ಬೆಂ.ಗ್ರಾ.ಜಿಲ್ಲೆ: ಸರ್ಕಾರದ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ತರಲು ಬೆಂಗಳೂರು ಒನ್ ಮಾದರಿಯಲ್ಲಿ ಪ್ರಾಂಚೈಸಿ ಆಧಾರದಲ್ಲಿ ಪ್ರತಿ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರವನ್ನು ಸ್ಥಾಪಿಸಲು ಈಗಾಗಲೇ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 37 ಗ್ರಾಮ ಪಂಚಾಯಿತಿಗಳಿಂದ ಯಾವುದೇ ಅರ್ಜಿ ಸ್ವೀಕೃತವಾಗದ ಹಿನ್ನೆಲೆ, ಅರ್ಜಿ ಸಲ್ಲಿಕೆಯಾಗದ ಗ್ರಾಮ ಪಂಚಾಯಿತಿಯಲ್ಲಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ನೆಲಮಂಗಲ: ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಾದ ಅಗಳಕುಪ್ಪೆ, ಅರೆಬೊಮ್ಮನಹಳ್ಳಿ, ದೊಡ್ಡಬೆಲೆ, ಹಸಿರುವಳ್ಳಿ, ಕೊಡಿಗೆಹಳ್ಳಿ, ಕುಲುವನಹಳ್ಳಿ, ಮಣ್ಣೆ, ಮರಳುಕುಂಟೆ, ನರಸೀಪುರ, ಶಿವಗಂಗೆ.
ದೇವನಹಳ್ಳಿ: ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಾದ ಬೆಟ್ಟಕೋಟೆ, ಜಾಲಿಗೆ, ಕನ್ನಮಂಗಲ, ಕಾರಹಳ್ಳಿ, ಕೊಯಿರಾ, ನಲ್ಲೂರು.
ದೊಡ್ಡಬಳ್ಳಾಪುರ: ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಾದ ಅರಳುಮಲ್ಲಿಗೆ, ಚನ್ನಾದೇವಿ ಅಗ್ರಹಾರ, ಹಾಡೋನಹಳ್ಳಿ, ಹಾದ್ರಿಪುರ, ಹೊನ್ನಾವರ, ಕನಸವಾಡಿ, ಮಜರಾ ಹೊಸಹಳ್ಳಿ, ಮೇಲಿನ ಜೂಗಾನಹಳ್ಳಿ (ಎಸ್.ಎಸ್.ಘಾಟಿ), ತೂಬಗೆರೆ, ತಿಪ್ಪೂರು.
ಹೊಸಕೋಟೆ: ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಾದ ದೇವನಹೊಂದಿ, ದೊಡ್ಡಹುಲ್ಲೂರು, ದೊಡ್ಡನಲ್ಲಾಳ, ಗಣಗಲೂರು, ಕಲ್ಕುಂಟೆ ಅಗ್ರಹಾರ, ಕಂಬಳಿಪುರ, ಮುಗಬಾಳ, ಮುತ್ಸಂದ್ರ, ನೆಲವಾಗಿಲು, ಓರೋಹಳ್ಳಿ ಹಾಗೂ ಶಿವನಾಪುರದಲ್ಲಿ ಯಾವುದೇ ಅರ್ಜಿ ಸ್ವೀಕೃತವಾಗಿಲ್ಲ.
ನಗರ ಪ್ರದೇಶಗಳಲ್ಲಿ ಜನರಿಗೆ ಸೇವೆ ನೀಡುತ್ತಿರುವ ಕರ್ನಾಟಕ ಒನ್, ಬೆಂಗಳೂರು ಒನ್ ಮಾದರಿಯಲ್ಲಿ ‘ಗ್ರಾಮ ಒನ್’ ಮೂಲಕ ಹಳ್ಳಿಯ ಜನತೆಗೂ ಸೇವೆ ನೀಡಲು ಉದ್ದೇಶಿಸಲಾಗಿದ್ದು, ಆಸಕ್ತರು ಅರ್ಜಿಯನ್ನು ವೆಬ್‌ಸೈಟ್: http://karnatakaone.gov.in ಅಥವಾ sevasindhu.karnataka.gov.in ಮೂಲಕ 2022ರ ಫೆಬ್ರವರಿ 7 ರೊಳಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಹೆಲ್ಪ್‌ಡೆಸ್ಕ್ ಮೊ.ಸಂ.: 7829274377, 9743669741 ಹಾಗೂ 9686579224 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.