ದೊಡ್ಡಬಳ್ಳಾಪುರ: ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾ ಸಂಸ್ಥೆವತಿಯಿಂದ “ನಮಾಮಿ ಗಂಗೆಯ” ನದಿ ಉತ್ಸವದ ಅಂಗವಾಗಿ ತಾಲೂಕಿನ ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೀರಿನ ಸದ್ಬಳಕೆ ಹಾಗು ಕೆರೆಗಳ ಮಹತ್ವಕುರಿತ ಅರಿವು ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ನೀರಿನ ಮೂಲಗಳ ಮಹತ್ವ, ನೀರಿನ ನೇರ ಬಳಕೆ ಹಾಗು ಪರೋಕ್ಷ ಬಳಕೆಗಳಲ್ಲಿ ಮಾಡಬಹುದಾದಂತಹ ಉಳಿತಾಯದ ಬಗ್ಗೆ ಅರಿವು ಮೂಡಿಸಲಾಯಿತು.
ಕೊನಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷೆ ಮೋಹಿಸೀನಾ ತಾಜ್ ಮಾತನಾಡಿ, ನೀರನ್ನು ಮಿತವಾಗಿ ಬಳಸದಿದ್ದರೆ ಪೆಟ್ರೋಲ್, ಡಿಸೇಲ್ ಬೆಲೆಗಿಂತ ನೀರಿನ ಬೆಲೆ ಹೆಚ್ಚಾಗುವ ದಿನಗಳು ಮುಂದೆ ಬರುತ್ತವೆಂದು ಆತಂಕ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯ ಶಿಕ್ಷಕ ನಾಗರಾಜು.ಜಿ. ಎಂ ಮಾತನಾಡಿ, ಗ್ರಾಮದ ಶಿವಪುರ ಕೆರೆಯೂ ಅರ್ಕಾವತಿ ನದಿಯ ಭಾಗ, ವಿದ್ಯಾರ್ಥಿಗಳು ಕೆರೆ, ನದಿ ಹಾಗೂ ನೀರಿನ ಬಗ್ಗೆ ಈಗಿನಿಂದಲೇ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಡಬ್ಲ್ಯೂ ಡಬ್ಲ್ಯೂ ಫ್ ಇಂಡಿಯಾದ ಹಿರಿಯ ಯೋಜನಾಧಿಕಾರಿ ಲೋಹಿತ್.ವೈ.ಟಿ ಮಾತನಾಡಿ, ನೆರವಾಗಿ ಬಳಸುವ ನೀರನ್ನಷ್ಟೇ ಮಿತವಾಗಿ ಬಳಸಿದರೆ ಸಾಲದು, ನಾವು ಬಳಸುವ ಪ್ರತಿಯೊಂದು ವಸ್ತುಗಳು ಹಾಗು ಆಹಾರದಲ್ಲೂ ನೀರಿನ ಬಳಕೆಯಾಗಿರುತ್ತದೆ. ಹಾಗಾಗಿ ವಸ್ತುಗಳನ್ನು ಮರುಬಳಕೆ ಮಾಡಿಕೊಂಡು, ಆಹಾರವನ್ನು ಚೆಲ್ಲದಿರುವುದೂ ಸಹ ನೀರಿನ ಉಳಿತಾಯವೇ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಡಬ್ಲ್ಯೂ ಡಬ್ಲ್ಯೂ ಫ್ ಸಂಸ್ಥೆಯ ಶಶಿಕಲಾ ಐಯ್ಯರ್, ಶಿಕ್ಷಕರಾದ ಹರೀಶ್, ಸಹ ಶಿಕ್ಷಕರು, ಗ್ರಾಮಸ್ಥರಾದ ಬಾಬ್ಜಾನ್, ಮುನಿಶಾಮಪ್ಪ, ನವೋದಯ ಚಾರಿಟಬಲ್ ಟ್ರಸ್ಟ್ನ ಜನಾರ್ಧನ್.ಆರ್ ಹಾಗೂ ಶಾಲೆಯ 75 ಮಕ್ಕಳು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……