ದೊಡ್ಡಬಳ್ಳಾಪುರ: ಆರ್ಥಿಕವಾಗಿ ಹಿಂದಳಿದವರಿಗೆ ಕನಿಷ್ಠ ದಾಖಲೆಗಳೊಂದಿಗೆ ಸಾಲ ಸೌಲಭ್ಯ ನೀಡುವ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ನೆರವಾಗಲಾಗುತ್ತಿದೆ ಎಂದು ವೀರಶೈವ ಲಿಂಗಾಯತ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪುಟ್ಟಬಸವರಾಜು ಹೇಳಿದರು.
ಅವರು ನಗರದಲ್ಲಿ ಸೋಮವಾರ ನಡೆದ ವೀರಶೈವ ಲಿಂಗಾಯತ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋವಿಡ್ ಕಾರಣದಿಂದಾಗಿ ಸಂಘದ ಆರ್ಥಿಕ ಚಟುವಟಿಕೆಗಳ ವಹಿವಾಟು ಕಡಿಮೆಯಾಗಿತ್ತು. ಈ ವರ್ಷ ಸಂಘದ ಆರ್ಥಿಕ ವಹಿವಾಟು ಚುರುಕುಗೊಂಡಿದ್ದು ₹2 ಲಕ್ಷದವರೆಗೂ ವಯಕ್ತಿಕ ಸಾಲ ಸೌಲಭ್ಯ ನೀಡಲಾಗುವುದು. ಇತರೆ ರಾಷ್ಟ್ರೀಕೃತ ಬ್ಯಾಂಕುಗಳಿಂಗಿತಲು ಕಡಿಮೆ ಬಡ್ಡಿ ವಿಧಿಸಲಾಗುತ್ತಿದೆ.ಇದಲ್ಲದೆ ಸಂಘದಲ್ಲಿ ಹಣ ಠೇವಣಿ ಮಾಡುವ ಹಿರಿಯ ನಾಗರೀಕರಿಗೆ ಹೆಚ್ಚಿನ ಬಡ್ಡಿ ನೀಡಲಾಗುವುದು ಎಂದರು.
ಸಂಘದ ನಿರ್ದೇಶಕ ಸಿ.ಜಯಣ್ಣ ಮಾತನಾಡಿ, ಸಂಘದಲ್ಲಿ ಷೇರು ಹೊಂದಿರುವವರು ಮರಣ ಹೊಂದಿದರೆ ಆರ್ಥಿಕ ನೆರವು ನೀಡುವ ಯೋಜನೆಗಾಗಿ ಮರಣ ನಿಧಿಯನ್ನು ಆರಂಭಿಸಲಾಗಿದೆ. ಪ್ರತಿ ಷೇರುದಾರರು ಈ ನಿಧಿಗೆ ರೂ200 ಗಳನ್ನು ಪಾವತಿಸಬೇಕಾಗಿದೆ. ಸಂಘದಲ್ಲಿ ಹೆಚ್ಚಿನ ಜನ ಷೇರುದಾರರನ್ನು ನೋಂದಣಿ ಮಾಡಿಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ಸದಸ್ಯರು ಸಲಹೆ ನೀಡಿದರು. ಸರ್ವ ಸದಸ್ಯರ ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಸವರಾಜಯ್ಯ, ಮುಖಂಡರಾದ ಟಿ.ರುದ್ರಪ್ಪ, ನಿರ್ದೇಶಕರಾದ ಎನ್.ಜಿ.ಪ್ರಸಾದ್, ಎಂ.ಮುನಿರಾಜು, ಪ್ರಕಾಶ್ ಬಾಬು, ವಿ.ಸಿ.ಜ್ಯೋತಿಕುಮಾರ್, ಎಂ.ದೇವರಾಜ್, ಎ.ಎಸ್.ಮುದ್ದಗಂಗಯ್ಯ, ಎಂ.ಸುಜಾತ, ಡಿ.ಪಿ.ಭವ್ಯ, ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಎನ್.ಎಲ್. ಶರತ್ ಬಾಬು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….