ಬೆಳಗಾವಿ: ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ವಾಪಸ್ ಇಲ್ಲ ಎಂದು ಸಹಕಾರ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಕಾಯ್ದೆಯಿಂದ ರೈತರಿಗೆ ಯಾವುದೇ ಅನಾನುಕೂಲ ಇಲ್ಲ. ರೈತರು ಎಲ್ಲಿ ಬೇಕಾದ್ರು ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡಲು ಈ ಕಾಯ್ದೆಯಲ್ಲಿ ಅವಕಾಶ ಇರುತ್ತೆ. ಇದರಿಂದ ರೈತನಿಗೆ ಅನುಕೂಲ ಆಗುತ್ತೆ. ಈ ಮೊದಲು ಎಪಿಎಂಸಿ ಬಿಟ್ಟು ಹೊರಗೆ ಮಾರಾಟ ಮಾಡಿದ್ರೆ ದಂಡ, ಜೈಲು ಶಿಕ್ಷೆ ಇತ್ತು. ಈಗ ಹೊಸ ಕಾಯ್ದೆಯಲ್ಲಿ ಅದನ್ನ ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ರೈತ ತಾನು ಬೆಳೆದ ಬೆಳೆ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಇದರಿಂದ ರೈತರಿಗೆ ಯಾವುದೇ ಧಕ್ಕೆ ಆಗುವುದಿಲ್ಲ. ಹೀಗಾಗಿ ಎಪಿಎಂಸಿ ಕಾಯ್ದೆ ವಾಪಸ್ ಪಡೆಯೊಲ್ಲ. ಎಪಿಎಂಸಿಗಳನ್ನ ಯಾವುದೇ ಕಾರಣಕ್ಕೂ ಮುಚ್ಚೋದಿಲ್ಲ. ಎಪಿಎಂಸಿ ಲಾಭದಲ್ಲಿ ನಡೆಯುತ್ತಿದೆ. ಲಾಭದಿಂದ ನಡೆಯೋ ಸಂಸ್ಥೆಯನ್ನ ಏಕೆ ಮುಚ್ಚೋಣ? ಎಂದವರು ಪ್ರಶ್ನಿಸಿದ್ದಾರೆಂದು ವರದಿ ತಿಳಿಸಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….