ದೊಡ್ಡಬಳ್ಳಾಪುರ, (ನ.15): ರಾಜ್ಯ ಸರ್ಕಾರದಿಂದ ಅನುದಾನಗಳನ್ನು ತಂದು, ತಾಲೂಕಿನ ಅಭಿವೃದ್ಧಿ ಮಾಡುವಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಸಂಪೂರ್ಣ ವಿಫಲರಾಗಿದ್ದಾರೆಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಆರೋಪಿಸಿದ್ದಾರೆ.

ತಾಲೂಕಿನ ದೊಡ್ಡತುಮಕೂರು ಗ್ರಾಮದಲ್ಲಿ ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ಜನತಾ ಯುವ ಮಿತ್ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅನುದಾನ ನೀಡುತ್ತಿಲ್ಲವೆಂದು ಆರೋಪಿಸುವ ಶಾಸಕ ಟಿ.ವೆಂಕಟರಮಣಯ್ಯ, ಜೆಡಿಎಸ್ ಶಾಸಕರಿರುವ ಪಕ್ಕದ ದೇವನಹಳ್ಳಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೋಡಬೇಕಿದೆ. ಅಲ್ಲಿಯೂ ವಿರೋಧ ಪಕ್ಷದ ಶಾಸಕರೇ ಅಧಿಕಾರದಲ್ಲಿದ್ದಾರೆ. ಅಲ್ಲಿಗೆ ಸಿಗುತ್ತಿರುವ ಅನುದಾನ ದೊಡ್ಡಬಳ್ಳಾಪುರಕ್ಕೆ ಏಕಿಲ್ಲ…? ಕಾರಣವಿಷ್ಟೇ, ಸರ್ಕಾರದಿಂದ ಅನುದಾನವನ್ನು ತಂದು ತಾಲೂಕಿನ ಅಭಿವೃದ್ಧಿ ಮಾಡುವಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಸಂಪೂರ್ಣ ವಿಫಲರಾಗಿದ್ದಾರೆ.
ಬಾರ್ ಹೆಚ್ಚಳ: ತಾಲೂಕಿನ ಪ್ರತಿ ಹೋಬಳಿಗಳಲ್ಲಿ ಎರಡೆರಡು ಬಾರ್‌ಗಳು ತೆರೆಯುತ್ತಿವೆ ಹೊರತು, ದೊಡ್ಡಬಳ್ಳಾಪುರ ತಾಲೂಕು ಅಭಿವೃದ್ಧಿ ವಂಚಿತವಾಗುತ್ತಿದೆ. ಈ ಮುಂಚೆ ತಾಲೂಕಿನಲ್ಲಿ ಕೇವಲ 20 ಬಾರ್‌ಗಳು ಇದ್ದವು. ಅದರೀಗ 100ಕ್ಕೂ ಹೆಚ್ಚು ಬಾರ್‌ಗಳು ಆರಂಭವಾಗಿ ಶ್ರಮಿಕ ವರ್ಗ ಕಷ್ಟಕ್ಕೆ ಒಳಗಾಗುತ್ತಿದೆ ಎಂದು ಹರೀಶ್ ಗೌಡ ಆರೋಪಿಸಿದರು.
ರಾಜ್ಯದ ಅಭಿವೃದ್ಧಿಗೆ ಜೆಡಿಎಸ್ ಅನಿವಾರ್ಯ: ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ – ಕಾಂಗ್ರೆಸ್’ನ ಜನ ವಿರೋಧಿ ನೀತಿಯಿಂದಾಗಿ ರಾಜ್ಯದ ಜನತೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿಸುವ ಹೊಣೆಗಾರಿಗೆ ನಮ್ಮೆಲ್ಲರ ಹೊಣೆಗಾರಿಕೆ ನಮ್ಮದಾಗಿದೆ ಎಂದರು.
ಅವಕಾಶ ಸಿಕ್ಕರೆ ಸ್ಪರ್ಧೆ: ಮುಂಬರುವ ಚುನಾವಣೆಯಲ್ಲಿ ಯುವಕರಿಗೆ ಜೆಡಿಎಸ್ ಪಕ್ಷ ಆಧ್ಯತೆ ನೀಡುತ್ತಿದ್ದು, ತಾಲೂಕಿನ ಹಿರಿಯರು, ಪಕ್ಕದ ವರಿಷ್ಠರು ಅಭಿಲಾಷೆ ಇಟ್ಟು ನನ್ನನ್ನು ಅಭ್ಯರ್ಥಿಯಾಗುವ ಅವಕಾಶ ನೀಡಿದಲ್ಲಿ, ಪಕ್ಷದ ಎಲ್ಲರ ವಿಶ್ವಾಸವನ್ನು ಪಡೆದು ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಅಪ್ಪಯ್ಯಣ್ಣ, ಹಿರಿಯ ಮುಖಂಡರಾದ ಎ.ನರಸಿಂಹಯ್ಯ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಆದಿಲಕ್ಷ್ಮೀ, ಸದಸ್ಯರಾದ ತ.ನ.ಪ್ರಭುದೇವ್, ನಾಗರಾಜು, ಟಿಎಪಿಎಂಸಿಎಸ್ ಮಾಜಿ ಅಧ್ಯಕ್ಷರಾದ ಅಶ್ವಥ್ ನಾರಾಯಣ್, ಆನಂದ್, ಮುಖಂಡರಾದ ದಾಸಗೊಂಡನಹಳ್ಳಿ ಚಂದ್ರಣ್ಣ, ಕುಂಟನಹಳ್ಳಿ ಮಂಜುನಾಥ್, ದೇವರಾಜ್, ಮುದ್ದಣ್ಣ, ಗೌರೀಶ್, ಪ್ರಭಾಕರ್, ನಿವೃತ್ತ ಶಿಕ್ಷಕ ಚಿಕ್ಕಣಪ್ಪ, ಪ್ರಭಾಕರ್, ಯುವ ಮುಖಂಡರಾದ ದೀಪು, ರಘು, ರಾಜಣ್ಣ, ಮುದ್ದಣ್ಣ, ಚಿನ್ನತಾಯಪ್ಪ, ಆರೂಢಿ ರಾಮಣ್ಣ, ನರಸಿಂಹರಾಜು ಸೇರಿದಂತೆ ತಾಲೂಕಿನ ವಿವಿಧ ಹೋಬಳಿಗಳ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
