ್ಲಿ ತುಂಟಾಗಿದ್ದ ವಿದ್ಯುತ್ ತಂತಿಯ ಮರು ಜೋಡಿಸಲು ಐದು ಮಂದಿ ಬೆಸ್ಕಾಂ ಸಿಬ್ಬಂದಿ ಕೆರೆಯ ನೀರಿನಲ್ಲಿ ಇಳಿದು ತಂತಿ ಜೋಡಿಸಿದ್ದು, ನೋಡುಗರ ಮೈ ನಡುಕಕ್ಕೆ ಕಾರಣವಾಗಿತ್ತು.
ವಿದ್ಯುತ್ ಕಡಿತವಾದಾಗ ಬೆಸ್ಕಾಂ ಸಿಬ್ಬಂದಿಗಳ ದೂರುವ ನಾವುಗಳು, ಆ ಸಿಬ್ಬಂದಿಗಳ ಕರ್ತವ್ಯ ನಿಷ್ಠೆ ಸ್ಮರಿಸುವುದು ಕಡಿಮೆ. ಆದರೆ ಇದ್ಯಾವುದಕ್ಕು ಲೆಕ್ಕಿಸದೆ ಮಳೆಯಲ್ಲಿ ಪ್ರಾಣವನ್ನು ಒತ್ತೆಯಿಟ್ಟು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವ ಬೆಸ್ಕಾಂ ಸಿಬ್ಬಂದಿಗಳಿಗೆ ಕಾರ್ಯ ಶ್ಲಾಘನೀಯ – ಸಂಪಾದಕ
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..