ಚಿಕ್ಕಬಳ್ಳಾಪುರ: ನಗರದ ಖಾಸಗಿ ಬಸ್ ನಿಲ್ದಾಣದ ಎದುರು ತಾಲ್ಲೂಕು ಪಂಚಾಯತಿ ಮಳಿಗೆಗಳ ಆವರಣದಲ್ಲಿರುವ ಎಸ್ ಬಿ ಐ ಬ್ಯಾಂಕಿಗೆ ಸೇರಿದ ಎಟಿಎಂ ನಲ್ಲಿ ಹಾವೊಂದು ಪ್ರತ್ಯಕ್ಷವಾಗಿದ್ದು ಹಾವು ಕಂಡ ಜನ ಶಾಕ್ ಗೆ ಒಳಗಾಗಿದ್ದಾರೆ.

ಬಸ್ ನಿಲ್ದಾಣದ ಕಡೆಯಿಂದ ಬಂದ ಹಾವೊಂದು ಜನರನ್ನ ಕಂಡು ಗಾಬರಿಯಿಂದ ಎಟಿಎಂ ನೊಳಗೆ ನುಗ್ಗಿದೆ. ಇದನ್ನ ಕಂಡ ಪಕ್ಕದ ಅಂಗಡಿ ಮಾಲೀಕ ಎಚ್ಚೆತ್ತು ಕೂಡಲೇ ಎಟಿಎಂ ನ ಬಾಗಿಲು ಬಂದ್ ಮಾಡಿದ್ದಾರೆ.

ನಂತರ ಉರಗರಕ್ಷಕ ಪ್ರಥ್ವಿರಾಜ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಉರಗರಕ್ಷಕ ಪ್ರಥ್ವಿರಾಜ್ ಎಟಿಎಂ ನೊಳಗೆ ಇದ್ದ ಹಾವನ್ನ ಸುರಕ್ಷಿತವಾಗಿ ಸೆರೆಹಿಡಿದು ಜನನಿಬಿಡ ಪ್ರದೇಶದಲ್ಲಿ ಬಿಟ್ಟಿದ್ದಾರೆ.
ಇನ್ನೂ ಪಕ್ಕದ ಅಂಗಡಿಯವರು ನೋಡಿದ ಪರಿಣಾಮ ಗ್ರಾಹಕರು ಯಾರೂ ಎಟಿಎಂ ಓಳಗೆ ಹೋಗದಂತೆ ಬಾಗಿಲು ಬಂದ್ ಮಾಡಿದ್ದಾರೆ. ಇಲ್ಲವಾದಲ್ಲಿ ಅಪ್ಪಿ ತಪ್ಪಿ ಹಾವು ಇರೋದು ಅರಿಯದೆ ಗ್ರಾಹಕರು ಹಣ ಡ್ರಾ ಮಾಡಲು ಹೋಗಿದ್ದ ಅನಾಹುತ ಸಂಭವಿಸುತ್ತಿತ್ತು..
ಸದ್ಯ ಸುರಕ್ಷಿತವಾಗಿ ಹಾವನ್ನ ಸೆರೆ ಹಿಡಿಯಲಾಗಿದ್ದು ಗ್ರಾಹಕರು ಆತಂಕವನ್ನು ಉರಗರಕ್ಷಕ ಪ್ರಥ್ವಿರಾಜ್ ದೂರ ಮಾಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
