ನ.10ರಂದು ರಾಜ್ಯ ರೈತ ಸಂಘದಿಂದ ದೊಡ್ಡಬಳ್ಳಾಪುರ ತಾಲೂಕು ಕಚೇರಿ ಮುತ್ತಿಗೆ

ದೊಡ್ಡಬಳ್ಳಾಪುರ: ರೈತರಿಗೆ ಮಾಹಿತಿ ಹಾಗೂ ಪರಿಹಾರ ನೀಡದೆ ತಾಲ್ಲೂಕಿನ ತಳಗವಾರ, ಕೋಳೂರು, ಕಂಟನಕುಂಟೆ, ಅರಳುಮಲ್ಲಿಗೆ, ಅಣಗಲಪುರ ಮುಂತಾದ ತಾಲೂಕಿನ ಸುಮಾರು 20 ಗ್ರಾಮಗಳ ಮೂಲಕ ಹಾದು ಹೋಗಿದ್ದ ಅಲ್ಪ ಪ್ರಮಾಣದ ವಿದ್ಯುತ್ ಲೈನ್ಗೆ ಬದಲಾಗಿ ಬೃಹತ್ ಕಂಬಗಳು ಹಾಗೂ ಬಹು ಮಾರ್ಗದ ಲೈನ್ ಅಳವಡಿಸಲು ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ನವೆಂಬರ್ 10ರಂದು ತಾಲೂಕು ಕಚೇರಿ ಮುತ್ತಿಗೆ ಹಾಕಲಾಗುವುದೆಂದು ರೈತ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಸತೀಶ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹಲವಾರು ಕಾರಣಗಳಿಂದಾಗಿ ರೈತರಿಗೆ ಈಗ ಉಳಿದಿರುವುದೇ ತುಂಡು ಭೂಮಿ. ಅಲ್ಪಸ್ವಲ್ಪ ಕೃಷಿ ಭೂಮಿಯಲ್ಲಿ ಬೃಹತ್ ಗಾತ್ರದ ವಿದ್ಯುತ್ ಕಂಬಗಳನ್ನು ಅಳವಡಿಸಿದರೆ ಕೃಷಿ ಮಾಡಲು ಸಾಧ್ಯವೇ ಇಲ್ಲದಾಗಲಿದೆ. ಈ ಕಾಮಗಾರಿ ಕೆಪಿಟಿಸಿಎಲ್ ಮಾಡುತ್ತಿದೆಯೋ, ಗ್ರೀಡ್ ಮಾಡುತ್ತಿದೆಯೋ ಮಾಹಿತಿಯೇ ಇಲ್ಲವಾಗಿದೆ.

ರೈತರಿಗೆ ಯಾವುದೇ ಮಾಹಿತಿ ನೀಡದೆ ಕಂಬಗಳನ್ನು ಅಳವಡಿಸಲು ಗುಂಡಿಗಳನ್ನು ತೋಡಲು ಮುಂದಾಗಿರುವುದು ಖಂಡನಿಯ. ಭೂಮಿ ಕಳೆದುಕೊಳ್ಳುವ ರೈತರಿಗೆ ನಿಯಮದ ಪ್ರಕಾರ ಸೂಕ್ತ ಪರಿಹಾರ ನೀಡದೆ ಹಾಗೂ ರೈತರ ಅನುಮತಿ ಇಲ್ಲದೆ ಜಮೀನಿಗೆ ಪ್ರವೇಶಿಸಿ ಗುರುತು ಮಾಡುತ್ತಿರುವುದು ಖಂಡನೀಯ. ಕಂದಾಯ ಇಲಾಖೆ ಅಧಿಕಾರಿಗಳು ಭೂಮಿ ಸರ್ವೆ ನಡೆಸಿ ಪರಿಹಾರ ನಿಗದಿ ಮಾಡಬೇಕಿದೆ, ಇದನ್ನು ಹೊರತು ಪಡಿಸಿ ಬಲವಂತದಿಂದ ಕಾಮಗಾರಿ ನಡೆಸಲು ಮುಂದಾದರೆ ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಬಚ್ಚಹಳ್ಳಿ ಸತೀಶ್ ಮಾತನಾಡಿ, ಗೌರಿಬಿದನೂರಿನಿಂದ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶ ಮತ್ತು ತೊಂಡೆಬಾವಿಯಿಂದ ದೊಡ್ಡಬಳ್ಳಾಪುರಕ್ಕೆ 220 ರಿಂದ 400ಕೆವಿ ವಿದ್ಯುತ್ ಕಾರಿಡಾರ್ ಮಾರ್ಗಗಳನ್ನು ಮಾಡಲಾಗುತ್ತಿದೆ. ಇದರ ಕುರಿತು ರೈತರಿಗೆ ಮಾಹಿತಿಯೇ ನೀಡದೆ, ಜಮೀನುಗಳಿಗೆ ಅತಿಕ್ರಮ ಪ್ರವೇಶ ಮಾಡಿ ಗುರುತು ಮಾಡುತ್ತಿದ್ದಾರೆ.

ಈ ಮುಂಚೆ ಅಳವಡಿಸಿದ ಕಂಬಗಳಿಂದ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿಲ್ಲ. ನಿಯಮಗಳ ಅನ್ವಯ ಪರಿಹಾರ ನೀಡದೆ ಕಂಬಗಳ ಅಳವಡಿಕೆಗೆ ಮುಂದಾಗಿರುವುದು ಸರಿಯಲ್ಲ, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ, ತಾಲೂಕು ದಂಡಾಧಿಕಾರಿಗಳ ಗಮನ ಸೆಳೆಯಲು ಸುಮಾರು ಒಂದು ಸಾವಿರಕ್ಕೂ ಹೆಚ್ಚು ರೈತರೊಂದಿಗೆ ತಾಲೂಕು ಕಚೇರಿ ಮುತ್ತಿಗೆ ಹಾಕಲಾಗುತ್ತಿದೆ.

ನವೆಂಬರ್ 10ರಂದು ಬೆಳಗ್ಗೆ ನೆಲದಾಂಜನೇಯ ಸ್ವಾಮಿ ದೇವಾಲಯದಿಂದ ಮೆರವಣಿಗೆ ಹೊರಟು ತಾಲೂಕು ಕಚೇರಿ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಈ ವೇಳೆ ರೈತರಾದ ವಿಶ್ವನಾಥ್, ಮೋಹನ್ ಮೂರ್ತಿ, ಗೀತಾ ವಸಂತ್ ಗೌಡ, ಮುನಿಯಪ್ಪ, ಕೆಂಪರಾಜು ಮತ್ತಿತರರಿದ್ದರು…

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……

ರಾಜಕೀಯ

ಖೋಖೋ ವಿಶ್ವಕಪ್; ಎಂ.ಕೆ.ಗೌತಮ್, ಚೈತ್ರಾ ಅವರನ್ನು ಗೌರವಿಸಿದ HDK

ಖೋಖೋ ವಿಶ್ವಕಪ್; ಎಂ.ಕೆ.ಗೌತಮ್, ಚೈತ್ರಾ ಅವರನ್ನು ಗೌರವಿಸಿದ HDK

ಕರ್ನಾಟಕದ ಗರಿಮೆಯನ್ನು ನೀವು ಹೆಚ್ಚಿಸಿದ್ದೀರಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡಿ ಎಂದು ಶುಭ ಹಾರೈಸಿದರು ಸಚಿವರು. HDK

[ccc_my_favorite_select_button post_id="101403"]
ಸುವರ್ಣ ವಿಧಾನಸೌಧ ಆವರಣದಲ್ಲಿ ಮಹಾತ್ಮಾ ಗಾಂಧೀಜಿ ಬೃಹತ್ ಪುತ್ಥಳಿ ಅನಾವರಣ

ಸುವರ್ಣ ವಿಧಾನಸೌಧ ಆವರಣದಲ್ಲಿ ಮಹಾತ್ಮಾ ಗಾಂಧೀಜಿ ಬೃಹತ್ ಪುತ್ಥಳಿ ಅನಾವರಣ

ಸಂವಿಧಾನ‌ ದುರ್ಬಲಗೊಳಿಸುವ ಪ್ರಯತ್ನ ನಿರಂತರವಾಗಿ‌ ನಡೆದಿದೆ. ಅದಕ್ಕೆ‌ ನಾವು ಆಸ್ಪದ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆ ನೀಡಿದರು. Mahatma Gandhi

[ccc_my_favorite_select_button post_id="101384"]
ನಮ್ಮ ಆದ್ಯತೆ ಯಾವುದು..?; ಕರವೇ ರಾಜಘಟ್ಟರವಿ ಬೇಸರ

ನಮ್ಮ ಆದ್ಯತೆ ಯಾವುದು..?; ಕರವೇ ರಾಜಘಟ್ಟರವಿ ಬೇಸರ

ಅರ್ಥ ಆಗುವವರಿಗೆ ಇದಕ್ಕಿಂತ ಹೆಚ್ಚಾಗಿ ಹೇಳಬೇಕಿಲ್ಲ. ಅರ್ಥ ಆಗದವರಿಗೆ ಹೇಳಿ ಪ್ರಯೋಜನವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ‌. monalisa

[ccc_my_favorite_select_button post_id="101378"]

Indian Army Day 2025: ಇತಿಹಾಸ, ಥೀಮ್,

[ccc_my_favorite_select_button post_id="100962"]

Makara jyothi: ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ..

[ccc_my_favorite_select_button post_id="100927"]

Heart attack: ಕರ್ನಾಟಕದ ವೀರ ಯೋಧ ಸಾವು..!

[ccc_my_favorite_select_button post_id="100904"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

Kho kho world cup ಫೈನಲ್‌ನಲ್ಲಿ ಗೆದ್ದು ಬೀಗಿದ ಭಾರತ

Kho kho world cup ಫೈನಲ್‌ನಲ್ಲಿ ಗೆದ್ದು ಬೀಗಿದ ಭಾರತ

ಮೊದಲ ದಿನದಿಂದಲೂ ಭಾರತ ಮಹಿಳಾ ತಂಡ ಚಾಂಪಿಯನ್ ಆಗಲಿದೆ ಎಂಬ ದೊಡ್ಡ ನಿರೀಕ್ಷೆಯಿತ್ತು. Kho kho world cup

[ccc_my_favorite_select_button post_id="101277"]
ಅಶ್ಲೀಲವಾಗಿ ವರ್ತಿಸಿದ ‘ಜೈಲರ್’ ನಟ ವಿನಾಯಕನ್: Video ವೈರಲ್

ಅಶ್ಲೀಲವಾಗಿ ವರ್ತಿಸಿದ ‘ಜೈಲರ್’ ನಟ ವಿನಾಯಕನ್: Video ವೈರಲ್

ವೈರಲ್ ಆಗಿರುವ ವಿಡಿಯೋದಲ್ಲಿ ವಿನಾಯಕನ್ ಅವರು ಮನೆಯ ಬಾಲ್ಕನಿಯಲ್ಲಿ ನಿಂತು ನೆರೆಮನೆಯವರಿಗೆ ಬೈಯ್ದಿದ್ದಾರೆ. Vinayakan

[ccc_my_favorite_select_button post_id="101390"]
FROM DODDABALLAPURA RAILWAY POLICE: ರೈಲಿಗೆ ಸಿಲುಕಿ ಅಪರಿಚಿತ ವೃದ್ಧೆ ದುರ್ಮರಣ

FROM DODDABALLAPURA RAILWAY POLICE: ರೈಲಿಗೆ ಸಿಲುಕಿ ಅಪರಿಚಿತ ವೃದ್ಧೆ ದುರ್ಮರಣ

ಮೃತರ ಚಹರೆ 5.2 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ದುಂಡನೆಯ ಮುಖ, ತಲೆಯಲ್ಲಿ ಸುಮಾರು ಒಂದು ಅಡಿ ಉದ್ದದ ಕಪ್ಪು- ಬಿಳಿ ಮಿಶ್ರಿತ ತಲೆ ಕೂದಲು ಇದ್ದು, Doddaballapura

[ccc_my_favorite_select_button post_id="101334"]

Accident| KSRTC ಬಸ್ ಪಲ್ಟಿ..!| Video

[ccc_my_favorite_select_button post_id="101321"]

ಭೀಕರ ಅಪಘಾತ.. ಚಾಲಕ ಗ್ರೇಟ್ ಎಸ್ಕೇಪ್..!

[ccc_my_favorite_select_button post_id="101304"]

Accident: ತೊಂಡೇಭಾವಿ ಬಳಿ‌ ಮತ್ತೆ ಭೀಕರ ಅಪಘಾತ..

[ccc_my_favorite_select_button post_id="101281"]

ಕರ್ನಾಟಕ – ಆಂಧ್ರ ಬಸ್ ಓವರ್ ಟೇಕ್

[ccc_my_favorite_select_button post_id="101076"]

Doddaballapura: ಭೀಕರ Accident.. 8 ವರ್ಷದ ಮಗು

[ccc_my_favorite_select_button post_id="101037"]

Doddaballapura Accident.. ಯುವ ಛಾಯಾಗ್ರಾಹಕ ಸಾವು, ಖಾಸಗಿ

[ccc_my_favorite_select_button post_id="101034"]

ಆರೋಗ್ಯ

ಸಿನಿಮಾ

Saif Ali Khan ದೇಹದಲ್ಲಿದ್ದ ಚಾಕು ಹೊರ ತೆಗೆದ ವೈದ್ಯರು..!| ಫೋಟೋ ವೈರಲ್

Saif Ali Khan ದೇಹದಲ್ಲಿದ್ದ ಚಾಕು ಹೊರ ತೆಗೆದ ವೈದ್ಯರು..!| ಫೋಟೋ ವೈರಲ್

ಇರಿತಕ್ಕೊಳಗಾದ ಸೈಫ್ ಅಲಿ ಖಾನ್ ದೇಹದಿಂದ ವೈದ್ಯರು ಎರಡೂವರೆ ಇಂಚಿನ ಚಾಕುವನ್ನು ಹೊರತೆಗೆದಿದ್ದಾರೆ. Saif Ali khan

[ccc_my_favorite_select_button post_id="101133"]

Victory venkatesh: ಖ್ಯಾತ ನಟ ವೆಂಕಟೇಶ್‌ಗೆ ಸಂಕಷ್ಟ..

[ccc_my_favorite_select_button post_id="100751"]

Darshan| ಸ್ಮೈಲು ರೇ ಸ್ಮೈಲು ಸ್ಮೈಲು ಬಾಸು..

[ccc_my_favorite_select_button post_id="100613"]

Doctorate: ಖ್ಯಾತ ನಟಿ ತಾರಾ ಸೇರಿ 3

[ccc_my_favorite_select_button post_id="100512"]
error: Content is protected !!