ದೊಡ್ಡಬಳ್ಳಾಪುರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎನ್.ಶ್ರೀನಿವಾಸಯ್ಯ ಮಾತನಾಡಿ, ದೇಶದಲ್ಲಿನ ರಾಜಕೀಯ, ಸಾಮಾಜಿಕ ಬದಲಾವಣೆಗಳಲ್ಲಿ ಸಂವಿಧಾನದ ಪಾತ್ರ ಮಹತ್ವದ್ದಾಗಿದೆ. ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಅಕಾರ ಯಾವುದೇ ಸರ್ಕಾರಕ್ಕೂ ಸಹ ಇಲ್ಲ.ತಮ್ಮ ಹಕ್ಕುಗಳಿಗೆ ಚ್ಯುತಿ ಬಂದರೆ ಪ್ರಶ್ನಿಸುವ ಅಕಾರ ಪ್ರತಿಯೊಬ್ಬರಿಗೂ ಇದೆ. ನಮ್ಮ ಹಕ್ಕು ಬಾದ್ಯತೆಗಳನ್ನು ಸೂಚಿಸುವ ಹಾಗೂ ದಕ್ಕೆ ಬಂದರೆ ನ್ಯಾಯ ಒದಗಿಸುವ ಸಂವಿಧಾನವನ್ನು ನಾವು ಗೌರವಿಸವ ಮೂಲಕ ಅದರ ಆಶಯಗಳಿಗೆ ದಕ್ಕೆ ಬಾರದಂತೆ ನೋಡಿಕೊಳ್ಳಬೇಕಿದೆ. ಸಂವಿಧಾನ ದಿನಾಚರಣೆಯನ್ನು ಹಬ್ಬದ ರೀತಿ ಆಚರಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಎಂ.ಎನ್.ಸುರೇಶ್ ಕುಮಾರ್, ಡಾ.ಪ್ರಕಾಶ್ ಮಂಟೆದ, ಡಾ.ನಾಗರಾಜ್, ಎಲ್.ದಿನಕರ್ ಮಾತನಾಡಿ, ಸಂವಿಧಾನ ಹಾಗೂ ಮತದಾನದ ಮಹತ್ವದ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ನರಸಿಂಹಮೂರ್ತಿ, ಡಾ.ಮಹಮದ್ ಮನ್ಸೂರ್ ಹುಸೇನ್, ಪ್ರೊ.ಎಸ್.ರಾಜೇಶ್, ಡಾ.ಎಮ್.ಸತೀಶ್, ಕಲ್ಯಾಣರಾಜು, ರಂಗಸ್ವಾಮಿ, ಸಿ.ರಾಮಚಂದ್ರಯ್ಯಭಾಗವಹಿಸಿದ್ದರು.
ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……