ದೊಡ್ಡಬಳ್ಳಾಪುರ: ತಿಗಳರ ಪತ್ತಿನ ಸಹಕಾರ ಸಂಘದಿಂದ ಹೊರತರಲಾಗಿರುವ 2022ನೇ ಸಾಲಿನ ಕ್ಯಾಲೆಂಡರ್ ಅನ್ನು ಶಾಸಕ ಟಿ.ವೆಂಕಟರಮಣಯ್ಯ ಅವರು ಬಿಡುಗಡೆ ಮಾಡಿದರು.
ನಗರದ ತಿಗಳರ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಈ ವೇಳೆ ತಿಗಳ ಸಮುದಾಯದ ಅಭಿವೃದ್ಧಿಗಾಗಿ ತಿಗಳರ ಸಮುದಾಯ ಭವನ ಹಾಗೂ ಸಂಸ್ಥೆಯ ಸ್ವಂತ ಕಟ್ಟಡವನ್ನು ನಿರ್ಮಿಸಲು ನಿವೇಶನ ನೀಡುವಂತೆ ಸಂಘದವತಿಯಿಂದ ಶಾಸಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಜಿ.ನಾಗರಾಜು, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಸಂಘದ ಅಧ್ಯಕ್ಷ ಪು.ಮಹೇಶ್, ಗೌರವ ಅಧ್ಯಕ್ಷ ದೊಡ್ಡ ನರಸಪ್ಪ, ಇಒ ಹೆಚ್.ಎಲ್.ಲತಾ ಗಂಗರಾಜು, ಮುಖಂಡರಾದ ಕೃಷ್ಣಮೂರ್ತಿ, ಹೇಮಂತರಾಜು, ಕೇಶವಮೂರ್ತಿ ಸೇರಿದಂತೆ ಅನೇಕರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….