ಶಿವಮೊಗ್ಗ: ಕೋವಿಡ್ ಹೆಚ್ಚಳ ಹಿನ್ನೆಲೆ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿರುವ ಸರ್ಕಾರದ ನಿರ್ಧಾರಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕರೊನಾ ಜಾಸ್ತಿ ಇರುವುದು ಹೌದು, ನಾನು ಇಲ್ಲ ಅಂತಾ ಹೇಳಿಲ್ಲ. ರಾಜ್ಯದ ಎಲ್ಲಾ ಕಡೆಯೂ ಇದು ಇಲ್ಲ. ಉದಾಹರಣೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಕರೊನಾ ಅಷ್ಟಿಲ್ಲ. ಕೆಲವೆಡೆ 2-3-4-5 ಈ ರೀತಿ ಇದೆ. ಜಾಸ್ತಿ ಅಂದರೆ 10 ರವರೆಗೆ ಇದೆ. ಜಾಸ್ತಿ ಇದೆ ಅಂದುಕೊಂಡು ಇಡೀ ರಾಜ್ಯಕ್ಕೆ ರೂಲ್ಸ್ ತರುವುದು ಸರಿಯೇ ಎಂದು ಅನೇಕರು ನನಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದರು.
ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಎಲ್ಲಾ ಕಡೆಯಿಂದ ನನಗೆ ಪೋನ್ ಮಾಡುತ್ತಿದ್ದಾರೆ.ಬೆಂಗಳೂರಿನಲ್ಲಿ ಬಿಗಿ ಮಾಡಿ ನಾವು ಸಹಕಾರ ಕೊಡುತ್ತೇವೆ. ನಾವು ಯಾವುದೇ ಖರೀದಿಗೂ ಬೆಂಗಳೂರಿಗೆ ಹೋಗುವುದಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ, ಶಾಲೆಗಳಿಗೆ ಹೋಗುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣ ಮಾಡುವುದು ಎಲ್ಲರ ಕರ್ತವ್ಯ.ಅಷ್ಟು ಇಲ್ಲದಿರುವ ಸಂದರ್ಭದಲ್ಲಿ ನಮ್ಮ ಮೇಲೆ ಹೇರಿದರೆ ನಮ್ಮ ವ್ಯವಹಾರಕ್ಕೆ ತೊಂದರೆ ಆಗುತ್ತದೆ.ಇದಕ್ಕೆ ಮುಂಜಾಗ್ರತೆ ತೆಗೆದುಕೊಳ್ಳುತ್ತಿದ್ದೇವೆ. ಖಂಡಿತಾ ಮಾಸ್ಕ್ ಧರಿಸುತ್ತೇವೆ. ಸ್ಯಾನಿಟೈಸರ್ ಬಳಸುತ್ತೇವೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತೇವೆ. ದಯವಿಟ್ಟು ನಮಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡುತ್ತಿದ್ದಾರೆ ಎಂದರು. ಎನ್ನುತ್ತಿದ್ದಾರೆ.
ನಾಳೆ ಸಚಿವ ಸಂಪುಟ ಸಭೆ ನಡೆಯಲಿದೆ, ಮುಖ್ಯಮಂತ್ರಿ ಗಳು ಹಾಗು ಉಳಿದವರ ಜೊತೆ ಮಾತನಾಡುತ್ತೇನೆ. ಬೆಂಗಳೂರಿನಲ್ಲಿ ಖಂಡಿತಾ ಬಿಗಿ ಮಾಡಬೇಕು. ಗಡಿಗಳಲ್ಲಿ ಬಿಗಿ ಮಾಡಲೇ ಬೇಕು. ಇಂತಹ ಸಲಹೆಯನ್ನು ಕೊಡುತ್ತೇನೆ.
ಸಾರ್ವಜನಿಕರ ಅಭಿಪ್ರಾಯವನ್ನು ನಾನು ಕ್ಯಾಬಿನೆಟ್ ಮುಂದೆ ಇಡುತ್ತೇನೆ.ಆಟೋ ರಿಕ್ಷಾ ಡ್ರೈವರ್, ಹಮಾಲರು ಎಲ್ಲಿ ಹೋಗಬೇಕು ಅವರ ಜೀವನಕ್ಕೆ? ಕೂಲಿ ಕಾರ್ಮಿಕರು, ಟೈಲರ್ ಎಲ್ಲರಿಗು ತೊಂದರೆ ಆಗುತ್ತದೆ. ರಾಜ್ಯದ ಜನರ ಅಭಿಪ್ರಾಯ ವನ್ನು ಸಚಿವ ಸಂಪುಟದ ಮುಂದೆ, ಸಿಎಂ ಮುಂದೆ ಇಡುತ್ತೇನೆ ಎಂದಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….