ದೊಡ್ಡಬಳ್ಳಾಪುರ: ಕರೊನಾಂತದಿಂದ ಹೊರಬಂದಿರುವ ಜನತೆ ವಿಜಯದಶಮಿ ಹಬ್ಬವನ್ನು ಸಡಗರ ಸಂಭ್ರಮಗಳಿಂದ ಆಚರಿಸಿದರು.
ಶಕ್ತಿ ದೇವಿಯ ಆರಾಧನೆ, ಸಾಂಸ್ಕೃತಿಕ ಆಚರಣೆಗಳ ಅನಾವರಣವಾಗುವ ನವರಾತ್ರಿಯ ಒಂಬತ್ತು ದಿನಗಳು ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ವಿಜಯ ದಶಮಿ ಅಂಗವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬನ್ನಿ ಹೊಡೆಯುವ ಆಚರಣೆ ನಡೆಯಿತು. ಮಹಿಳೆಯರು ಬನ್ನಿ ಮರಕ್ಕೆ ಮಳ್ಳು ಕಟ್ಟಿ ಪೂಜೆ ಸಲ್ಲಿಸಿದರು.
ನಗರದ ನೆಲದಾಂಜನೇಯಸ್ವಾಮಿ ದೇವಾಲಯದಲ್ಲಿನ ಬನ್ನಿ ಮರಕ್ಕೆ ಭಕ್ತಾದಿಗಳು ಪೂಜೆ ಸಲ್ಲಿಸಿದರು.
ನಗರದ ವನ್ನಿಗರ ಪೇಟೆಯಲ್ಲಿರುವ ಶ್ರೀ ಸಪ್ತ ಮಾತೃಕಾ ಮಾರಿಯಮ್ಮ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ದುರ್ಗಾ ದೇವಿಯ ಮೂರ್ತಿ ಹಾಗೂ ದಸರಾ ಬೊಂಬೆಗಳನ್ನು ಪ್ರತಿಷ್ಟಾಪಿಸಿ, ದೇವಿಗೆ ಪ್ರತಿನಿತ್ಯ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಕಾಳಮ್ಮ ದೇವಾಲಯದಲ್ಲಿ ಪ್ರತಿನಿತ್ಯ ವಿಶೇಷ ಅಲಂಕಾರ ಮಾಡಿ ವಿಜಯದಶಮಿಯಂದು ನಗರ ಉತ್ಸವ ನಡೆಸಿ ಬನ್ನಿ ಮಂಟಪದ ಪೂಜೆ ನೆರವೇರಿಸಲಾಯಿತು.
ನಗರದ ಶ್ರೀ ರಾಮಲಿಂಗ ಚೌಡೇಶ್ವರಿ, ಶ್ರೀ ಶಾರದಾ ಶಂಕರ ಸದನ, ಮುತ್ಯಾಲಮ್ಮ ದೇವಿ,ಅಯ್ಯಪ್ಪಸ್ವಾಮಿ ದೇವಾಲಯ,ಶ್ರೀ ವಾಸವಿ ಕ್ಕನಿಕಾ ಪರಮೇಶ್ವರಿ, ಶ್ರೀ ಜನಾರ್ಧನಸ್ವಾಮಿ, ಶ್ರೀ ವೇಣುಗೋಪಾಲಸ್ವಾಮಿ, ಹಾಗೂ ಕುಚ್ಚಪ್ಪನಪೇಟೆಯ ಮಾರಮ್ಮದೇವಿ ದೇವಾಲಯಗಳಲ್ಲಿ ಶರನ್ನವರಾತ್ರೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಆರೂಢಿ ಗ್ರಾಮದ ಶ್ರೀ ವಡಸಲಮ್ಮ ದೇವಿ ಸೇರಿದಂತೆ ಗ್ರಾಮಾಂತರ ಭಾಗದ ದೇವಾಲಯಗಳಲ್ಲಿ ವಿಶೇಷ ಪೂಜೆ, ದೇವತೆಗಳ ಮೆರವಣಿಗೆ ಕೈಗೊಳ್ಳಲಾಗಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……