ದೊಡ್ಡಬಳ್ಳಾಪುರ: ಮನಸ್ಸು ಸ್ಥಿರವಾಗಿರಬೇಕಾದರೆ ಏಕಾಗ್ರತೆ ಬೇಕು. ಅದು ಯೋಗ ಮತ್ತು ಧ್ಯಾನದಿಂದ ಮಾತ್ರ ಸಾಧ್ಯ. ಏಕಾಗ್ರತೆಯಿಂದ ನಾವು ಅಸಾಧ್ಯವಾದದ್ದನ್ನು ಸಾಧಿಸುವ ಶಕ್ತಿ ಯೋಗ, ಧ್ಯಾನದಿಂದ ಸಿಗುತ್ತದೆ. ಕಾರಣ ನಿತ್ಯ ಒಂದು ಗಂಟೆ ಸಮಯವನ್ನು ಯೋಗ, ಧ್ಯಾನಕ್ಕೆ ಮೀಸಲಿಡಿ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಬಸವರಾಜ ಶಂಕರ್ ಉಮರಾಣಿ ಸಲಹೆ ನೀಡಿದರು.
ತಾಲೂಕಿನ ಆರೂಢಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಪಾಠ ಶಾಲೆ ಹಾಗೂ ಅನುದಾನಿತ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ತಮ್ಮ ಅಘಾದ ನೆನಪಿನ ಶಕ್ತಿಯಿಂದ ಲೆಕ್ಕಗಳನ್ನು ಮಾಡಿ ತೋರಿಸಿ ಮಕ್ಕಳ ಸೆಳೆದ ಅವರು ಯೋಗ, ಧ್ಯಾನ ಮಾಡುವುದರಿಂದ ಏಕಾಗ್ರತೆ, ಮಾನಸಿಕ ನೆಮ್ಮದಿ, ಆತ್ಮವಿಶ್ವಾಸ ಹೆಚ್ಚುತ್ತದೆ. ಭಯ ನಿವಾರಣೆಯಾಗುತ್ತದೆ.
ವಿದ್ಯಾರ್ಥಿಗಳಿಗೆ ಧಾರಾವಾಹಿಗಳಲ್ಲಿ ನೋಡಿರುವುದು ನೆನಪಿನಲ್ಲಿರುತ್ತದೆ. ಆದರೆ, ಹಿಂದಿನ ದಿನ ಶಾಲೆಯಲ್ಲಿ ಬೋಧಿಸಿದ ಪಾಠ ನೆನಪಿನಲ್ಲಿರುವುದಿಲ್ಲ. ವಿದ್ಯಾರ್ಥಿಗಳು ಟಿವಿ, ಮೊಬೈಲ್‌ಗಳನ್ನು ಬಳಸಬಾರದು. ಮಾನಸಿಕವಾಗಿ, ದೈಹಿಕವಾಗಿ ತರಗತಿಯಲ್ಲಿದ್ದು ವಿಷಯಗಳನ್ನು ಅರ್ಥೈಸಿಕೊಳ್ಳಬೇಕು. ಪ್ರಯತ್ನ ಮಾಡಿದಾಗ ಫಲ ದೊರಕುತ್ತದೆ. ಪ್ರಯತ್ನ ಮನುಷ್ಯನನ್ನು ಪರಿಪೂರ್ಣ ವ್ಯಕ್ತಿಯಾಗಿಸುತ್ತದೆ. ಸಕಾರಾತ್ಮಕವಾಗಿ ಯೋಚಿಸಿದಾಗ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕರಾದ ಸಿದ್ದರಾಮಯ್ಯ, ಸುದರ್ಶನ್ ಬಾಬು, ತಪೋವನ ಸಂಸ್ಥೆಯ ಶಿವಕೀರ್ತಿ, ವಿದ್ಯಾಧಾರೆ ಗೆಳೆಯರ ಬಳಗದ ರೇಣುಗೋಪಾಲ್, ಎ.ಸಿ.ಹರೀಶ್, ಸಹ ಶಿಕ್ಷಕರಾದ ಎಂ.ಎನ್.ರಾಜಣ್ಣ, ಅರುಣ್ ಕುಮಾರ್, ಪ್ರೇಮ್ ಕುಮಾರ್, ಶ್ರೀನಿವಾಸ್, ಜಿ.ರಾಜಣ್ಣ, ಬರಗೂರು ನರಸಿಂಹಮೂರ್ತಿ, ಗೋಪಾಲ್ ನಾಯಕ್, ಸಿದ್ದಲಿಂಗಯ್ಯ, ಓಬಣ್ಣ, ಮೋಹನ, ಅತಿಥಿ ಶಿಕ್ಷಕರಾದ ಶಶಿಕುಮಾರ್ ಆರ್.ನರಸಿಂಹಮೂರ್ತಿ, ರೂಪ, ಕೆ.ಪದ್ಮಾವತಿ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……