ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆಯಲ್ಲಿ 66ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ವೇಳೆ ಇತ್ತೀಚೆಗೆ ನಿಧನರಾದ ನಟ ಪುನೀತ್ ರಾಜಕುಮಾರ್ ಸವಿನೆನಪಿಗಾಗಿ ಕನ್ನಡ ಧ್ವಜಸ್ತಂಭ ಪ್ರತಿಷ್ಠಾಪಿಸಿ, ಬಸ್ ನಿಲ್ದಾಣಕ್ಕೆ ಅಪ್ಪು ಸರ್ಕಲ್ ಎಂದು ನಾಮಕರಣ ಮಾಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಹಾಗೂ ಪುನೀತ್ ಪುಣ್ಯಸ್ಮರಣೆ ಹಿನ್ನಲೆ ನಟ ಪುನೀತ್ ರಾಜ್‍ಕುಮಾರ್ ಅಭಿಮಾನಿಯಾದ ಬಾಲಕ ಲೋಹಿತ್ ಅವರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಈ ವೇಳೆ ತೂಬಗೆರೆ ಬಸ್ ನಿಲ್ದಾಣಕ್ಕೆ ಅಪ್ಪು ವೃತ್ತ ಎಂದು ಪುನೀತ್ ಅಭಿಮಾನಿಗಳು ನಾಮಕರಣ ಮಾಡಿದರು.
ಈ ವೇಳೆ ಮಾತನಾಡಿದ ಪುನೀತ್ ರಾಜಕುಮಾರ್ ಅಭಿಮಾನಿ ಹಾಗೂ ಯುವ ಮುಖಂಡ ಉದಯ್ ಆರಾಧ್ಯ, ನಮ್ಮೆಲ್ಲರ ಪ್ರೀತಿಯ ಅಪ್ಪು ನಮ್ಮನ್ನಗಲಿ ಆಗಲಿ ಇಂದಿಗೆ 11 ದಿನಗಳು ಕಳೆದಿದೆ. ಆದರೆ ಅವರ ನೆನಪು ನಮ್ಮಲ್ಲಿ ಚಿರಸ್ಮರಣೀಯವಾಗಿರಲೆಂದು ಗ್ರಾಮಸ್ಥರೆಲ್ಲರು ಸೇರಿ ಅಪ್ಪು ಸರ್ಕಲ್ ಎಂದು ನಾಮಕರಣ ಮಾಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು
ಕಾರ್ಯಕ್ರಮದಲ್ಲಿ ಆಟೋ ಚಾಲಕರು, ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು, ಊರಿನ ಮುಖಂಡರುಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….