ಬೆಳಗಾವಿ: ಹಿಂದುಗಳ ಪವಿತ್ರ ಸ್ಥಳ ಮಾನಸಸರೋವರ ಯಾತ್ರೆಗೆ ಸರ್ಕಾರ ನೀಡುತ್ತಿರುವ 30 ಸಾವಿರ ರೂ.ಗಳ ಅನುದಾನವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಮುಜರಾಯಿ ಸಚಿವೆ ಶಶಿಕಲ ಜೊಲ್ಲೇ ಭರವಸೆ ನೀಡಿದ್ದಾರೆ.
ಕೋವಿಡ್‍ನಿಂದಾಗಿ ಎರಡು ವರ್ಷಗಳಿಂದ ಯಾತ್ರೆ ನಡೆದಿಲ್ಲ. ಯಾತ್ರೆಗೆ ನೀಡುವ ಆರ್ಥಿಕ ನೆರವನ್ನು ಜಾಸ್ತಿ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಸದಸ್ಯರ ಒತ್ತಾಯದ ಯಾತ್ರೆಗೆ ಒಟ್ಟು ಮೀಸಲಿಡುವ 10 ಕೋಟಿ ರೂಪಾಯಿಯನ್ನು 100 ಕೋಟಿಗೆ ಹೆಚ್ಚಿಸಲು ಪರಿಶೀಲನೆ ನಡೆಸಲಾಗುವುದು. ಮಾನಸ ಸರೋವರ ಯಾತ್ರೆಗೆ ಉತ್ತರ ಪ್ರದೇಶದ ಸರ್ಕಾರ ಮತ್ತು ಕೇಂದ್ರ ಸರ್ಕಾರ ಮೂಲ ಸೌಲಭ್ಯ ಕಲ್ಪಿಸಲು ಆಧ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….