ದೊಡ್ಡಬಳ್ಳಾಪುರ: ನಿರಂತರ ಮಳೆ ತಾಲೂಕಿನ ಜನರನ್ನು ಕಂಗಾಲು ಮಾಡಿದೆ. ಅದರಲ್ಲೂ ಅಕಾಲಿಕ ಮಳೆಯಿಂದಾಗಿ ರೈತನ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಕೈಗೆ ಬಂದ ಫಸಲು ಇದೀಗ ಮಳೆ ಪಾಲಾಗಿದ್ದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಈ ವೇಳೆಗಾಗಲೇ ಮಳೆ ನಿಂತೋಗಿ ಚಳಿ ಆರಂಭವಾಗಬೇಕಿತ್ತು, ಬಿಸಿಲು ಜೋರಾಗಬೇಕಿತ್ತು. ಆದರೆ ಮಳೆಯೇ ನಿಂತಿಲ್ಲ. ವಾಯುಭಾರ ಕುಸಿತದಿಂದಾಗಿ ತಾಲೂಕು ಸೇರಿದಂತೆ ರಾಜ್ಯದೆಲ್ಲೆಡೆ ಮಳೆ ಆಗುತ್ತಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದರಿಂದ ಇನ್ನೂ ನಾಲ್ಕು ದಿನಗಳ ಕಾಲ ಅಬ್ಬರದ ಮಳೆ ಸುರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
21 ವರ್ಷದ ನಂತರ ತುಂಬಿದ ಕೆರೆ: ಸತತ ಮಳೆಯಿಂದಾಗಿ ತಾಲೂಕಿನ ಬೀಡಿಕೆರೆ ಕೆರೆ ತುಂಬಿ ಕೋಡಿ ಹರಿದಿದ್ದು ಗ್ರಾಮಸ್ಥರಲ್ಲಿ ಹರ್ಷಕ್ಕೆ ಕಾರಣವಾಗಿದ್ದು, ಕೋಡಿ ಹರಿಯುತ್ತಿರುವ ನೀರಿನಲ್ಲಿ ಮಹಿಳೆಯರು, ಮಕ್ಕಳು ಸಂಭ್ರಮಿಸುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……