ಚಿಕ್ಕಬಳ್ಳಾಪುರ: ಈ ಪ್ರೀತಿ ಪ್ರೇಮ ಪ್ರಣಯ ಅನ್ನೊದೆ ಹಾಗೆ..ಪ್ರೀತಿ ಪ್ರೇಮ ಅನುರಾಗ ಬಂಧನ ಆದರೆ ಅದನ್ನು ಬಿಡಿಸೋದು ಕಷ್ಟ. ಸ್ವತಃ ತನ್ನ ಅಕ್ಕನ ಗಂಡ ಅಂದರೆ ಬಾವನನ್ನೇ ಪ್ರೀತಿಸಿದ ವಿದ್ಯಾವಂತೆಯೊಬ್ಬರು, ಹಠಕ್ಕೆ ಬಿದ್ದು ಆತನನನ್ನು ಮದುವೆ ಆಗಿದ್ದಳು. ಆದರೆ ಕೈಹಿಡಿದ ಗಂಡನನ್ನು ಬಿಟ್ಟು ಕೊರಿಯರ್ ಬಾಯ್ ನನ್ನು ಪ್ರೀತಿಸಿದ ಆಕೆ, ಆತನನ್ನೂ ಮದುವೆ ಮಾಡಿಕೊಂಡು ಒಂದೆಡೆ ಕಾನೂನು ತೊಡಕು, ಮತ್ತೊಂದೆಡೆ ತಂದೆ ತಾಯಿಯ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
ಈ ಕಥಾನಕದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಮಹಿಳಾ ಠಾಣೆ ಮುಂದೆ ನಮ್ಮ ಮಗಳನ್ನು ನಮ್ಮ ಜೊತೆ ಕಳುಹಿಸಿಕೊಡಿ ಎಂದು ಆ ಇಬ್ಬರು ಗಂಡಂದಿರ ಮುದ್ದಿನ ಹೆಂಡತಿಯ ವೃದ್ದ ತಂದೆ ತಾಯಿ, ಅತ್ತು ಕರೆದು ಗೋಳಾಡಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮಣಿಗಾನಹಳ್ಳಿ ನಿವಾಸಿ ಜಯಮ್ಮ ನಾರಾಯಣಪ್ಪ ದಂಪತಿಗೆ ಮೂರು ಜನ ಹೆಣ್ಣು ಮಕ್ಕಳು. ಅದರಲ್ಲಿ ದೊಡ್ಡ ಮಗಳು ಮಂಜುಳಾರನ್ನು ಆಂಧ್ರದ ವಿ ಕೋಟೆ ಗ್ರಾಮದ ಸುಬ್ರಮಣ್ಯಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ರು.
ಮಂಜುಳಾರ ಕೊನೆಯ ತಂಗಿಯೇ ದಿವ್ಯಾ. ದಿವ್ಯಾ ಸ್ವತಃ ತನ್ನ ಅಕ್ಕನ ಗಂಡ ಬಾವ ಸುಬ್ರಮಣ್ಯ ನನ್ನು ಪ್ರೀತಿಸಿದಳು. ಕಾಡಿ ಬೇಡಿ ಅತ್ತು ಕರೆದು ಭಾವನನ್ನೇ ಮದುವೆ ಮಾಡಿಕೊಂಡಿದ್ದಳು ಎನ್ನಲಾಗಿದೆ. ಆದರೆ ಮದುವೆಯಾಗಿ ಕೇವಲ ಹತ್ತು ತಿಂಗಳು ಅಷ್ಟೆ… ಅಷ್ಟರಲ್ಲೆ ತಾಜಾ ಆಗಿ ಪರಿಚಯಸ್ಥನಾದ ಕೊರಿಯರ್ ಬಾಯ್ ಚಂದ್ರಶೇಖರ್ ಎನ್ನುವವನನ್ನು ಪ್ರೀತಿಸತೊಡಗಿದಳು. ಮನೆಯವರ ವಿರೋಧದ ನಡುವೆ ಮದುವೆಯೂ ಮಾಡಿಕೊಂಡಳು. ಇದರಿಂದಾಗಿ ದಿವ್ಯಾ ಪೋಷಕರಿಗೆ ಈ ಗೋಳಾಟ.
ಅಸಲಿಗೆ ದಿವ್ಯಾ ಡಬಲ್ ಗ್ರಾಜುಯೇಟ್..! ದಿವ್ಯಾ ಬಿ.ಎಡ್.ಎಂ.ಎಸ್ಸಿ ವಿದ್ಯಾಭ್ಯಾಸ ಮಾಡಿದ್ದು, ಮುಳಬಾಗಿಲಿನ ಡಿ.ಸಿ.ಸಿ ಬ್ಯಾಂಕ್ ನಲ್ಲಿ ಸೀನಿಯರ್ ಅಸಿಸ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ
ಮದುವೆಯಾಗಿ ಕೆಲ ತಿಂಗಳಲ್ಲೆ ಕೋಲಾರದ ಕೆ.ಜೆ.ಎಫ್ ನ ಕಂಬಂಪಲ್ಲಿ ನಿವಾಸಿ 29 ವರ್ಷದ ಕೊರಿಯರ್ ಬಾಯ್ ಚಂದ್ರಶೇಖರ್ ಗೆ ಪರಿಚಯವಾಗಿ. ಪ್ರೀತಿ ಪ್ರೇಮ ಅಂತಾ ಸುತ್ತಾಡಿದ್ದಾರೆ. ಇದ್ದನ್ನರಿತ ಆಕೆಯ ಪೋಷಕರು ಮಗಳು ದಿವ್ಯಾರನ್ನು ಕೋಲಾರ ಜಿಲ್ಲೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಡಿ.ಸಿ.ಸಿ ಬ್ಯಾಂಕ್ ಗೆ ವರ್ಗಾವಣೆ ಮಾಡಿಸಿದ್ದರು.
ಅಲ್ಲಿಯೂ ದಿವ್ಯ ಜೋಡಿ ತನ್ನ ಪ್ರೇಮ ಪುರಾಣ ಮುಂದುವರೆಸಿದೆ. ದಿವ್ಯಾ-ಚಂದ್ರಶೇಖರ್ ಪ್ರೇಮಕ್ಕೆ, ಮರು ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾದ ಕಾರಣ ಇಬ್ಬರೂ ಇದ್ದಕ್ಕಿದ್ದಂತೆ ಪರಾರಿ ಆಗಿದ್ದರು. ಇದರಿಂದ ಆಕೆಯ ಪೋಷಕರು ಚಿಕ್ಕಬಳ್ಳಾಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಪೊಲೀಸರು ಇಬ್ಬರನ್ನೂ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ. ಇಬ್ಬರೂ ಜೂನ್ 10ರಂದೇ ಮದುವೆ ಆಗಿದ್ದು, ಅಗಸ್ಟ್ 10ರಂದು ಬಂಗಾರಪೇಟೆಯಲ್ಲಿ ಮದುವೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಿಂದ ತಮ್ಮನ್ನು ತಮ್ಮ ಪಾಡಿಗೆ ಬದುಕಲು ಬಿಡಿ ಎಂದು ಪೊಲೀಸರು ಹಾಗೂ ತಂದೆ ತಾಯಿಯ ಎದುರು ಗೋಗರೆದಿದ್ದಾರೆ.
ದಿವ್ಯಾ ಪೋಷಕರು ಸುಮಾರು 15 ಲಕ್ಷ ರೂಪಾಯಿ ಖರ್ಚು ಮಾಡಿ ಮಗಳಿಗೆ ಬಾವನ ಜೊತೆಯೇ ಮೊದಲ ಮದುವೆ ಮಾಡಿಸಿದ್ದರು. ದಿವ್ಯಾಳಿಗೆ ಡಿ.ಸಿ.ಸಿ ಬ್ಯಾಂಕ್ ನಲ್ಲಿ ಉದ್ಯೋಗವನ್ನೂ ಕೊಡಿಸಿದ್ದರಂತೆ..! ಆದರೆ ಭಾವನ ಜೊತೆ ಮದುವೆ ಬೇಡ ಅಂದರೂ ಕೇಳಿರಲಿಲ್ಲ. ಈಗ ಬಾವನನ್ನು ಬಿಟ್ಟು ಬೇರೊಬ್ಬರ ಜೊತೆ ಮದುವೆ ಆಗುವುದಕ್ಕೆ ವಿರೋಧವಿದ್ರೂ ಕೇಳದ ದಿವ್ಯಾ, ಹೊಸ ಪ್ರಿಯತಮ ಚಂದ್ರಶೇಖರನ ಪ್ರೀತಿಸಿ ಮದುವೆ ಆಗಿ, ಒಂದೆಡೆ ಕಾನೂನು ತೊಡಕು, ಮತ್ತೊಂದೆಡೆ ಮನೆಯವರ ವಿರೋಧ ಕಟ್ಟಿಕೊಂಡಿದ್ದಾರೆ.
ಪ್ರಸ್ತುತ ಪ್ರೀತಿಸಿದ ಚಂದ್ರುವಿನ ಜೊತೆಯೇ ದಿವ್ಯಾ ತೆರಳಿದ್ದಾರೆ. ಮಾಯೆಯೆಂಬ ಪ್ರೀತಿ-ಪ್ರೇಮದ ಕಥೆ ಮುಂದೆ ಏನು ತಿರುವುದು ಪಡೆಯುವುದೋ ಕಾದುನೋಡಬೇಕಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

