ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ 10 ದಿನಗಳ ಅಂತರದಲ್ಲಿ ಎರಡು ಕಳ್ಳತನ ಪ್ರಕರಣ ನಡೆದಿದ್ದು, ಗ್ರಾಮಸ್ಥರ ಆತಂಕ ಹೆಚ್ಚಿಸಿದೆ.
ಜನವರಿ 12 ರಂದು ಹಾಡಹಗಲೇ ವೃದ್ದೆಯ ಚಿನ್ನಾಭರಣ ಕಳ್ಳತನವಾದರೆ, ಶನಿವಾರ ಮುಂಜಾನೆ 3 ಗಂಟೆಯ ಸಮಯದಲ್ಲಿ ಕೊಟ್ಟಿಗೆಯಲ್ಲಿದ್ದ 5 ಮೇಕೆಗಳನ್ನ ಕಳ್ಳರು ಕದ್ದೊಯ್ದಿದ್ದಾರೆ.
ಮಧುರನಹೊಸಹಳ್ಳಿ ಗ್ರಾಮದ ಪ್ರವೀಣ್ ಕುಮಾರ್ ಎನ್ನುವ ರೈತನ ಮನೆಯ ಪಕ್ಕದಲ್ಲಿನ ಕೊಟ್ಟಿಗೆಯಲ್ಲಿ 8 ಮೇಕೆಗಳನ್ನ ಕೂಡಿಹಾಕಿ ಮನೆಯವರು ನಿದ್ದೆಗೆ ಜಾರಿದ್ದಾರೆ, ಆದರೆ ಇಂದು ಮುಂಜಾನೆ 3 ಗಂಟೆ ಸಮಯದಲ್ಲಿ ಟಾಟಾ ಏಸ್ ವಾಹನದಲ್ಲಿ ಬಂದರೆನ್ನಲಾದ ಕಳ್ಳರ ಗುಂಪು ಮನೆಯ ಬಾಗಿಲಿಗೆ ಚಿಲಕ ಹಾಕಿ 5 ಮೇಕೆಗಳನ್ನ ಕದ್ದೊಯ್ದಿದ್ದಾರೆ.
ಮೇಕೆಗಳ ಕೂಗಾಟಕ್ಕೆ ಎಚ್ಚರಗೊಂಡು ಬಾಗಿಲು ತೆರೆಯಲು ಪ್ರಯತ್ನಿಸಿದಾಗ ಹೊರಗಿನಿಂದ ಬಾಗಿಲಿಗೆ ಚಿಲಕ ಹಾಕಿರೋದು ಗಮನಕ್ಕೆ ಬಂದಿದ್ದು, ಸಂಬಂಧಿಕರಿಗೆ ಪೋನ್ ಮಾಡಿ ಬಾಗಿಲು ತೆಗೆದು ಕೊಟ್ಟಿಗೆ ನೋಡಿದ್ದಾಗ ಸುಮಾರು ಒಂದು ಲಕ್ಷ ಮೌಲ್ಯದ 5 ಮೇಕೆಗಳು ಕಳ್ಳತನವಾಗಿರೋದು ಬೆಳಕಿಗೆ ಬಂದಿದೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ರೈತ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….