ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕಾರ್ಯ ಕಲಾಪಗಳ ಕಚೇರಿ ದೊಡ್ಡಬಳ್ಳಾಪುರದಲ್ಲಿ ಆರಂಭಿಸಲಾಗಿದೆ.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರಾಮು ಜೋಗಿಹಳ್ಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಟರಾಜ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾಲಕ್ಷ್ಮೀ ಅವರು ರೋಜಿಪುರದಲ್ಲಿ ನೂತನ ಕಚೇರಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ರಾಮು ಜೋಗಿಹಳ್ಳಿ, ಗ್ರಾಮಾಂತರ ಜಿಲ್ಲೆಗೊಂದು ಪ್ರತ್ಯೇಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಗತ್ಯತೆ ಬಹಳ ದಿನಗಳಿಂದ ಇತ್ತು. ಸ್ವಂತ ಕಚೇರಿ ಇಲ್ಲದಿದ್ದ ಕಾರಣ ಸಮಿತಿಯ ಕಾರ್ಯಕಲಾಪಗಳು ಜಿಲ್ಲೆಯ ನಾಲ್ಕು ತಾಲೂಕುಗಳ ಎನ್‌ಜಿಓಗಳಲ್ಲಿ ನಡೆಯುತ್ತಿದ್ದವು. ಇದೀಗ, ಈ ಸಮಸ್ಯೆ ಬಗೆಹರಿದಿದ್ದು ಇನ್ನು ಮುಂದೆ ಸಮಿತಿಯ ಕಚೇರಿಯಲ್ಲಿಯೇ ನಡೆಸಲಾಗುತ್ತದೆ ಎಂದು ತಿಳಿಸಿದರು.
ಕಚೇರಿಯಲ್ಲಿ ನಾಲ್ಕು ತಾಲೂಕುಗಳಲ್ಲಿ ರಕ್ಷಿಸಲ್ಪಟ್ಟ ಮಕ್ಕಳನ್ನು ಹಾಜರುಪಡಿಸುವುದು, ವಿಚಾರಣೆ, ಅವರ ಪೋಷಣೆ ಜವಾಬ್ದಾರಿ, ಕಾನೂನು ಸಂಬಂಧಿತ ಕಾರ್ಯಕಲಾಪಗಳನ್ನು ಸಮಿತಿಯಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಶಿವಪ್ಪ ಎಂ, ಶ್ರೀಧರ್ ಯಾದವ್, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಮುತ್ತುರಾಜ್, ಬಸವರಾಜ್, ಭಾರತಿ, ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಮಂಜುನಾಥ್, ಸ್ನೇಹಭಾರತಿ ಟ್ರಸ್ಟ್‌ನ ಉಷಾರಾಣಿ, ಅಧೀಕ್ಷಕರಾದ ಮುನಿರಾಜು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಸಿಬ್ಬಂದಿ ಗಳಾದ ಗಜಪತಿ, ಲಕ್ಷ್ಮಿ ಉಪಸ್ಥಿತರಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….