ದೊಡ್ಡಬಳ್ಳಾಪುರ: ಲೈನ್‌ಮ್ಯಾನ್ ಒಬ್ಬರು ತುಂಬಿದ ಕೆರೆಯ ಮಧ್ಯೆ ಇದ್ದ ಜೋಡಿ ವಿದ್ಯುತ್ ಕಂಬದ ಎಲ್.ಟಿ ಡಿಸ್ಟ್ರಿಬ್ಯೂಷನ್ ಬಾಕ್ಸ್‌ನಿಂದ ಫ್ಯೂಸ್ ತೆಗೆಯುವ ಮೂಲಕ ಮುಂದಾಗಬಹುದಾಗಿದ್ದ ಅವಘಡ ತಪ್ಪಿಸಿದ್ದಾರೆ.
ಅರೇಹಳ್ಳಿ ಗುಡ್ಡದಹಳ್ಳಿ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಪೂರೈಕೆಗಾಗಿ ಕೆರೆಯಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಸಲಾಗಿತ್ತು. ಆದರೆ ನಿರಂತರ ಮಳೆಯಿಂದ ತಾಲೂಕಿನ ಕೆರೆ ತುಂಬಿದೆ.
ಕೆರೆಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದಂತೆ ಎಲ್.ಟಿ ಡಿಸ್ಟ್ರಿಬ್ಯೂಷನ್ ಬಾಕ್ಸ್ ಮುಳುಗುವ ಹಂತದಲ್ಲಿತ್ತು. ಒಂದು ವೇಳೆ ಬಾಕ್ಸ್ ಮುಳುಗಿದ್ದರೆ ಬಹುದೊಡ್ಡ ಅನಾಹುತಕ್ಕೆ ಕಾರಣವಾಗುತ್ತಿತ್ತು.
ಈ ಗಂಭೀರತೆ ಅರಿತ ಲೈನ್‌ಮ್ಯಾನ್ ನೂತನ್ ಪ್ರಸಾದ್ ನೀರಿನಿಂದ ಆವೃತವಾಗಿದ್ದ ಕೆರೆಯಲ್ಲಿದ್ದ ಟಿ.ಸಿ ಬಳಿಗೆ ತೆರಳಿ ಪ್ಲಾಸ್ಟಿಕ್ ಪೈಪ್ ಮೂಲಕ ಡೋಲೋ ಫ್ಯೂಸ್ ಅನ್ನು ತೆಗೆದು ಹಾಕಿದರು.
ಇದರಿಂದ ಸಂಭವಿಸಬಹುದಾದ ಅವಘಡವನ್ನು ತಪ್ಪಿಸಿದರು. ಲೈನ್‌ಮ್ಯಾನ್ ಕಾರ್ಯಕ್ಕೆ ಬೆಸ್ಕಾಂ ಎಇಇ ಇಲಾಖೆಯ ರೋಹಿತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……