ದೊಡ್ಡಬಳ್ಳಾಪುರ: ತಮಿಳುನಾಡಿನ ಪ್ರಸಿದ್ದ ಯಾತ್ರಾ ಕ್ಷೇತ್ರ ಮೇಲ್ ಮರವತ್ತೂರು ಓಂ ಶಕ್ತಿ ದೇವಾಲಯಕ್ಕೆ ತೆರಳುವ ಮಾಲಾಧಾರಿಗಳ ಯಾತ್ರೆಗೆ ಅಂಜನಾದ್ರಿ ಚಾರಿಟಬಲ್ ಟ್ರಸ್ಟ್ ನಿರ್ದೇಶಕ ಹಾಗೂ ಬಿಜಿಪಿ ಜಿಲ್ಲಾ ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕ ಧೀರಜ್ ಮುನಿರಾಜು ಅವರು ಪ್ರಾಯೋಜಿಸಿರುವ ಉಚಿತ ಬಸ್‍ಗಳ ಸಂಚಾರಕ್ಕೆ ನಗರದ ಹೊರವಲಯದ ಅರ್ಕಾವತಿ ಸಮೀಪದ ಬಳಿ ಚಾಲನೆ ನೀಡಿ, ಶುಭ ಹಾರೈಸಿ ಕಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಧೀರಜ್ ಮುನಿರಾಜು, ವ್ರತಾಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಅಯ್ಯಪ್ಪ ಸ್ವಾಮಿ ಮಾಲಾಧಾರಣೆ ಹಾಗೂ ಓಂ ಶಕ್ತಿ ಮಾಲಾಧಾರಣೆಗಳು ಈ ಸಮಯದಲ್ಲಿ ಸಾಮಾನ್ಯವಾಗಿದ್ದು, ಕೆಲವು ವ್ರತಧಾರಿಗಳಿಗೆ, ಖರ್ಚು ನಿಭಾಯಿಸಲು ಸಹ ಕಷ್ಟವಾಗುವ ಸಂದರ್ಭಗಳಿವೆ. ವ್ರತಧಾರಿಗಳಿಗೆ ಅನುಕೂಲವಾಗುವ ಹಾಗೂ ಲೋಕಕಲ್ಯಾಣದ ದೃಷ್ಟಿಯಿಂದ ಇಂತಹ ವೇಳೆಯಲ್ಲಿ ಇಂದು 22 ಬಸ್‍ಗಳನ್ನು ಹಾಗೂ ಕಳೆದ 15 ದಿನಗಳಿಂದ 16 ಬಸ್‍ಗಳನ್ನು ಉಚಿತವಾಗಿ ಯಾತ್ರೆಗೆ ಕಳುಹಿಸಿದ್ದೇವೆ. 2022 ಜನವರಿ 15 ವರೆಗೆ ಯಾತ್ರೆಗೆ ತೆರಳು ಮಾಲಾಧಾರಿಗಳಿಗೆ 80 ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಮುಂಗಡವಾಗಿ ಬುಕ್ ಮಾಡಲಾಗಿದೆ.
ತಾಲೂಕಿನ ಓಂ ಶಕ್ತಿ ಮಾಲಾಧಾರಿಗಳ ಮೇಲ್ ಮರವತ್ತೂರು ದೇವಾಲಯಕ್ಕೆ ತೆರಳುವ ಎಲ್ಲಾ ಓಂ ಶಕ್ತಿ ಮಾಲಾಧಾರಿಗಳಿಗೆ ಉಚಿತ ಬಸ್ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ. ನಿಸ್ವಾರ್ಥವಾಗಿ ತಾಲೂಕಿನ ಬಹುತೇಕ ಮಧ್ಯಮ ಮತ್ತು ಬಡ ವರ್ಗದ ಭಕ್ತಾಧಿಗಳಿಗೆ ಧಾರ್ಮಿಕ ಭಾವನೆಗಳಿಗೆ ಪೂರಕವಾಗಿ ನಮ್ಮ ಸಹಾಯ ಹಸ್ತವನ್ನು ನೀಡುತ್ತಿದ್ದೇವೆ ಎಂದರು.
ಮಾಲಾಧಾರಿಗಳಿಗೆ ಅರಿಶಿಣ ಕುಂಕುಮ: ಇದೇ ಸಂದರ್ಭದಲ್ಲಿ ವೇಲ್ ಮಾವತ್ತೂರು ಓಂ ಶಕ್ತಿ ದೇವಾಲಯಕ್ಕೆ ತೆರಳಿದ ನೂರಾರು ಮಂದಿ ಮಾಲಾಧಾರಿಗಳಿಗೆ ಅನ್ನದಾನದ ವ್ಯವಸ್ಥೆಯೊಂದಿಗೆ ಅರಿಶಿಣ ಕುಂಕುಮ- ಬಳೆ ಕಣದ ಬಟ್ಟೆ ಹಾಗೂ ಕ್ಯಾಲೆಂಡರ್‍ಗಳನ್ನು ನೀಡಿ ಯಾತ್ರೆಗೆ ಶುಭಕೋರಲಾಯಿತು.
ಯಾತ್ರೆಗೆ ಹೊರಟ ಬಸ್‍ಗಳ ಚಾಲನೆ ಕಾರ್ಯಕ್ರಮದಲ್ಲಿ ಶ್ರೀಅಂಜನಾದ್ರಿ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಪಿ.ಮುನಿರಾಜು, ರಾಜಶ್ರೀ ಕಂಫರ್ಟ್ ಮಾಲೀಕ ಪದ್ಮರಾಜ್, ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎನ್.ಕೆ.ರಮೇಶ್, ನಗರಸಭಾ ಸದಸ್ಯರಾದ ಎಸ್.ಪದ್ಮನಾಭ್, ಬಂತಿ ವೆಂಕಟೇಶ್, ಹಂಸಪ್ರಿಯ, ಭಾಸ್ಕರ್, ಲಕ್ಷ್ಮೀಪತಿ, ಸುಮಿತ್ರ ಆನಂದ್, ನಾಗರತ್ನ ಕೃಷ್ಣಮೂರ್ತಿ, ಬಿಜೆಪಿ ಮುಖಂಡರಾದ ವಿಶ್ವಾಸ್‍ಗೌಡ, ಕೋಳೂರು ನಾಗರಾಜು, ಡಿ.ಪಿ.ಲೋಕೇಶ್ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಓಂ ಶಕ್ತಿ ಮಾಲಾಧಾರಿಗಳು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….