ಬೆಂಗಳೂರು: ರಾಜ್ಯದಲ್ಲಿ ಮೂರನೇ ಅಲೆ ಪ್ರಾರಂಭವಾಗಿದೆ. ಇನ್ನೊಂದು ವಾರದಲ್ಲಿ 3ನೇ ಅಲೆ ತೀವ್ರಗೊಳ್ಳಲಿದೆ ಎಂದು ತಜ್ಞರು ಹೇಳಿದ್ದಾರೆ. ಆ ಕಾರಣ ಮುಂದಿನ 15 ದಿನಗಳ ಕಾಲ ರಾಜ್ಯದಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚುವುದೇ ಒಳಿತು ಎಂದು ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಕರೊನಾ 3ನೇ ಅಲೆ ದಿನೇ ದಿನೇ ರಾಜ್ಯದಲ್ಲಿ ತೀವ್ರಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಪರಿಸ್ಥಿತಿ ನಿರ್ವಹಣೆ ಕುರಿತು ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೆಲ ಸಲಹೆಗಳನ್ನು ನೀಡಿದ್ದಾರೆ.
ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಕೋವಿಡ್ ಅನಾಹುತಗಳ ಗ್ರಾಫ್ ರಾಜ್ಯದಲ್ಲಿ ದಿನೇ ದಿನೇ ಏರಿಕೆಯಾಗಿದೆ. ಕರ್ಫ್ಯೂ ವಿಚಾರವಾಗಿ ಬಿಜೆಪಿ ಪಕ್ಷದ ನಾಯಕರಲ್ಲೇ ಗೊಂದಲು ಗಮನಿಸುತ್ತಿದ್ದೇನೆ. ನೈಟ್ ಕರ್ಫ್ಯೂ ಜಾರಿಗೆ ತಂದಿರೋದು ಸರಿಯಿಲ್ಲ ಅಂತಿದ್ದಾರೆ ಎಂದು ಅಸಮಾಧನ ವ್ಯಕ್ತಪಡಿಸಿದರು.
ಕೆಲ ವ್ಯಾಪಾರಿ ಸಂಘಟನೆಗಳು ಕೂಡ ರಾತ್ರಿ ಕರ್ಫ್ಯೂಗೆ ವಿರೋಧ ವ್ಯಕ್ತ ಮಾಡಿವೆ. ಧಾರ್ಮಿಕ ಕ್ಷೇತ್ರದಲ್ಲಿ ಇನ್ನೊಂದೆರಡು ವಾರ ನಡೆಯಲಿವೆ. ಬಾದಾಮಿಯಲ್ಲಿ 40-40 ಸಾವಿರ ಭಕ್ತರು ಹೋಗಿದ್ದಾರೆ.
ನಾಡಿನ ಜನತೆಗೆ ವಿಶೇಷವಾಗಿ ಮನವಿ ಮಾಡ್ತೀನಿ. ಸರ್ಕಾರದ ನೀತಿ ನಿಯಮಗಳಿಂದ ಇದನ್ನು ಸರಿ ಪಡಿಸಲು ಸಾಧ್ಯವಿಲ್ಲ. ನಮ್ಮ ಜವಾಬ್ದಾರಿ ಇಲ್ಲಿ ಮುಖ್ಯವಾಗಿದೆ. ಇನ್ನೊಂದು ವರ್ಷಗಳಲ್ಲಿ ಚುನಾವಣಾ ಸಮಯ ಬರಲಿದೆ. ಆಗ ನಿಯಮಗಳನ್ನು ಉಲ್ಲಂಘನೆ ಮಾಡಿದಾಗ ಜನರು ಪ್ರಶ್ನೆ ಮಾಡ್ತಾರೆ. ಈಗಾಗಲೇ ಈ ರೀತಿ ಘಟನೆಗಳ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ದೇವರ ದಯೆಯಿಂದ ಎರಡನೇ ಅಲೆಯಂತೆ ಆಗಿಲ್ಲ. ದೊಡ್ಡ ಮಟ್ಟದ ಸಮಸ್ಯೆ, ಗಂಭೀರ ಸ್ಥಿತಿ ಇಲ್ಲ. ಇದಕ್ಕೆ ದೇವರಿಗೆ ನಾವು ಧನ್ಯವಾದ ಸಲ್ಲಿಸಬೇಕು ಎಂದರು. ನೈಟ್ ಕರ್ಫ್ಯೂ ನಿಂದ ಇದನ್ನು ತಡೆಯಬಹುದು ಎಂದು ತಜ್ಞರು ವರದಿ ನೀಡಿದ್ದಾರೋ ಗೊತ್ತಿಲ್ಲ. ಆದರೆ ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ನಿಂದ ದಿನ ಗೂಲಿಯವರಿಗೆ ತೊಂದರೆ ಆಗುತ್ತಿದೆ. ಏನಾದರೂ ಬದಲಿ ವ್ಯವಸ್ಥೆ ಮಾಡಬೇಕಲ್ಲಾ ಸರ್ಕಾರ..?
ವಿಜಯಪುರ ಸೇರಿದಂತೆ ಅನೇಕ ಕಡೆ ರೈತರು ತಾವು ಬೆಳೆದ ಬೆಳೆ ಮಾರಾಟ ಮಾಡಲು ಆಗಿಲ್ಲ. ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ ನಿಂದ ನಿತ್ಯ ದುಡಿದು ತಿನ್ನುವವರಿಗೆ ಸಮಸ್ಯೆ ಆಗುತ್ತಿದೆ. ಅವರ ಬದುಕು ಕಟ್ಟಿಕೊಡಲು ಏನಾದರೂ ಸಹಾಯ ಮಾಡಬೇಕು. ವಿಶೇಷ ಪ್ಯಾಕೇಜ್ ಏನಾದ್ರೂ ಘೋಷಣೆ ಮಾಡಿ ಎಂದು ಸರ್ಕಾರವನ್ನು ಎಚ್ಡಿಕೆ ಆಗ್ರಹಿಸಿದರು. ರೈತರು ಬೆಳೆದ ಬೆಳೆ ಮಾರಾಟ ಮಾಡುವಾಗ ಅವರಿಗೆ ಸೂಚನೆ ನೀಡಿ ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಮಾರ್ಗಸೂಚಿ ಪಾಲಿಸಿ ಮಾರಾಟಕ್ಕೆ ಅವಕಾಶ ಕೊಡಿ ಎಂದು ಒತ್ತಾಯಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….