ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ವಿದ್ಯುತ್ ಮಗ್ಗ ನೇಕಾರರ ಹಾಗೂ ಮಗ್ಗಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವ ಕೆಲಸಗಾರರ ಗಣತಿ ಹಾಗೂ ಘಟಕಗಳ ಸಮೀಕ್ಷೆ ಕಾರ್ಯವನ್ನು, ಮೆ|| ಅಕಾಡೆಮಿ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸಂಸ್ಥೆಯ 2022ರ ಫೆಬ್ರವರಿ 02 ರಿಂದ ಪ್ರಾರಂಭಿಸಲಾಗುತ್ತಿದ್ದು, ಗಣತಿ ಹಾಗೂ ಸಮೀಕ್ಷೆಯ ಕಾರ್ಯಕ್ಕೆ ಜಿಲ್ಲೆಯ ನೇಕಾರರು ಸಹಕಾರ ನೀಡುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಗಣತಿ ಹಾಗೂ ಸಮೀಕ್ಷೆಯ ನೋಂದಣಿ ಕೈಗೊಳ್ಳಲು ಜವಳಿ ಘಟಕಗಳಿಗೆ ಸಂಸ್ಥೆಯವರು ಭೇಟಿ ನೀಡಿದ ಸಂದರ್ಭದಲ್ಲಿ ಘಟಕದ ಮಾಲೀಕರು, ನೇಕಾರರು ದಾಖಲಾತಿಗಳಾದ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಪಡಿತರ 89, ಘಟಕದ ನೋಂದಣಿ ಪ್ರಮಾಣ ಪತ್ರ (ಉದ್ಯೋಗ ಆಧಾರ್/ ಉದ್ಯಮ ರೆಜಿಸ್ಟ್ರೇಷನ್/ಪಿ.ಎಂ.68), ವಿದ್ಯುತ್ ಮಂಜೂರಾತಿ ಪತ್ರ, ಇತ್ತೀಚಿನ ವಿದ್ಯುತ್ ಬಿಲ್ಲು, ಜಿ.ಎಸ್.ಸಿ ಪ್ರಮಾಣ ಪತ್ರ (ಲಭ್ಯವಿದ್ದಲ್ಲಿ), ಘಟಕವು ಬ್ಯಾಂಕ್/ಹಣಕಾಸು ಸಂಸ್ಥೆಯಿಂದ ಸಾಲ ಪಡೆದಿದ್ದಲ್ಲಿ ಸಾಲ ಮಂಜೂರಾತಿ ಪತ್ರ ನೀಡುವುದು. ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೇಕಾರರ ಹಾಗೂ ಕಾರ್ಮಿಕರು ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಪಡಿತರ ಚೀಟಿ ಹಾಗೂ ಇತ್ಯಾದಿ ದಾಖಲಾತಿಗಳನ್ನು ನೀಡುವುದು.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಗಾರ್ಮೆಂಟ್ಸ್ ತರಬೇತಿ ಕೇಂದ್ರದ ಕಟ್ಟಡ, ಕೆಐಎಡಿಬಿ ಅಪೇರಲ್ ಪಾರ್ಕ್, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಚೇರಿಗೆ ಸಂಪರ್ಕಿಸಬಹುದಾಗಿದೆ.
ಗಣತಿ ಹಾಗೂ ಸಮೀಕ್ಷೆಯ ನೋಂದಣಿ ಕೈಗೊಳ್ಳಲು ಜವಳಿ ಘಟಕಗಳಿಗೆ ಸಂಸ್ಥೆಯವರು ಭೇಟಿ ನೀಡಿದ ಸಂದರ್ಭದಲ್ಲಿ ಘಟಕದ ಮಾಲೀಕರು, ನೇಕಾರರು ಅಗತ್ಯ ದಾಖಲಾತಿಗಳನ್ನು ನೀಡಿ, ಘಟಕಗಳ ಸಮೀಕ್ಷೆ ನೋಂದಣಿ ಕಾರ್ಯದಲ್ಲಿ ಸಹಕರಿಸಬೇಕೆಂದು ಕೈಮಗ್ಗ ಮತ್ತು ಜವಳಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….