ಹರಿತಲೇಖನಿ ದಿನಕ್ಕೊಂದು ಕಥೆ: ಶಬರಿ

ಶಬರಿ ಅರಣ್ಯದ ಬೇಡರ ನಾಯಕನ  ಮಗಳಾಗಿದ್ದಳು. ಇವಳ ಮದುವೆ ತಯಾರಿ ನಡೆಯುತ್ತಿತ್ತು. ಆ ಸಮಯದ ಭೋಜನಕ್ಕೆಂದು, ಸಾವಿರಾರು ಸಂಖ್ಯೆಯಲ್ಲಿ ಕುರಿ, ಕೋಳಿ, ಮೇಕೆ, ಜಿಂಕೆ, ಮೊಲ ಮೊದಲಾದ ಪ್ರಾಣಿಗಳನ್ನು ತಂದರು.

ಇದನ್ನು ನೋಡಿದ ಶಬರಿಯು, ಇಷ್ಟೊಂದು  ಪ್ರಾಣಿಗಳು ಏಕೆಂದು ಕೇಳಿದಳು. ಇವೆಲ್ಲ  ನಿನ್ನ ಮದುವೆಯ ದಿನ ಕಾಡಿನನ ವರಿಗೆಲ್ಲ  ಭೋಜನಕ್ಕೆ ಖಾದ್ಯ ತಯಾರಿಸಲು ತರಿಸಲಾಗಿದೆ ಎಂದು ತಿಳಿಯಿತು. ಇದನ್ನು ಕೇಳಿದ ಶಬರಿಯ ಮನಸ್ಸಿಗೆ ತುಂಬಾ ನೋವಾಯಿತು, ಅವಳು ಪ್ರಾಣಿ ಹಿಂಸೆಯನ್ನು ವಿರೋಧಿಸುತ್ತಿದ್ದಳು. ಅದರಲ್ಲೂ ಪಾಪದ ಪ್ರಾಣಿಗಳಾದ ಜಿಂಕೆ, ಮೊಲ, ಕುರಿ, ಕೋಳಿ ಇವುಗಳನ್ನೆಲ್ಲ ಕೊಂದು ಖಾದ್ಯ ತಯಾರಿಸುವುದಾದರೆ, ನನಗೆ ಎಂದೆಂದಿಗೂ ಮದುವೆ ಬೇಡ ನಾನು ಹಾಗೆ ಇರುತ್ತೇನೆ ಎಂದು, ಅವಳು ಮದುವೆಯನ್ನೇ ಮಾಡಿಕೊಳ್ಳದೆ ವೈರಾಗ್ಯದಿಂದ ಅರಮನೆ ಬಿಟ್ಟು ಹೊರಟೇಬಿಟ್ಟಳು.

ಹಾಗೆ ಸಂಚರಿಸುತ್ತಾ ಋಷ್ಯಮೂಕ ಪರ್ವತಕ್ಕೆ  ಬಂದಳು. ಅಲ್ಲಿ ತಪಸ್ವಿಗಳಾದ ಮಾತಂಗ  ಮಹರ್ಷಿಗಳಿದ್ದರು. ಇಂತಹ ತಪಸ್ವಿಗಳಾದ ಮಹಾಮಹಿಮರ ಸೇವೆಯನ್ನು ಮಾಡುತ್ತಾ  ಶಬರಿಯು ಅಲ್ಲಿಯೇ ನೆಲೆಸಿದಳು.

ಯಾವುದೇ ಅಪೇಕ್ಷೆ ಇಲ್ಲದೆ ಸೇವೆ ಮಾಡುತ್ತಾ ಸಂತೋಷದಿಂದ ಇದ್ದಳು. ಮಾತಂಗ  ಮಹಾಮುನಿಗಳಿಗೆ ವಯಸ್ಸಾಗಿ  ನಿರ್ವಾಣಹೊಂದಿದರು.

ಪ್ರಾಣ ಹೋಗುವ ಸ್ವಲ್ಪ ಸಮಯದ ಮೊದಲು ಶಬರಿಗೆ, ನೀನು ಫಲಾಪೇಕ್ಷೆ ಇಲ್ಲದೆ ನನ್ನ ಸೇವೆಯನ್ನು ಮಾಡಿರುವೆ ಶ್ರೀಮನ್ನಾರಾಯಣನು  ರಾಮನಾಗಿ ಅವತರಿಸಿ ಈ ಪರ್ವತಕ್ಕೆ ಬರುತ್ತಾನೆ. ಆಗ ನಿನಗೆ ದರ್ಶನ ನೀಡುತ್ತಾನೆ. ಅಲ್ಲಿಯವರೆಗೂ ನೀನು ಶ್ರೀರಾಮ ನಾಮ ಸ್ಮರಣೆಯನ್ನು ಮಾಡುತ್ತಾ ಇಲ್ಲೇ ಕಾಯುತ್ತಿರು ಎಂದು ಹೇಳಿದ್ದರು. ಆದರೆ ಅದಾಗಲೇ ಶಬರಿಗೆ ವಯಸ್ಸಾಗಿ ಮುದುಕಿಯಾಗಿದ್ದಳು. ಮಾತಂಗ ಮುನಿಯ ಮಾತಿನಂತೆ ಶಬರಿ ರಾಮನ ಬರುವಿಕೆಗಾಗಿ ಕಾಯುತ್ತಿದ್ದಳು. 

ಶ್ರೀರಾಮನು ಬಂದಾಗ ಅವನಿಗೆ ಏನು ಕೊಡುವುದು ಎಂದು ಯೋಚಿಸಿದ ಶಬರಿ,  ಪ್ರತಿದಿನವೂ ಮುಂಜಾನೆ ಎದ್ದು ಕೋಲೂರಿಕೊಂಡು ಕಾಡಿಗೆ ಹೋಗಿ ಸಿಹಿಯಾದ ಹಣ್ಣುಗಳನ್ನು ಸಂಗ್ರಹಿಸಿ  ಮನೆಗೆ ತಂದು ಅದನ್ನು ಸ್ವಲ್ಪ ಕಚ್ಚಿ ರುಚಿ  ನೋಡಿ ಚೆನ್ನಾಗಿದ್ದು, ಸಿಹಿಯಾಗಿರುವುದನ್ನು ಆರಿಸಿ ರಾಮನಿಗೆ ಇಡುತ್ತಿದ್ದಳು.

ಈ ಅಭ್ಯಾಸವನ್ನು ಅವಳೆಂದಿಗೂ  ತಪ್ಪಿಸಲಿಲ್ಲ ಅಂತೂ ಸಾರ್ಥಕವಾದ ಆ ದಿನ ಬಂದೇಬಿಟ್ಟಿತು. ಅಂದು ಶ್ರೀರಾಮನು ತಮ್ಮ ಲಕ್ಷ್ಮಣನೊಂದಿಗೆ, ಸೀತೆಯನ್ನು ಹುಡುಕುತ್ತಾ ಋಷ್ಯಮೂಕ ಪರ್ವತಕ್ಕೆ ಬಂದನು.

ಅಲ್ಲಿ ಅನೇಕ ಋಷಿಮುನಿಗಳು ತಪಸ್ಸಿನಲ್ಲಿ ನಿರತರಾಗಿದ್ದರು. ಅವರೆಲ್ಲ ರಾಮನ ಬರುವಿಕೆಗಾಗಿ ಕಾಯುತ್ತಿದ್ದರು. ಆದರೆ ರಾಮನು ಲಕ್ಷ್ಮಣನೊಡನೆ ಶಬರಿಯ ಬಡ ಗುಡಿಸಿಲಿಗೆ ಬಂದನು. ರಾಮನನ್ನು ನೋಡಿ ಆನಂದ ಭಾಷ್ಪ ಸುರಿಸುತ್ತಾ ರಾಮಾ  ನಿನಗಾಗಿ ಕಾಯುತ್ತಿದ್ದೆ. ಮಾತಂಗ, ಪರ್ವತದಲ್ಲಿರುವ  ಋಷಿಮುನಿಗಳ ದರ್ಶನ ಮಾಡಿ, ಎಲ್ಲಿಯೂ ನಿಲ್ಲದೆ, ನನ್ನಂಥ ಮುದುಕಿಯ  ಗುಡಿಸಲಿಗೆ ಬಂದಿದೆಯಲ್ಲ ರಾಮಾ ನಿನ್ನ ದರ್ಶನ ಭಾಗ್ಯದಿಂದ ನನ್ನ ಜನ್ಮ ಪಾವನವಾಯಿತು. ಮಾತಂಗ ಮುನಿಗಳು ತಿಳಿಸಿದಂತೆ ನಿನಗಾಗಿ ಕಾಯುತ್ತಿದ್ದೆ. ನನಗೆ ನಿನ್ನ ದರ್ಶನವಾಯಿತು.

ರಾಮ- ಲಕ್ಷ್ಮಣರನ್ನು ಕೂರಿಸಿ, ತಾನು  ಸಂಗ್ರಹಿಸಿ  ತಂದಿದ್ದ ಹಣ್ಣುಗಳನ್ನು ಕೊಟ್ಟಳು. ರಾಮನು ಶಬರಿಯ ಭಕ್ತಿಗೆ ಮೂಕನಾಗಿದ್ದನು. ಆ ಹಣ್ಣುಗಳನ್ನು ಶಬರಿ ಕಚ್ಚಿ ಎಂಜಲು ಮಾಡಿದ್ದಾಳೆಂದು ಅವನಿಗೆ  ಅನ್ನಿಸಲೇ ಇಲ್ಲ. ರುಚಿರುಚಿಯಾಗಿ ತಿಂದನು. ತಿಳಿದವರು ಹೇಳುತ್ತಾರೆ ಭಕ್ತರು ಭಕ್ತಿಯಿಂದ ಏನೇ ಕೊಟ್ಟರು ದೇವರು ಸ್ವೀಕರಿಸುತ್ತಾನೆ. ಅವನಿಗೆ ಭಕ್ತಿ ಮುಖ್ಯವೇ ಹೊರತು ವಸ್ತುಗಳಲ್ಲ. ಆದರೆ ಲಕ್ಷ್ಮಣ ಮಾತ್ರ ಇದು ಎಂಜಲು ಮಾಡಿದ ಹಣ್ಣುಗಳು ಎಂದು ಆಕ್ಷೇಪಿಸಿದನು. ರಾಮನು ಶಬರಿಯ ಭಕ್ತಿಗೆ ಸೋತು ಅವುಗಳನ್ನು ತಿಂದನು. 

ರಾಮನು ಈ ಕಾಡಿನ ಮಾರ್ಗವಾಗಿ ಬಂದ ಕಾರಣವೇನೆಂದು ಶಬರಿ ವಿಚಾರಿಸಿದಳು. ತನ್ನ ಪತ್ನಿ ಸೀತೆಯನ್ನು ರಾವಣ ಕದ್ದೊಯ್ದ ಸಂಗತಿಯನ್ನು ತಿಳಿಸಿ, ಸೀತೆಯನ್ನು ಹುಡುಕುತ್ತಿರುವ ವಿಚಾರವನ್ನು ರಾಮ ತಿಳಿಸಿದನು. ಶಬರಿಯು ಅವನಿಗೆ, ರಾಮ  ತುಂಗಭದ್ರಾ ದಡದಲ್ಲಿ  ‘ಕಿಷ್ಕಿಂದೆ’ ಎಂಬ ಪಟ್ಟಣವಿದೆ. ಅಲ್ಲಿ ಒಳ್ಳೆಯ ಗುಣಗಳುಳ್ಳ ಶಕ್ತಿಶಾಲಿಯಾದ ಸುಗ್ರೀವನು ತನ್ನ ಸಹಾಯಕರೊಂದಿಗೆ ಅಲ್ಲಿ ನೆಲೆಸಿದ್ದಾನೆ.  ಸೀತಾಮಾತೆಯನ್ನು ಹುಡುಕಲು ನಿನಗೆ ಅವನಿಂದ ಸಹಾಯ ಆಗುತ್ತದೆ. ನೀನು ಸೀತೆಯನ್ನು ಮರಳಿ ಪಡೆದು ಅಯೋಧ್ಯೆಯ ಚಕ್ರವರ್ತಿ ಆಗುತ್ತೀಯ. ಎಂದು ಹೇಳುತ್ತಾ ರಾಮನ ಪಾದದ ಮೇಲೆ ಕುಸಿದಳು. ಶ್ರೀರಾಮುಲು ಶಬರಿಗೆ ಮುಕ್ತಿ ಕೊಟ್ಟನು.

ಬರಹ: ಆಶಾ ನಾಗಭೂಷಣ. ಸಂಗ್ರಹ ವರದಿ: ನರಸಿಂಹಮೂರ್ತಿ ಬರಗೂರು. (ಕಾಲ್ಪನಿಕ ಚಿತ್ರ ಬಳಸಲಾಗಿದೆ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ನಿಖಿಲ್ ಕಾರ್ಯಕ್ರಮಕ್ಕೆ ದೊಡ್ಡಬಳ್ಳಾಪುರ JDS ಕಾರ್ಯಕರ್ತರ ಆಕ್ರೋಶದ ಬಿಸಿ.?: ಹುಸ್ಕೂರು ಆನಂದ್ ನೇತೃತ್ವದಲ್ಲಿ ಬಿ.ಮುನೇಗೌಡ ಬೆಂಬಲಿಗರ ಸಭೆ..!

ನಿಖಿಲ್ ಕಾರ್ಯಕ್ರಮಕ್ಕೆ ದೊಡ್ಡಬಳ್ಳಾಪುರ JDS ಕಾರ್ಯಕರ್ತರ ಆಕ್ರೋಶದ ಬಿಸಿ.?: ಹುಸ್ಕೂರು ಆನಂದ್ ನೇತೃತ್ವದಲ್ಲಿ

ದೊಡ್ಡಬಳ್ಳಾಪುರ ತಾಲೂಕು ಜೆಡಿಎಸ್ (JDS) ಪಕ್ಷದಲ್ಲಿ ಆಕ್ರೋಶ ಸ್ಪೋಟವಾಗಿದ್ದು, ಬಿ.ಮುನೇಗೌಡ (B.Mine Gowda, ಹುಸ್ಕೂರು ಆನಂದ್ (Huskur Anand), ಬೆಂಬಲಿಗರು ಇಂದು ಸಾಸಲು ಹೋಬಳಿ ಹೊಸಹಳ್ಳಿಯಲ್ಲಿ 500ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಸಭೆ ಸೇರಿ,

[ccc_my_favorite_select_button post_id="121521"]
ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳು (Brokers) ಎಲ್ಲೆಡೆ ಇರುತ್ತಾರೆ ಆದರೆ ಅವರನ್ನು ಕಚೇರಿಯೊಳಗೆ ಬಿಟ್ಟುಕೊಳ್ಳದೇ ಹೊರಗೆ ಕಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ( Cm Siddaramaiah) ಅಧಿಕಾರಿಗಳಿಗೆ ಸೂಚಿಸಿದರು

[ccc_my_favorite_select_button post_id="121435"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಏನಾಗುತ್ತಿದೆ IPLನಲ್ಲಿ? ಕ್ರಿಕೆಟ್ ಮೈದಾನದಲ್ಲೇ ವೇಪ್ ಸೇವನೆ.. ರಿಯಾನ್ ಪರಾಗ್ ಗೆ ಬಂಧನ ಭೀತಿ.!| Video ನೋಡಿ

ಏನಾಗುತ್ತಿದೆ IPLನಲ್ಲಿ? ಕ್ರಿಕೆಟ್ ಮೈದಾನದಲ್ಲೇ ವೇಪ್ ಸೇವನೆ.. ರಿಯಾನ್ ಪರಾಗ್ ಗೆ ಬಂಧನ

ಐಪಿಎಲ್‌ನ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ನಾಯಕ ರಿಯಾನ್ ಪರಾಗ್ (Riyan Parag) ಪಂದ್ಯದ ವೇಳೆ ನಿಷೇಧಿತ 'ಇ-ಸಿಗರೇಟ್' (Vape) ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

[ccc_my_favorite_select_button post_id="121495"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ಬಿಸಿಲ ಬೇಗೆಯಿಂದ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಜನತೆ ತತ್ತರಿಸುತ್ತಿರುವ ನಡುವೆಯೇ ಇಂದು ಮಧ್ಯಾಹ್ನದಿಂದ ತಾಲೂಕಿನ ಹಲವೆಡೆ ಮಳೆಯ ಸಿಂಚನವಾಗಿದೆ.

[ccc_my_favorite_select_button post_id="121471"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]