ದೊಡ್ಡಬಳ್ಳಾಪುರ: ತಾಲೂಕಿನ ಗುಂಡಮಗೆರೆ ಕೆರೆಗೆ ಇಂದು ಬಿಜೆಪಿ ಮುಖಂಡರು ಬಾಗಿನ ಅರ್ಪಿಸಿ, ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶ್ವಥ್ ನಾರಾಯಣ್ ಕುಮಾರ್, ಪ್ರಕೃತಿ ದತ್ತವಾಗಿ ಬಂದ ಮಳೆಯ ಕೃಪೆಯಿಂದ ಗುಂಡಮಗೆರೆ ಕೆರೆ ತುಂಬಿದ್ದು, ಪಂಚ ಭೂತಗಳಲ್ಲಿ ಒಂದಾದ ತಾಯಿ ಭಾಗೀರಥಿಗೆ ಬಾಗಿನ ಅರ್ಪಿಸುವ ಮೂಲಕ ಕೃತಜ್ಞತೆ ಮೆರೆಯಲಾಗಿದೆ.
ಈ ಕೆರೆಯಿಂದ ಹೊಸಹಳ್ಳಿ, ಲಿಂಗನಾಯಕನಕುಂಟೆ, ದೊಡ್ಡಮಲ್ಲೆಕೆರೆ, ಅಲ್ಲಿಪುರ ಮತ್ತಿತರ ಕೆರೆಗಳಿಗೆ ನೀರು ಹರಿದು. ಅಂತರ್ಜಲ ಹೆಚ್ಚಿ, ಸಾವಿರಾರು ರೈತರಿಗೆ, ಪಶು, ಪ್ರಾಣಿ, ಪಕ್ಷಿ ಹಾಗೂ ಸಸ್ಯ ಸಂಪತ್ತಿನ ಅನುಕೂಲ ಕಲ್ಪಿಸಿದ ಈ ಮಹಾತಾಯಿಗೆ ನಾವೆಲ್ಲರು ಗೌರವ ಭಾವನೆಯಿಂದ ಸ್ಮರಿಸಬೇಕಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿ ಬಿ.ಸಿ.ನಾರಾಯಣಸ್ವಾಮಿ, ಜಿಲ್ಲಾಪ್ರಧಾನ ಕಾರ್ಯದರ್ಶಿ ಗೋಪಿ, ಖಜಾಂಚಿ ಸಿ.ನಾರಾಯಣಸ್ವಾಮಿ, ವಕ್ತಾರೆ ಪುಷ್ಪಾ ಶಿವಶಂಕರ್, ಮಹಿಳಾಮೋರ್ಚಾ ರಾಜ್ಯ ಪದಾಧಿಕಾರಿ ವತ್ಸಲ, ತಾಲೂಕು ಅಧ್ಯಕ್ಷ ನಾಗರಾಜ್, ನಗರ ಅಧ್ಯಕ್ಷ ಶಿವಶಂಕರ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರಿಜಾ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಾನಂದರೆಡ್ಡಿ, ಸಾಸಲು ಹೋಬಳಿ ಅಧ್ಯಕ್ಷ ಕದಿರೇಗೌಡ, ಗ್ರಾಪಂ ಸದಸ್ಯರಾದ ಮಾಕಳಿ ಶ್ರೀನಿವಾಸ್, ನಾಗರಾಜ್, ನರಸಿಂಹಮೂರ್ತಿ, ವೀರಭದ್ರಪ್ಪ, ಚಿಕ್ಕಪಾಪಣ್ಣ, ರವಿಕುಮಾರ್, ಮುಖಂಡರಾದ ಪ್ರಕಾಶ್ ರೆಡ್ಡಿ, ಮಲ್ಲಸಂದ್ರ ಶಿವಾನಂದರೆಡ್ಡಿ, ತಿಮ್ಮೆಗೌಡ,ವೆಂಕಟರಾಮರೆಡ್ಡಿ, ಗೋವಿಂದರಾಜ್, ಪ್ರಸನ್ನ, ವಾಸುದೇವ್, ರೋಹಿಣಿ ಗೋವಿಂದರಾಜು, ದ್ರಾಕ್ಷಾಯಿಣಿ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……