ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ತಾಲೂಕು ಕಚೇರಿ ಸಭಾಂಗಣದಲ್ಲಿ ಆಚರಿಸಲಾಯಿತು.
ಅಮರಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಶಿಲ್ಪಕಲೆಯಲ್ಲಿ ಅಪ್ರತಿಮ ಸಾಧನೆ ಮಾಡಿರುವ ಅಮರಶಿಲ್ಪಿ ಜಕಣಾಚಾರಿ ಸಾಧಕರಿಗೆ ಮಾದರಿ. ಆದರೆ ಇಂತಹ ಮಹಾಮಹಿಮರ ಆದರ್ಶಗಳನ್ನು ನಾವು ಮರೆಯುತ್ತಿದ್ದೇವೆ. ಶಿಲ್ಪಕಲೆಗೆ ಬೇಲೂರು, ಹಂಪಿ, ಸೋಮನಾಥೇಶ್ವರ, ದೇಶದಲ್ಲಿ ಹಲವಾರು ದೇವಾಲಯಗಳನ್ನು ನಿರ್ಮಿಸಿ ಶಿಲ್ಪಕಲೆ ಇಂದಿಗೂ ಜೀವಂತವಾಗಿದೆ, ಅಂತಹ ಮಹಾನ್ ವ್ಯಕ್ತಿಯ ದಿನಾಚರಣೆಯನ್ನು ಆಚರಿಸುತ್ತಿರುವುದು ಹೆಮ್ಮಯ ಸಂಗತಿವಾಗಿದೆ. ಈಗಾಗಲೇ ಇತರೆ ಸಮುದಾಯದವರಿಗೆ ನಿವೇಶನಗಳನ್ನು ನೀಡಲಾಗಿದೆ. ವಿಶ್ವಕರ್ಮ ಸಮುದಾಯಕ್ಕೆ ನಿವೇಶನ ನೀಡುವ ಕುರಿತು ಮಾಡಿರುವ ಮನವಿಯನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕಿದ್ದು, ಸಂಪುಟದ ಅನುಮೋದನೆ ವಿಳಂಬವಾಗುತ್ತಿದೆ ಎಂದರು, ಶೀಘ್ರದಲ್ಲಿಯೇ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ಕರೆದು ವಸತಿ ಯೋಜನೆಯಡಿ ಅರ್ಹರನ್ನು ಗುರುತಿಸುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.
ತಹಶೀಲ್ದಾರ್ ಮೋಹನಕುಮಾರಿ ಮಾತನಾಡಿ, ಜಕಣಾಚಾರಿ ಅವರ ಕಲಾ ಪ್ರೌಢಿಮೆ ಅಸಾಧಾರಣವಾಗಿದ್ದು, ಇಂತಹ ಮಹಾನ ಶಿಲ್ಪಿಯ ಸ್ಮರಣೆ ಕಲಾವಿದರ ಸಾಧನೆಗಳಿಗೆ ಸ್ಪೂರ್ತಿಯಾಗಲಿದೆ. ಇದು ಭಾತೃತ್ವದ ಸಂದೇಶ ಸಾರುತ್ತದೆ.ಸರ್ಕಾರ ಜಕಣಾಚಾರಿ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ತಾಲೂಕು ಅಧ್ಯಕ್ಷ ಕೇಶವಾಚಾರ್, ವಿಶ್ವಕರ್ಮ ಜನಾಂಗದ ಮುಖಂಡರಾದ ಪ್ರೋ.ಈಶ್ವರಾಚಾರ್, ಗಣೇಶಾಚಾರ್, ನಗರಸಭಾ ಸದಸ್ಯರಾದ ನಾಗರಾಜು, ಆನಂದ್, ನಾಗವೇಣಿ, ಗ್ರಾ.ಪಂ ಸದಸ್ಯೆ ನಾಗರತ್ನಮ್ಮ, ಗ್ರಾಮ ಲೆಕ್ಕಿಗ ರಾಜೇಂದ್ರ ಬಾಬು, ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….