ಮೇಷ: ಹಿತವಾದ ಮಾತುಗಳು ಗೌರವವನ್ನು ವೃದ್ಧಿಸುವವು. ಆರ್ಥಿಕ ಸಂಕಷ್ಟಗಳು ಎದುರಾಗುವವು. ಸಮಾಧಾನ ಚಿತ್ತದಿಂದ ಕಾರ್ಯ ನಿರ್ವಹಿಸಿರಿ. ಹಿತೈಷಿಗಳಂತೆ ವರ್ತಿಸುವವರಿಂದ ದೂರವಿರಿ.
ವೃಷಭ: ಮದುವೆಯ ಮಾತುಕತೆಗಳಲ್ಲಿ ಸಫಲತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ಕೆಲಸದಲ್ಲಿ ವಿಘ್ನ ಉಂಟಾಗುವ ಸಾಧ್ಯತೆ ಇರುವುದು. ಎಚ್ಚರಿಕೆವಹಿಸಿರಿ.
ಮಿಥುನ: ಅಗೌರವ ಆಗುವ ಸಂಭವ ಇರುವುದರಿಂದ ಸೂಕ್ಷ್ಮವಾಗಿರುವುದು ಉತ್ತಮ. ಅಪೇಕ್ಷಿತರಿಗೆ ಉಪಕಾರ ಮಾಡುವುದು ಸರಿಯಲ್ಲ. ಮಕ್ಕಳ ಚಿಂತೆ ಇರುವುದು. ವಧುವರರಿಗೆ ಮದುವೆಯ ಯೋಗ ಕೂಡಿಬರುವುದು.
ಕಟಕ: ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ. ವ್ಯವಹಾರದಲ್ಲಿ ಅಡೆತಡೆಗಳು ಕಂಡುಬರುವವು. ಅನಿವಾರ್ಯ ಕೆಲಸಗಳಗೆ ಅಲೆದಾಟ ಕಂಡುಬರುವುದು. ಆರ್ಥಿಕ ಸ್ಥಿತಿ ಉತ್ತಮವಾಗಿ ಇರುವುದು.
ಸಿಂಹ: ಸಾಲಗಾರರ ತೊಂದರೆ ಇರುವುದು. ಅನಾರೋಗ್ಯ, ವ್ಯವಹಾರದಲ್ಲಿ ಹಾನಿ ಕಂಡುಬರುವುದು. ನಿಧಾನಗತಿಯ ಕೆಲಸದಿಂದ ಮನೋಕ್ಷೋಭೆ ಉಂಟಾಗುವ ಸಂಭವವಿದೆ.
ಕನ್ಯಾ: ವಿಶ್ರಾಂತಿ ಇಲ್ಲದ ದುಡಿಮೆ ಬೇಸರ ತರುವುದು. ಜವಾಬ್ದಾರಿಗಳ ಹಂಚಿಕೆ ಮಾಡುವ ಪ್ರಮೇಯ ಉಂಟಾಗುವುದು. ಮಿತಿ ಮೀರಿದ ಆಲೋಚನೆಗಳು ದಿಕ್ಕು ತಪ್ಪಿಸುವ ಸಾಧ್ಯತೆ ಇದೆ. ಆರ್ಥಿಕ ಲಾಭ ಇಲ್ಲದಿದ್ದರೂ ಹಾನಿ ಇರುವುದಿಲ್ಲ.
ತುಲಾ: ಪರಾವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ. ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ. ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಸಿದ್ಧಿಸುವವು. ಅಪೇಕ್ಷಿತ ಧನಸಹಾಯ ದೊರೆಯುವುದು.
ವೃಶ್ಚಿಕ: ಅನವಶ್ಯಕ ಅಲೆದಾಟದ ಸಾಧ್ಯತೆ ಇದೆ. ಕರ್ತವ್ಯಕ್ಕೆ ಚ್ಯುತಿಯಾಗದಂತೆ ನಡೆದುಕೊಳ್ಳಲು ಪ್ರಯತ್ನ ಮಾಡುವಿರಿ. ಹಿತಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ಆರ್ಥಿಕಬಲ ಕುಗ್ಗುವ ಸಂಭವವಿದೆ. ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ.
ಧನಸ್ಸು: ದಿನೇ ದಿನೇ ಅಭಿವೃದ್ಧಿ ತೋರಿ ವ್ಯವಹಾರಗಳೆಲ್ಲಾ ಇಷ್ಟದಂತೆ ನಡೆಯುತ್ತದೆ. ಹಲವು ರೀತಿಯಿಂದ ಧನಾಗಮನ ವಾಗುತ್ತದೆ. ಐಶ್ವರ್ಯ, ಮುಟ್ಟಿದ್ದು ಚಿನ್ನವಾಗುವ ಕಾಲ. ಸ್ಥಿರಾಸ್ತಿ ಪ್ರಾಪ್ತಿ. ಅಲ್ಪ ಅನಾರೋಗ್ಯ ತೋರಿದರೂ ಕ್ಷಣಿಕವೆನ್ನಬಹುದು.
ಮಕರ: ಜನರಲ್ಲಿ ಮನಸ್ತಾಪ. ದೇಹಾರೋಗ್ಯವೂ ಸರಿಯಿರದೆ ತಾಪದಾಯಕವಾಗುತ್ತದೆ. ಆದರೆ ಶ್ರೇಷ್ಠ ಜನರಿಂದ ಪುರಸ್ಕಾರ. ಸಾಂಸಾರಿಕ ದೃಷ್ಟಿಯಲ್ಲೂ ತೃಪ್ತಿದಾಯಕವಿದ್ದು ನೆಮ್ಮದಿ ಉಂಟಾಗುತ್ತದೆ.
ಕುಂಭ: ಅಲ್ಪ ತೃಪ್ತಿ, ವ್ಯಾಪಾರದಲ್ಲಿ ನಿರಾಸಕ್ತಿ, ಅಪೇಕ್ಷಿತ ಕೆಲಸಗಳು ನೆರವೇರುವವು, ಧನಲಾಭ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಹಿರಿಯರಿಗೆ ಕೀರ್ತಿದಾಯಕ. ಆಲಸ್ಯದಿಂದ ತೊಂದರೆ ಇರುವುದು ಗುರುಸ್ತೋತ್ರ ಪಾರಾಯಣ ಮಾಡಿರಿ.
ಮೀನ: ನಿಧಾನವಾಗಿ ಕಾರ್ಯಸಿದ್ಧಿಯಾಗುವುದು. ಮಕ್ಕಳಲ್ಲಿ ಹೊಸಹುರುಪು ಕಂಡು ಬರುವುದು. ವ್ಯಾಪಾರಿಗಳಿಗೆ ಮಧ್ಯಮಫಲ. ಸೀಮಿತ ಆದಾಯ, ಸೀಮಿತ ಕಾರ್ಯಗಳಿಂದ ಬೇಸರ ಇರುವುದು. ಮಂದಗತಿಯ ಕೆಲಸಗಳು ನಿರಾಸೆ ಮೂಡಿಸುವ ಸಾಧ್ಯತೆ ಇದೆ.
ತಿಥಿ: ಪಂಚಮಿ
ನಕ್ಷತ್ರ: ಮಖಾ ನಕ್ಷತ್ರ
ರಾಹುಕಾಲ: 10:57 ರಿಂದ 12:23
ಗುಳಿಕಕಾಲ: 08:05 ರಿಂದ 09:31
ಯಮಗಂಡಕಾಲ: 03:14 ರಿಂದ 04:40
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್. ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು. ಮೊ:9620445122
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….