ದೊಡ್ಡಬಳ್ಳಾಪುರ: ಅಸಮರ್ಪಕ ವಾಹನ ನಿಲುಗಡೆ ಕಾರಣ ತಾಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ರಸ್ತೆಯಲ್ಲಿ ಸುಮಾರು 40 ನಿಮಿಷಗಳಿಂದ ಟ್ರಾಫಿಕ್ ಸಮಸ್ಯೆ ಎದುರಾಗಿದೆ.
ಈ ಕುರಿತು ಹರಿತಲೇಖನಿ ಓದುಗರು ಮಾಹಿತಿ ನೀಡಿದ್ದು, ಘಾಟಿ ಸುಬ್ರಹ್ಮಣ್ಯದಿಂದ ಮಾಕಳಿ ಕಡೆ ಸಾಗುವ ರಸ್ತೆಯಲ್ಲಿ ಕಾರುಗಳು ರಸ್ತೆ ಬದಿಯಲ್ಲಿ ಅಸಮರ್ಪಕವಾಗಿ ನಿಲ್ಲಿಸಿರುವ ಕಾರಣ ಸಾರಿಗೆ ಬಸ್ ಸಿಲುಕಿ ವಾಹನ ದಟ್ಟಣೆ ಎದುರಾಗಿದೆ.
ಘಾಟಿ ಸುಬ್ರಹ್ಮಣ್ಯ ದನದ ಜಾತ್ರೆಗೆ ವಿವಿಧ ಕಡೆಗಳಿಂದ ದನಗಳು ಬಂದಿದ್ದು, ಜಾತ್ರೆ ಕಳೆ ಕಟ್ಟಲಾರಂಭಿಸಿದೆ. ಇನ್ನು ಶನಿವಾರ ಕ್ರಿಸ್ಮಸ್ ರಜೆಯ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಟ್ರಾಫಿಕ್ ಬಿಸಿ ತಟ್ಟಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….