ಮೇಷ: ಈ ರಾಶಿಯವರು ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ಸರ್ಕಾರಿ ಕೆಲಸದವರಿಗೆ ಶಾಂತಿ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನದ ಅವಕಾಶವಿದೆ. ಹಣದ ಒಲಹರಿವು ಸಾಮಾನ್ಯವಾಗಿರುತ್ತದೆ. ಪ್ರಾಮಾಣಿಕತೆಯಿಂದ ಒಳ್ಳೆಯ ಹೆಸರು ಪಡೆಯುವಿರಿ.
ವೃಷಭ: ಈ ರಾಶಿಯವರ ದೈನಂದಿನ ಕೆಲಸಗಳು ಯಶಸ್ವಿಯಾಗಿ ನಡೆಯುತ್ತವೆ. ಮಕ್ಕಳಿಂದ ಆರ್ಥಿಕ ಸಹಕಾರ ಸಿಗಲಿದೆ. ತಾಯಿ ಮಗನ ಸಂಬಂಧ ಬಹಳ ಗಟ್ಟಿಯಾಗಿರುತ್ತೆ. ಹಣಕಾಸಿನ ಸ್ಥಿತಿಯು ಮಾಧ್ಯಮವಾಗಿರುತ್ತದೆ.
ಮಿಥುನ: ಈ ರಾಶಿಯವರಿಗೆ ಕೆಲಸ ಕಾರ್ಯದಲ್ಲಿ ನಿಮ್ಮ ದ್ವಂದ್ವ ನಿರ್ಧಾರದಿಂದ ಹಿನ್ನಡೆಯಾಗಲಿದೆ. ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಫಲವಿದೆ. ಯಂತ್ರೋಪಕರಣಗಳ ದುರಸ್ಥಿಗಾಗಿ ಹೆಚ್ಚು ಹಣ ಖರ್ಚಾಗುವ ಸಂಭವವಿದೆ. ವಿದ್ವಾಂಸರಿಗೆ ಗೌರವ ಸಮರ್ಪಣೆ ದೊರೆಯುತ್ತದೆ.
ಕಟಕ: ಈ ರಾಶಿಯವರು ಕ್ರೀಡಾ ಕ್ಷೇತ್ರದಲ್ಲಿಬಿಡುವಿಲ್ಲದ ಕೆಲಸದಿಂದಾಗಿ ಅರೋಗ್ಯ ಸ್ಥಿತಿ ಏರುಪೇರಾಗಲಿದೆ. ಗೃಹನಿರ್ಮಾಣ ಕಾರ್ಯಗಳು ಯಶಸ್ವಿಯಾಗುತ್ತದೆ. ವಿದೇಶಿ ವ್ಯವಹಾರದಲ್ಲಿ ಮುನ್ನಡೆ. ಅಕ್ಕಿ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರ.
ಸಿಂಹ: ಈ ರಾಶಿಯವರಿಗೆ ವಾಹನ ಖರೀದಿ ಯೋಗವಿದೆ. ಕಳೆದುಹೋದ ದಿನಗಳ ಬಗ್ಗೆ ಚಿಂತಿಸಬೇಡಿ. ಆರ್ಥಿಕ ಅಭಿರುದ್ದಿಯಲ್ಲಿ ಸ್ವಲ್ಪ ಅಡೆತಡೆಗಳಿವೆ.
ಕನ್ಯಾ: ಈ ರಾಶಿಯವರಿಗೆ ಇಂದು ಶುಭದಿನ. ಸರ್ಕಾರಿ ಕೆಲಸದಲ್ಲಿ ಪ್ರಗತಿಯಿದೆ. ಭೂ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದೆ. ಹೆಚ್ಚಿನ ನೆಮ್ಮದಿದೆ ನಿಮ್ಮ ಮನೆದೇವರಲ್ಲಿ ಪ್ರಾರ್ಥಿಸಿ.
ತುಲಾ: ಈ ರಾಶಿಯವರಿಗೆ ಆತ್ಮ ಸ್ಟೈರ್ಯ ಹೆಚ್ಚಿರುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಸಗಟು ಧಾನ್ಯ ವ್ಯಾಪಾರಿಗಳು ಹೆಚ್ಚಿನ ಲಾಭ ನಿರೀಕ್ಷಿಸಬಹುದು. ಸ್ನೇಹಿತರಿಂದ ಸಹಾಯ ದೊರೆಯಲಿದೆ.
ವೃಶ್ಚಿಕ: ಈ ರಾಶಿಯವರು ಕಠಿಣ ಪರಿಶ್ರಮದಿಂದ ಸಂಪೂರ್ಣ ಲಾಭ ಪಡೆಯುವಿರಿ. ಆಭರಣ ತಯಾರಕರಿಗೆ ಒಳ್ಳೆಯ ಲಾಭವಿದೆ. ರಾಜಕೀಯದಲ್ಲಿರುವವರಿಗೆ ಉನ್ನತ ಸ್ಥಾನ ಲಭ್ಯವಾಗಲಿದೆ.
ಧನಸ್ಸು: ಈ ರಾಶಿಯವರಿಗೆ ಇಂದು ಎಲ್ಲಾ ಸರ್ಕಾರಿ ಕಚೇರಿಯ ಕೆಲಸಗಳು ಮುಗಿಯುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಭರ್ಜರಿ ಬದಲಾವಣೆ ನಿರೀಕ್ಷಿಸಬಹುದು.
ಮಕರ: ಈ ರಾಶಿಯವರು ಪತ್ರಿಕಾ ರಂಗ, ಮುದ್ರಣಾಲಯ ಉದ್ಯಮದಲ್ಲಿ ಸಂಚಲನ ಮೂಡಲಿದೆ. ರಾಜಕೀಯ ವ್ಯಕ್ತಿಗಳು ತಮ್ಮ ಅಧಿಕಾರಕ್ಕಾಗಿ ಹೋರಾಟ ಮಾಡಬೇಕಾದ ಸಂದರ್ಭ ಎದುರಾಗಲಿದೆ.
ಕುಂಭ: ಈ ರಾಶಿಯವರು ಕೈಗೊಂಡ ಕಾರ್ಯದಲ್ಲಿ ಯಶಸ್ಸುಸಿಗಲಿದೆ. ಕೋರ್ಟ್ ನಲ್ಲಿ ಪರವಾಗಿ ತೀರ್ಪು ಬರುವ ಸಾಧ್ಯತೆ ಹೆಚ್ಚು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಯಿದೆ. ಸಹೋದರರಿಂದ ಮನಸ್ತಾಪ ಉಂಟಾಗುವ ಎಲ್ಲಾ ಲಕ್ಷಣ ಕಂಡುಬರುತ್ತದೆ.
ಮೀನ: ಈ ರಾಶಿಯವರು ಬಹಳ ಎಚ್ಚರದಿಂದಿರಬೇಕು. ನಂಬಿದವರಿಂದಲೇ ಮೋಸ ಹೋಗುವ ಸಾಧ್ಯತೆ ಹೆಚ್ಚು. ಮೀನುಗಾರಿಕೆ, ಹೈನುಗಾರಿಕೆ, ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಹೆಚ್ಚಿನ ಲಾಭ.
ಮಾಸ: ಮಾರ್ಗಶಿರ ಮಾಸ
ಪಕ್ಷ: ಶುಕ್ಲ ಪಕ್ಷ
ತಿಥಿ: ದ್ವಿತೀಯ
ನಕ್ಷತ್ರ: ಮೂಲ ನಕ್ಷತ್ರ
ರಾಹುಕಾಲ: 07:56 ರಿಂದ 09:22
ಗುಳಿಕಕಾಲ: 01:40 ರಿಂದ 03:06
ಯಮಗಂಡಕಾಲ: 10:48 ರಿಂದ 12:14
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್. ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು. ಮೊ:9620445122
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….