ದೊಡ್ಡಬಳ್ಳಾಪುರ: ನೂತನ ವರ್ಷಾಚರಣೆ ನೆಪದಲ್ಲಿ ತಾಲೂಕಿನ ಕೆಲ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಂದ ಹಣ ವಸೂಲಿ ಮಾಡಿ, ನಮ್ಮದಲ್ಲದ ಆಚರಣೆಯನ್ನು ಮುಗ್ದ ಮಕ್ಕಳ ಮೇಲೆ ಹೇರಲು ಹೊರಟಿದ್ದಾರೆಂದು ಭಜರಂಗದಳ, ಹಿಂಜಾವೇ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹರಿತಲೇಖನಿಯೊಂದಿಗೆ ಮಾತನಾಡಿರುವ ಹಿಂದು ಜಾಗರಣಾ ವೇದಿಕೆ ಪ್ರಾಂತ ಸಹ ಕಾರ್ಯದರ್ಶಿ ಯಶೋಧ ರಘುನಾಥ್, ಭಜರಂಗದಳದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ಮಧು ಬೇಗಲಿ ಅವರು, ರಾಜ್ಯದಲ್ಲಿ ಈಗಾಗಲೇ ವ್ಯಾಪಕವಾಗಿ ಹರಡಿರುವ ಮತಾಂತರದ ಹಾವಳಿಯ ನಡುವೆ, ಹೊಸವರ್ಷದ ನೆಪದಲ್ಲಿ ಕೆಲ ಶಿಕ್ಷಕರು ಶಾಲೆಗಳಲ್ಲಿ ಸಂಭ್ರಮಾಚರಣೆ, ಕೇಕ್ ಕಟ್ ಮಾಡಿಸಲು ಮಕ್ಕಳಿಂದ ಹಣ ಪಡೆಯುತ್ತಿರುವ ಕುರಿತು ಆರೋಪಗಳು ಕೇಳಿ ಬಂದಿವೆ ಈ ಕುರಿತು ಅಧಿಕಾರಿಗಳು ಕಟ್ಟುನಿಟ್ಟಾದ ಆದೇಶ ನೀಡಬೇಕಿದೆ ಎಂದು ಒತ್ತಾಯಿಸಿದ್ದಾರೆ.
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಅನ್ಯ ಧರ್ಮಿಯರ ಆಚರಣೆಯನ್ನು ಬಲವಂತದಿಂದ ಪುಟಾಣಿ ಮಕ್ಕಳ ಮೇಲೆ ಹೇರಿಕೆ ಮಾಡಲು ಕೆಲ ಶಿಕ್ಷಕರು ಮುಂದಾಗಿರುವುದು ಖಂಡನೀಯ. ಇದರ ಹಿಂದೆ ಮಿಷನರಿಗಳ ಹಾಗೂ ಕೆಲ ವ್ಯಾಪಾರಿಗಳ ವ್ಯವಸ್ಥಿತ ಶಡ್ಯಂತ್ರ ಅಡಗಿರುವಂತೆ ಕಾಣುತ್ತದೆ.
ಈ ಕುರಿತಂತೆ ಶಿಕ್ಷಣಾಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಹೊಸ ವರ್ಷದ ಆಚರಣೆ ನಡೆಸುವ ಶಾಲೆಗಳ ಬಳಿ ತೆರಳಿ ಪ್ರತಿಭಟನೆ ನಡೆಸಬೇಕಾಗುವುದೆಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….