ದೊಡ್ಡಬಳ್ಳಾಪುರ: ಯೋಗ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಇತ್ತೀಚೆಗೆ ನಡೆದ 46ನೇ ರಾಷ್ಟ್ರೀಯ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ವಿದ್ಯಾರ್ಥಿಗಳು ವಿವಿಧ ಬಹುಮಾನಗಳನ್ನು ಗಳಿಸಿದ್ದಾರೆ.
ಎಂ.ಎಸ್.ವಿ ಪಬ್ಲಿಕ್ ಸ್ಕೂಲ್‍ನ ಜಾಹ್ನವಿ ಎಂ.ಆರ್ (12-14 ವರ್ಷ)- ಐದನೇ ಸ್ಥಾನ, ದೇವಲ ಮಹರ್ಷಿ ಆಂಗ್ಲ ಪ್ರೌಢಶಾಲೆಯ ವಿನಯ್ ಕುಮಾರ್.ಕೆ (14-16 ವರ್ಷ)-ಐದನೇ ಸ್ಥಾನ, ವಿದ್ಯಾನಿಧಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವರಪ್ರಸಾದ್.ವಿ (16-18 ವರ್ಷ)-ನಾಲ್ಕನೇ ಸ್ಥಾನ, ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಪುನೀತ್.ಎಲ್.ಎ (16-18 ವರ್ಷ) ಆರನೇ ಸ್ಥಾನವನ್ನು ಪಡೆದಿದ್ದು, ಅಂತರ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.
ವಿಜೇತರನ್ನು ನಿಸರ್ಗ ಯೋಗ ಕೇಂದ್ರದ ಅಧ್ಯಕ್ಷ ಎಚ್. ಸಿ.ರವೀಂದ್ರ, ಕಾರ್ಯದರ್ಶಿ ಎ.ನಟರಾಜ್ ಮತ್ತು ಸಂಸ್ಥೆಯ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….