ಬೆಂ.ಗ್ರಾ.ಜಿಲ್ಲೆ: ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಹಾಗೂ ಸಾಂಕ್ರಾಮಿಕದ ಸಂದರ್ಭದಲ್ಲಿ ಆರೋಗ್ಯ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಜನವರಿ 20 ರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಪುನರಾರಂಭಿಸಲಾಗಿರುವ “ವೈದ್ಯರ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದಡಿ, ವೈದ್ಯರ ತಂಡಗಳು ಜಿಲ್ಲೆಯ ವಿವಿಧ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜನವರಿ 20 ರಿಂದ ಇಲ್ಲಿಯವರೆಗೂ 66 ವೈದ್ಯಕೀಯ ತಂಡಗಳು, 44 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ 548 ಗ್ರಾಮಗಳಿಗೆ ಭೇಟಿ ನೀಡಿ, ಪರೀಕ್ಷೆ ನಡೆಸಲಾಗಿದೆ ಹಾಗೂ 1512 ಹೋಂ ಐಸೋಲೇಷನ್‌ನಲ್ಲಿರುವ ಮನೆಗಳಿಗೆ ಭೇಟಿ ನೀಡಿ, ಅಗತ್ಯವಿರುವವರಿಗೆ 1112 ಔಷಧಗಳ ಕಿಟ್‌ಗಳನ್ನು ವಿತರಿಸಲಾಗಿದೆ.
ಆರೋಗ್ಯ ತಪಾಸಣೆ ವೇಳೆ 1056 ಐಎಲ್‌ಐ/ ಸಾರಿ ಯ ಪ್ರಕರಣಗಳು, 1760 ಮಕ್ಕಳು, 64 ಅಪೌಷ್ಟಿಕ ಮಕ್ಕಳು ಕಂಡುಬಂದಿದ್ದು, 989 ಜನರಿಗೆ ಆರ್‌ಎಟಿ(RAT), 4106 ಜನರಿಗೆ ಆರ್‌ಟಿಪಿಸಿಆರ್(RTPCR) ಪರೀಕ್ಷೆ ಮಾಡಿ 91 ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ಶಿಫಾರಸ್ಸು ಮಾಡಲಾಗಿದೆ.
4563 ಜನರಿಗೆ ಮೊದಲ ಡೋಸ್, 14242 ಜನರಿಗೆ ಎರಡನೇ ಡೋಸ್, 1048 ಜನರಿಗೆ ಮುನ್ನೆಚ್ಚರಿಕೆ ಡೋಸ್ ಹಾಗೂ 323 ಶಾಲಾ ಮಕ್ಕಳಿಗೆ(15-18 ವರ್ಷ) ಲಸಿಕೆ ನೀಡಲಾಗಿದೆ.
ಮನೆ ಮನೆ ಭೇಟಿ ನೀಡಿ, ಆರೋಗ್ಯ ತಪಾಸಣೆ ಕೈಗೊಂಡ ಸಮಯದಲ್ಲಿ ದೀರ್ಘಕಾಲದ ಉಸಿರಾಟದ ಕಾಯಿಲೆಯ 65 ಜನರು, ಹೃದಯದ ಸಮಸ್ಯೆಯ 57 ಜನರು, ಮೂತ್ರಪಿಂಡ ಖಾಯಿಲೆಯ 31 ಜನರು, ಒಂದನೇ ವಿಧದ ಮಧುಮೇಹದ 126 ಜನರು, 29 ಹೆಚ್‌ಐವಿ ಸೋಂಕಿತರು, 52 ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳು, ಇತರ ಸಹ ಅನಾರೋಗ್ಯದ ಪರಿಸ್ಥಿತಿಯಲ್ಲಿರುವ (Other Co-morbid Conditions) 30 ಮಕ್ಕಳು ಹಾಗೂ 36 ಜನ್ಮಜಾತ ವೈಪರೀತ್ಯ (Congenital anomalies)ಗಳನ್ನು ಹೊಂದಿರುವ ಮಕ್ಕಳು ಕಂಡುಬಂದಿದ್ದು, ಅಗತ್ಯ ವೈದ್ಯಕೀಯ ಸೌಲಭ್ಯ ನೀಡಲು ಕ್ರಮವಹಿಸಲಾಗುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಪ್ರಮುಖ ಪಾತ್ರವಹಿಸಲಿದ್ದು, ಜಿಲ್ಲೆಯ ಜನತೆ ಸಹಕಾರ ನೀಡಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….