ದೊಡ್ಡಬಳ್ಳಾಪುರ: ಓಂ ಶಕ್ತಿ ದೇವಸ್ಥಾನದಿಂದ ಯಾತ್ರೆ ಮುಗಿಸಿ ಮರಳಿದ ಭಕ್ತರಿಗೆ ಇಂದು ಬಸ್ ನಿಲ್ದಾಣದ ಸಮೀಪದಲ್ಲಿರುವ ನಗರ ಆಸ್ಪತ್ರೆಯ ಆವರಣದಲ್ಲಿ ಕೋವಿಡ್ ತಪಾಸಣೆ ಕಾರ್ಯ ನಡೆಸಲಾಯಿತು.
ಮೂರು ದಿನಗಳ ಹಿಂದೆ ನಾಲ್ಕು ಸಾರಿಗೆ ಬಸ್ಸುಗಳಲ್ಲಿ 200ಮಂದಿ ಭಕ್ತರು ತಮಿಳುನಾಡಿನ ಮೇಲ್‌ಮರವತ್ತೂರಿನಲ್ಲಿರುವ ಓಂ ಶಕ್ತಿ ದೇವಸ್ಥಾನಕ್ಕೆ ತೆರಳಿದ್ದರು. ಇಂದು ಬೆಳಗ್ಗೆ ನಗರಕ್ಕೆ ಹಿಂತಿರುಗಿದ ಯಾತ್ರಿಗಳನ್ನು ನೇರವಾಗಿ ಕೆಎಸ್ ಆರ್ಟಿಸಿ ಬಸ್ ನಿಲ್ದಾಣದ ಸಮೀಪದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಕರೆತಂದು ತಪಾಸಣೆ ನಡೆಸಿ, 7 ದಿನಗಳ ಕಾಲ ಹೋಂ ಕ್ವಾರಂಟೈನ್ ಒಳಗಾಗಲು ಅಧಿಕಾರಿಗಳು ಸೂಚನೆ ನೀಡಿದರು.
ಈ ವೇಳೆ ಆರೋಗ್ಯ ಇಲಾಖೆ ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿಗಳು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….