ದೊಡ್ಡಬಳ್ಳಾಪುರ: ವಿಶ್ವ ಹಿಂದೂ ಪರಿಷತ್ ಬಜರಂಗದಳದ ಸ್ವಾಮಿ ವಿವೇಕಾನಂದರ ಘಟಕ ಬೆಸ್ತರಪೇಟೆ ಇವರ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತೋತ್ಸವದ ಅಂಗವಾಗಿ ನಗರದ ವಿವೇಕಾನಂದರ ಪ್ರತಿಮೆಗೆ ಪುಷ್ಪಾರ್ಚನೆ ಕಾರ್ಯಕ್ರಮವನ್ನು ಬಳಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ತುಮಕೂರು ವಿಭಾಗ ಸಂಯೋಜಕ ನರೇಶ್ ರೆಡ್ಡಿ, ತಾಲೂಕು ಸಹ ಸಂಯೋಜಕ ಅರ್ಜುನ್ ವಿರಾಟ್, ನಗರ ಸಂಯೋಜಕ್ ವಿರಾಜ್, ನಗರ ಸಂಘಟನಾ ಪ್ರಮುಖ್ ಕುಶಾಲ್, ನಗರಸಭೆ ಸದಸ್ಯರಾದ ಭಾಸ್ಕರ್, ವೆಂಕಟೇಶ್ (ಬಂತಿ), ಬಿಜೆಪಿ ಮುಖಂಡರಾದ ಧೀರಜ್ ಮುನಿರಾಜು, ಉಮಾಮಹೇಶ್ವರಿ, ಎನ್.ಕೆ.ರಮೇಶ್ ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಸ್ವಾಮಿ ವಿವೇಕಾನಂದರ ಘಟಕ ಬೆಸ್ತರಪೇಟೆ ಪದಾಧಿಕಾರಿಗಳು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….