ದೊಡ್ಡಬಳ್ಳಾಪುರ: 3ನೇ ಅಲೆ ಮೆಡಿಕಲ್ ಮಾಫಿಯ ದೇಶದಲ್ಲಿ ಪ್ರತಿ ವರ್ಷ ಟಿಬಿ ರೋಗದಿಂದ 4.5ಲಕ್ಷ ಜನ ಮೃತಪಡುತ್ತಿದ್ದಾರೆ. ಅಪಘಾತದಲ್ಲಿ ಇದಕ್ಕಿಂತಲು ಹೆಚ್ಚಿನ ಜನ ಸಾವನ್ನಪ್ಪುತ್ತಿದ್ದಾರೆ. ಆದರೆ ಕೇವಲ ಶೇ1.5 ರಷ್ಟು ಜನ ಮಾತ್ರ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಇದನ್ನೇ ದೊಡ್ಡದಾಗಿಸಿ 3ನೇ ಅಲೆಯ ಬಗ್ಗೆ ಜನರಲ್ಲಿ ಬೀತಿಯುಂಟು ಮಾಡುತ್ತಿರುವುದು ಸರಿಯಲ್ಲ. 3ನೇ ಅಲೆಯ ಸೋಂಕು ಶ್ವಾಸಕೋಶದ ಮೇಲೆ ಕೂರುವುದಿಲ್ಲ. ಇದೊಂದು ಮೆಡಿಕಲ್ ಮಾಫಿಯ ಆಗಿದೆ ಎಂದು ಖ್ಯಾತ ವೈದ್ಯ ಡಾ.ಟಿ.ಎಚ್.ಆಂಜಿನಪ್ಪ ಹೇಳಿದರು.
ಅವರು ತಾಲ್ಲೂಕಿನ ದೊಡ್ಡತುಮಕೂರಿನಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿ, ವೈದ್ಯರಿಗೆ ಪಾಠ ಹೇಳುವ ಕೆಲಸ ಮಾಡುವ ನಾನು ಯಾವುದನ್ನೇ ಹೇಳಬೇಕಾದರು ಅದಕ್ಕೊಂದು ವೈಜ್ಞಾನಿಕ ಕಾರಣ ಇರಬೇಕಾಗಲಿದೆ. ನಾನು ಚೀನಾ ದೇಶದ ಹೂವಾನ್ ನಗರಕ್ಕೆ ಹೋಗಿ ಬಂದಿರುವೆ. ಕೊರೊನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು ನಿಜ. ಹೀಗಾಗಿಯೇ ಕರೊನಾ ಸೋಂಕು ಸಂಪೂರ್ಣವಾಗಿ ನಿವಾರಣೆಯಾಗುವವರೆಗೂ ಮಾಸ್ಕ್ ಧರಿಸುವುದು, ಕೈ ತೊಳೆದುಕೊಳ್ಳುವುದು ಸೇರಿದಂತೆ ಇತರೆ ಎಚ್ಚರಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದರೆ ಇದನ್ನೇ ನೆಪಮಾಡಿಕೊಂಡು ಜನರನ್ನು ಆಂತಕಕ್ಕೆ ಒಳಗಾಗುವಂತೆ ಮಾಡಬಾರದು.
ನಾವು ಚಿಕ್ಕವರಿದ್ದಾಗ ನಮ್ಮ ತಾಯಿ ‘ಗುಮ್ಮ ಬಂತು ಗುಮ್ಮ’ ಎಂದು ಹೆದರಿಸುತ್ತಿದ್ದರು. ಇದೇ ರೀತಿಯಾಗಿದೆ ಕೋವಿಡ್ ಸಹ ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….