ಬೆಂ.ಗ್ರಾ.ಜಿಲ್ಲೆ: 2021-22 ನೇ ಸಾಲಿಗೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಸಂಕಷ್ಟದಲ್ಲಿರುವ ವಿದ್ಯುತ್‍ಮಗ್ಗ ನೇಕಾರರಿಗೆ, ವಿದ್ಯುತ್ ಚಾಲಿತ ಘಟಕ (ಮಗ್ಗ)ಗಳಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಕೂಲಿ ಕಾರ್ಮಿಕರಿಗೆ ಒಂದು ಬಾರಿ ತಲಾ ರೂ. 3000/-ಗಳ ಆರ್ಥಿಕ ಬೆಂಬಲವನ್ನು ನೀಡಲು ಯೋಜನೆ ಜಾರಿಗೊಳಿಸಲಾಗಿದ್ದು, ಪರಿಹಾರಧನ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲು ನೇಕಾರರು ತಮ್ಮ ಆಧಾರ್ ಸಂಖ್ಯೆಯನ್ನು ಎನ್.ಪಿ.ಸಿ.ಐ. ಗೆ ಸೀಡ್/ ಮ್ಯಾಪಿಂಗ್ (ಜೋಡಣೆ) ಮಾಡಿಸಿ, ಖಾತೆಯು ವಹಿವಾಟಿನೊಂದಿಗೆ ಚಾಲ್ತಿಯಲ್ಲಿರಬೇಕು.
ಈಗಾಗಲೇ ಅರ್ಹತೆ ಹೊಂದಿರುವ ನೇಕಾರರಿಗೆ ನೇರವಾಗಿ ಡಿಬಿಟಿ ಮೂಲಕ ಆಧಾರ್ ಕಾರ್ಡ್ ಜೋಡಣೆಯಾದ ಬ್ಯಾಂಕ್ ಖಾತೆಗಳಿಗೆ ಪರಿಹಾರಧನವನ್ನು ಜಮೆ ಮಾಡಲಾಗಿದ್ದು, ನೇಕಾರರ ಆಧಾರ್ ಸಂಖ್ಯೆಯನ್ನು ಎನ್.ಪಿ.ಸಿ.ಐ. ಗೆ ಸೀಡ್/ ಮ್ಯಾಪಿಂಗ್(ಜೋಡಣೆ) ಮಾಡಿಕೊಳ್ಳದ ಹಾಗೂ ಕಳೆದ ಮೂರು ತಿಂಗಳಿನಿಂದ ಬ್ಯಾಂಕ್ ಖಾತೆಗಳಲ್ಲಿ ವಹಿವಾಟು ನಡೆಸದೆ ಇನ್ ಆಕ್ಟೀವ್ ಆಗಿರುವ, ಆಧಾರ್‍ನಲ್ಲಿ ಹೆಸರು ಮತ್ತು ವಿಳಾಸದಲ್ಲಿ ಬದಲಾವಣೆ / ಅಪ್ ಡೇಟ್ ಮಾಡಿಕೊಂಡಿರುವ ನೇಕಾರರಿಗೂ ತಲಾ ರೂ.3000/-ಗಳ ಪರಿಹಾರಧನ ಮಂಜೂರಾಗಿದ್ದರೂ, ಫಲಾನುಭವಿಗಳ ಖಾತೆಗೆ ಜಮೆಯಾಗಿರುವುದಿಲ್ಲ.
ಆದುದರಿಂದ ಪರಿಹಾರ ಧನ ಜಮೆಯಾಗದಿರುವ ನೇಕಾರರು ಖುದ್ದು ತಮ್ಮ ಬ್ಯಾಂಕ್‍ಗಳಿಗೆ ಸಂಪರ್ಕಿಸಿ, ಆಧಾರ್ ಸಂಖ್ಯೆಯನ್ನು ಡಿಬಿಟಿ ಸಲುವಾಗಿ ಎನ್.ಪಿ.ಸಿ.ಐ. ಗೆ ಮ್ಯಾಪಿಂಗ್ (ಜೋಡಣೆ)ಅನ್ನು ಡಿಸೆಂಬರ್ 15ರೊಳಗೆ ಮಾಡಿಸಿ, ಖಾತೆಗಳನ್ನು ವಹಿವಾಟಿನೊಂದಿಗೆ ಚಾಲ್ತಿಯಲ್ಲಿರಿಸಬೇಕು. ತಪ್ಪಿದ್ದಲ್ಲಿ, ಮಂಜೂರಾಗಿರುವ ಮೊತ್ತವು ಸ್ವಯಂ ಚಾಲಿತವಾಗಿ ತಿರಸ್ಕೃತವಾಗುವುದು.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಗಾಮೆರ್ಂಟ್ಸ್ ತರಬೇತಿ ಕೇಂದ್ರದ ಕಟ್ಟಡ, ಕೆಐಎಡಿಬಿ ಅಪೇರಲ್ ಪಾರ್ಕ್, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ-561203 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ನಿರ್ದೇಶಕರಾದ ಸೌಮ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….