ತಿರುವನಂತಪುರಂ: ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಅವರು ಇತ್ತೀಚೆಗೆ ಇಸ್ಲಾಮ್ ತೊರೆದು ಸನಾತನ ಧರ್ಮಾನುಯಾಗಿ ಪರ್ವರ್ತನೆಗೊಂಡಿದ್ದರು. ಈಗ ಅದೇ ಹಾದಿಯಲ್ಲಿದ್ದಾರೆ ಖ್ಯಾತ ನಿರ್ದೇಶಕ ಅಲಿ ಅಕ್ಬರ್.
ಅಲಿ ಅಕ್ಬರ್ ಅವರ ಈ ನಿರ್ಧಾರಕ್ಕೆ ಕಾರಣ ಸಿಡಿಎಸ್ ಬಿಪಿನ್ ರಾವತ್ ಅವರ ದುರ್ಮರಣಕ್ಕೆ ಕೆಲವು ಮುಸ್ಲಿಮರು ಸಂತಸ, ನಗುವಿನ ಎಮೋಜಿ ಹಾಕಿ ಸಂಭ್ರಮಿಸಿರುವುದಾಗಿದೆ.
ಸಿಡಿಎಸ್ ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸಿದ್ದ ದೇಶವಿರೋಧಿ ಮುಸ್ಲಿಮರ ನಡೆಯನ್ನು ಸಮುದಾಯದ ಯಾವುದೇ ಓರ್ವ ನಾಯಕನೂ ಖಂಡಿಸಿಲ್ಲ. ಆದ್ದರಿಂದ ಇಸ್ಲಾಮ್ ಧರ್ಮದಲ್ಲಿ ನನಗೆ ನಂಬಿಕೆ ಹೋಗಿದೆ. ನನ್ನ ಕುಟುಂಬ ಸಮೇತವಾಗಿ ಇಸ್ಲಾಂ ತೊರೆಯುತ್ತಿದ್ದೇವೆ ನಾವಿನ್ನು ಭಾರತೀಯರು ಎಂದು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡಿಯೋ ಮೂಲಕ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….