ಪ್ರಶಸ್ತಿಗೆ ಪ್ರಯತ್ನಿಸದೆ ಸಾಧನೆ ಮಾಡಿದಾಗ ಆ ಪ್ರಶಸ್ತಿಯ ಗೌರವ‌ ಹೆಚ್ಚಾಗುತ್ತದೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಸಾಧನೆ ಮಾಡಿ ಪ್ರಶಸ್ತಿಗಾಗಿ ಪ್ರಯತ್ನ ಮಾಡದೇ ಇರುವವರಿಗೆ ಪ್ರಶಸ್ತಿ ದೊರೆಯುತ್ತದೆ. ಕೆಲವರು ಸಾಧನೆ ಮಾಡಿ ಪ್ರಶಸ್ತಿಗಾಗಿ ಸಾಕಷ್ಟು ಪ್ರಯತ್ನ‌ ಮಾಡುತ್ತಾರೆ. ಕೆಲವರು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಸುಮ್ಮನಿರುತ್ತಾರೆ. ಅವರಿಗೆ ನೊಬೆಲ್ ಪ್ರಶಸ್ತಿ ಹುಡುಕಿಕೊಂಡು ಬರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. 

ಅವರು ಮಂಗಳವಾರ ರಾತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ, ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ನಾನಾ ರೀತಿಯಲ್ಲಿ ಪ್ರಶಸ್ತಿ ಇದೆ. ನಾವು ಚಿಕ್ಕವಯಸ್ಸಿನವರಾಗಿದ್ದಾಗ ನಾವು ಮಾತು ಉಚ್ಛರಿಸಿದಾಗ ನಮ್ಮ ತಾಯಿ ಪ್ರೀತಿಯಿಂದ ಮುತ್ತಿನ ಪ್ರಶಸ್ತಿ ಕೊಟ್ಟಾಗ ಆ ಪ್ರಶಸ್ತಿಯನ್ನು ಎಂದೂ ಮರೆಯಲು ಆಗುವುದಿಲ್ಲ. ಶಾಲೆಯಲ್ಲಿ ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿ ಬೆನ್ನು ತಟ್ಟಿದಾಗ,ಯೌವನದಲ್ಲಿ ಮಿತ್ರರು ನಮ್ಮ ಸಾಧನೆ ಹಾಗೂ ನಾಯಕತ್ವ ಮೆಚ್ಚಿ ಹೊಗಳಿದಾಗ ಅದೊಂದು ರೀತಿಯ ರೋಮಾಂಚಕ ಪ್ರಶಸ್ತಿ. ಬದುಕಿನ ಎಲ್ಲ ಸ್ಥರಗಳಲ್ಲಿ ಹಲವು ರೀತಿಯ ಪ್ರಶಸ್ತಿಗಳು ದೊರೆಯುತ್ತವೆ ಎಂದು ಸಿಎಂ ಹೇಳಿದರು.

ಡೈನಮೈಟ್ ತಯಾರಕ‌ ಆಲ್‌ಫ್ರೆಡ್‌ ನೊಬೆಲ್‌ ಸಾಕಷ್ಟು ಹಣ ಮಾಡಿದ್ದರು. ಅಕಸ್ಮಾತ್ ಆಗಿ ಒಂದು ದಿನ ಅವರು ಜೀವಂತವಾಗಿದ್ದಾಗಲೇ ಪತ್ರಿಕೆಯೊಂದರಲ್ಲಿ ಅವರ ಸಾವಿನ‌ಸುದ್ದಿ ಬಂತು. ಅವರ ವಿರುದ್ದ ಕೆಟ್ಟ ಹೆಡ್ಲೈನ್ ಬಂದಿದ್ದು ನೋಡಿ ದುಃಖದಿಂದ ನನ್ನ ಹೆಸರನ್ನು‌ ಜನರು‌ ಈ ರೀತಿ‌ ನೆನಪಿಡುತ್ತಾರಾ ಎಂದು ಬೇಸರ ಪಟ್ಟುಕೊಂಡು ಪರಿವರ್ತನೆಗೊಂಡು ಡೈನಮೆಟ್‌ ತಯಾರಿಸುವುದನ್ನು‌ ನಿಲ್ಲಿಸಿದ. ಅದರಿಂದ ಬಂದ ಅಪಾರ ಹಣ ಮತ್ತು ಆಸ್ತಿಯನ್ನು ಉತ್ತಮ ಸಾಧನೆ ಮಾಡಿದವರಿಗೆ ನೊಬೆಲ್‌ ಪ್ರಶಸ್ತಿ ಕೊಡಲು ಮಿಸಲಿಟ್ಟರು. ಇದು ಉತ್ತಮ ಬದಲಾವಣೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇಂದು ಇಲ್ಲಿ ಪ್ರಶಸ್ತಿ ಪಡೆದವರು ತಮ್ಮ ಜೀವನದುದ್ದಕ್ಕೂ ಪ್ರಶಸ್ತಿ ಪಡೆಯಲು ಪ್ರಯತ್ನ ಮಾಡಿಲ್ಲ. ತಮ್ಮ ಪಾಡಿಗೆ ಅವರು ಸಾಧನೆ ಮಾಡಿಕೊಂಡು ಬಂದಿದ್ದಾರೆ. ಇವರುಗಳನ್ನು ನಮ್ಮ ಆಯ್ಕೆ ಸಮಿತಿ ಗುರುತಿಸಿದ್ದಾರೆ. ಹೀಗೆ ಕೇಳದೇ ಪ್ರಶಸ್ತಿ ಪಡೆಯುವುದರಿಂದ ಆ ಪ್ರಶಸ್ತಿಗೆ ಮೆರುಗು ತಂದಿದೆ, ಗೌರವ ಬಂದಿದೆ. ಹಣ ಕೊಟ್ಟರೆ ಪ್ರಶಸ್ತಿ ಸಿಗುತ್ತದೆ. ಆದರೆ ಬದುಕಿನಲ್ಲಿ ಸಾಧಕರಾಗಿ ಯಶಸ್ವಿ ಜೀವನವನ್ನು ನಡೆಸುವುದೇ ದೊಡ್ಡ ಪ್ರಶಸ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬದುಕು ದೊಡ್ಡ ಪರೀಕ್ಷೆ. ನಾವು ಅಂದುಕೊಂಡದ್ದು ಯಾವುದೂ ಆಗುವುದಿಲ್ಲ. ಬದುಕಿನಲ್ಲಿ ಮುಗ್ಧತೆ ಕಾಪಾಡಿಕೊಳ್ಳುವುದು ಕಷ್ಟ. ನಮ್ಮಲ್ಲಿರುವ ಕುತೂಹಲ ನಮ್ಮ ಮುಗ್ಧತೆಯನ್ನು ಕಡಿಮೆಗೊಳಿಸುತ್ತದೆ. ಜತೆಗೆ ನಮ್ಮ ಆತ್ಮಸಾಕ್ಷಿಗಾಗಿ ಬುದುಕುವುದೂ ಬಹಳ ಕಷ್ಟ. ಇವೆರಡರಲ್ಲೂ ಜಯಶಾಲಿಗಳಾಗುವರು ದೊಡ್ಡ ಸಾಧಕರಾಗುತ್ತಾರೆ. ಕೆಲವು ಕ್ಷೇತ್ರಗಳಲ್ಲಿ ಕೆಲವರು ಅಸಮಾನ್ಯ ಸಾಧನೆ ಮಾಡುತ್ತಾರೆ. ಅದು ಸಮಾಜಕ್ಕೆ ತಿಳಿದು, ಇತರರಿಗೆ ಪ್ರೇರಣೆ ಆಗಬೇಕು. ಅದಕ್ಕಾಗಿ ಸಂಸ್ಥೆಗಳು ಸರ್ಕಾರಗಳು ಪ್ರಶಸ್ತಿಯನ್ನು ಕೊಡುತ್ತದೆ. ಜತೆಗೆ ಪ್ರಶಸ್ತಿ ಪಡೆದ ವ್ಯಕ್ತಿ ಇನ್ನಷ್ಟು ಉತ್ತಮ ಕೆಲಸ ಮಾಡಲು ಪ್ರೇರಣೆಯಾಗುತ್ತದೆ. ಸಮಾಜದಲ್ಲಿ ಸರಿಯಾದವರನ್ನು ಗುರುತಿಸಿ ಪ್ರಶಸ್ತಿ ಕೊಟ್ಟಾಗ ಪ್ರಶಸ್ತಿಗೂ ಗೌರವ ಬರುತ್ತದೆ, ಪ್ರಶಸ್ತಿ ಪಡೆದವರಿಗೂ ಗೌರವ ಹೆಚ್ಚುತ್ತದೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

ಪುನೀತ್ ಗೆ ಪ್ರಶಸ್ತಿ ಕೊಟ್ಟದ್ದಕ್ಕೆ ಇಡೀ ಕರ್ನಾಟಕ ಸಂಭ್ರಮಿಸಿದೆ: ಪುನೀತ್ ರಾಜ್‌ಕುಮಾರ್ ಸಣ್ಣ‌ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ‌. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರ ಮನದಾಳದಲ್ಲಿ ಸ್ಥಾನ ಪಡೆದಿದ್ದಾರೆ. ಎಲ್ಲೇ ಹೋದರೂ ಪುನೀತ್ ರಾಜ್ ಕುಮಾರ್ ಫೋಟೋ ಇಟ್ಟು ಪೂಜೆ ಮಾಡಿರುವುದನ್ನು ನಾವು ನೋಡ್ತೀವಿ. ಮಾನವೀಯತೆ ಇರುವ ವ್ಯಕ್ತಿ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದಾಗ ಅದರ ಪ್ರಭಾವ ಜನರ ಮೇಲೆ ಇರುತ್ತದೆ. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದಕ್ಕೆ ಇಡೀ ಕರ್ನಾಟಕ ಸಂಭ್ರಮಿಸಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಸಣ್ಣ ವಯಸ್ಸಿನ ಸಾಧಕರಿಗೂ ರಾಜ್ಯೋತ್ಸವ ಪ್ರಶಸ್ತಿ: ವಯಸ್ಸು ಮತ್ತು ಸಾಧನೆಗೆ ಸಂಬಂಧ ಇಲ್ಲ. ಯಾವುದೇ ವಯಸ್ಸಿನಲ್ಲೂ ಸಾಧನೆ ಮಾಡಬಹುದು. ಎಲ್ಲ ದೊಡ್ಡ ಸಾಧಕರೂ ಸಣ್ಣ ವಯಸ್ಸಲ್ಲೇ ಜಗತ್ತು ಬಿಟ್ಟು ಹೋಗಿದ್ದಾರೆ. 60 ವರ್ಷ ಮೀರಿರುವವರಿಗೆ ಮಾತ್ರ ಪ್ರಶಸ್ತಿ ಎನ್ನುವುದು ತಪ್ಪು ನಿರ್ಧಾರ. ಸಣ್ಣ ವಯಸ್ಸಿನ ಸಾಧಕರಿಗೂ ಪ್ರಶಸ್ತಿ ಕೊಟ್ಟರೆ ಅವರು ಮುಂದೆ ಇನ್ನೂ ದೊಡ್ಡ ಸಾಧನೆ ಮಾಡಬಹುದು. ಇದು ಇತರ ಯುವಕರಿಗೂ ಪ್ರೇರಣೆ ಆಗುತ್ತದೆ. ಮುಂದಿನ ವರ್ಷ ಈ ಬಗ್ಗೆ ಬದಲಾವಣೆ ಆಗುತ್ತದೆ. ವಯಸ್ಸಿನ ಗಡಿ ಇಲ್ಲದೇ ನಿಜವಾದ ಸಾಧಕರಿಗೆ ಪ್ರಶಸ್ತಿ ಕೊಡುವ ವ್ಯವಸ್ಥೆ ಆಗುತ್ತದೆ. ಈ ಬಗ್ಗೆ ಕೊರ್ಟ್‌ಗೆ ಅಫಿಡವಿಟ್‌ ನೀಡಿ ನಿಯಮ ಬದಲಾಯಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಾಡು ಕಟ್ಟುವ ಕೆಲಸದಲ್ಲಿ ಜನರು ಪಾಲುದಾರರಾಗಬೇಕು: ಇದುವರೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವವರನ್ನು ಸಂಪರ್ಕ ಮಾಡಿ ಕನ್ನಡ ನಾಡನ್ನು ಹೇಗೆಲ್ಲಾ ಕಟ್ಟಬಹುದು ಎನ್ನುವ ಅವರ ಅಭಿಪ್ರಾಯ ಪಡೆದುಕೊಳ್ಳುವ ಕೆಲಸ ಆಗಬೇಕು. ವ್ಯತಿರಿಕ್ತ ಪಡಿಸ್ಥಿತಿಯಲ್ಲೂ ಅವರು ಗಟ್ಟಿಯಾಗಿ ನಿಂತು ಸಾಧನೆ ಮಾಡಿದ್ದರ ಅವರ ಅನುಭವ ಮತ್ತು ಸಂದೇಶದ ಒಂದು ಮಾರ್ಗದರ್ಶಿ ಕೃತಿ ಹೊರತರಲಾಗುವುದು. ನಾಡು ಕಟ್ಟಲು ಅಭಿಪ್ರಾಯದ ಸಾಮ್ಯತೆ ಬರುವ ಅವಶ್ಯಕತೆ ಇದೆ. ನಾಡು ಕಟ್ಟುವ ವಿಚಾರದಲ್ಲಿ ಒಂದಾಗಬೇಕು. ಜನರನ್ಮು ಫಲಾನುಭವಿಗಳಾಗಿ ಮಾಡದೇ ಅವರನ್ನು ಪಾಲುದಾರರನ್ನಾಗಿ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ: ನಾಳೆಯಿಂದ ಮೂರು ದಿನ ರಾಜ್ಯ ದಲ್ಲಿ ಬಂಡವಾಳ ಹೂಡಿಕೆಯ ದೊಡ್ಡ‌ ಮೇಳ ನಡೆಯುತ್ತಿದೆ. ಇದರಿಂದ ಮುಂದಿನ 2-3 ವರ್ಷಗಳಲ್ಲಿ 5 ಲಕ್ಷ ಕೋಟಿ ಬಂಡವಾಳ ಹರಿದುಬರಲಿದೆ. ಎಲ್ಲ ರಂಗದಲ್ಲಿ ಕರ್ನಾಟಕ ಮುಂದೆ ತರಬೇಕು. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಆಗುವ ಕೆಲಸ ಆಗಬೇಕು. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ  ಆತ್ಮನಿರ್ಭರ‌ ಭಾರತ‌ ನಿರ್ಮಾಣ ಮಾಡುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಸಮಸ್ತ ಕನ್ನಡ ನಾಡಿನ ಜನರ ಆಶೀರ್ವಾದ ಅಗತ್ಯ ಇದೆ. ಕನ್ನಡ ನಾಡಿನಲ್ಲಿ ಹುಟ್ಡಿರುವ ನಾವು ಪುಣ್ಯವಂತರು. ಮತ್ತೊಂದು ಜನ್ಮ ಇದ್ದರೆ ಅದು ಕನ್ನಡ ನಾಡಿನಲ್ಲೇ ಇರಲಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವರುಗಳಾದ ಆರ್.ಅಶೋಕ್, ಸುನಿಲ್ ಕುಮಾರ್, ಶಾಸಕರಾದ ಉದಯ ಗರುಡಾಚಾರ್, ಸಂಸದರಾದ ತೇಜಸ್ವಿ ಸೂರ್ಯ, ವಿಧಾನ ಪರಿಷತ್ ಸದಸ್ಯ ಟಿ ಎ ಸರವಣ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡನೆ ಮಸೂದೆಗೆ ಸೋಲಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ Narendra Modi) ಅವರು ನೀಡಿದ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್‌ (Congress) ಹೆಸರು ಮಾತ್ರವೇ ಕೇಳಿಸಿದೆ

[ccc_my_favorite_select_button post_id="121182"]
ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡನೆ ಮಸೂದೆಗೆ ಸೋಲಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ Narendra Modi) ಅವರು ನೀಡಿದ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್‌ (Congress) ಹೆಸರು ಮಾತ್ರವೇ ಕೇಳಿಸಿದೆ

[ccc_my_favorite_select_button post_id="121182"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ದೊಡ್ಡಬಳ್ಳಾಪುರ: ಹಾಡಹಗಲೇ 2 ಮನೆ ಬೀಗ ಒಡೆದು ಒಡವೆ, ನಗದು ಕಳ್ಳತನ..! ಮಹಿಳೆಯ ಮಾಂಗಲ್ಯ ಸರ ಕಸಿದ ದುಷ್ಕರ್ಮಿಗಳು

ದೊಡ್ಡಬಳ್ಳಾಪುರ: ಹಾಡಹಗಲೇ 2 ಮನೆ ಬೀಗ ಒಡೆದು ಒಡವೆ, ನಗದು ಕಳ್ಳತನ..! ಮಹಿಳೆಯ

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಮನೆ ಬೀಗ ಒಡೆದು, ಒಡವೆ, ನಗದು ( jewellery, cash) ಕಳ್ಳತನ ನಡೆಸಿರುವ ಪ್ರಕರಣಗಳು ವರದಿಯಾಗಿದ್ದು, ತಾಲೂಕಿನ ಜನರನ್ನು ಆತಂಕಕ್ಕೆದೂಡಿದೆ.

[ccc_my_favorite_select_button post_id="121201"]
ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ಕ್ಯಾಂಟರ್ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ (Accident) ಸಂಭವಿಸಿ, ಓರ್ವ ಸಾವನಪ್ಪಿರುವ ಘಟನೆ ತಾಲೂಕಿನ *** ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.

[ccc_my_favorite_select_button post_id="121087"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!