ದೊಡ್ಡಬಳ್ಳಾಪುರ: ಶನಿವಾರ ಕಾಣೆಯಾಗಿದ್ದ ನಗರದ ನಿವಾಸಿ ಗಣೇಶ್ ಗೌಡ.ಬಿ.ಎನ್ (17 ವರ್ಷದ) ಯುವಕ ಯಲಹಂಕ ಸಮೀಪದ ಬಾಗಲೂರು ಕ್ರಾಸ್ ಬಳಿ ಪತ್ತೆಯಾಗಿದ್ದು, ಮರಳಿ ಮನೆ ಸೇರಿದ್ದಾನೆ.
ದೊಡ್ಡಬಳ್ಳಾಪುರದ ನಿವಾಸಿಯಾದ ನಾರಾಯಣಗೌಡ ಎನ್ನುವವರ ಮಗನಾದ ಗಣೇಶ್ ಗೌಡ.ಬಿ.ಎನ್ ಶ್ರೀ ವಾಣಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಶನಿವಾರ ಬೆಳಗ್ಗೆ ಕಾಲೇಜಿಗೆ ತೆರಳುವುದಾಗಿ ಮನೆಯಿಂದ ಹೊರಟಿದ್ದಾನೆ. ಆದರೆ ಯುವಕ ಕಾಲೇಜಿಗೆ ಬಾರದ ಹಿನ್ನೆಲೆಯಲ್ಲಿ ಕಾಲೇಜಿನ ಸಿಬ್ಬಂದಿಗಳು ಪೋಷಕರಿಗೆ ಕರೆ ಮಾಡಿ ತಿಳಿಸಿದ್ದು, ಸಂಜೆಯವರೆಗೂ ಕಾದ ಪೋಷಕರು ಆತಂಕಗೊಂಡು ನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು.
ದೂರು ನೀಡಿದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು, ಯುವಕ ಕೊಂಡೋಯ್ದಿದ್ದ ಮೊಬೈಲ್ ಸಿಮ್ ಅನ್ನು ಬೇರೆ ಮೋಬೈಲ್ ಗೆ ಹಾಕಿ ಆನ್ ಮಾಡಿದಾಗ ಲೋಕೇಶನ್ ಪತ್ತೆ ಹಚ್ಚಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಪೋಷಕರು ಯುವಕನ ಮನೆಗೆ ಕರೆತಂದ್ದಾರೆ.
ಅಣ್ಣಾ ತಮ್ಮಂದಿರ ಜಗಳ: ಯುವಕ ಮನೆಯಿಂದ ನಾಪತ್ತೆಯಾಗಲು ಸಹೋದರನೊಂದಿಗೆ ಜಗಳ ಕಾರಣವೆನ್ನಲಾಗಿದ್ದು, ಜಗಳದಿಂದ ಬೇಸರಗೊಂಡು ಮನೆಯಿಂದ ತೆರಳಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಮೂಲಕ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ………