ದೊಡ್ಡಬಳ್ಳಾಪುರ(ನ.17): ತಾಲೂಕಿನ ಎಜಾಕ್ಸ್ ಸರ್ಕಾರಿ ಪಬ್ಲಿಕ್ ಶಾಲೆಗೆ ರಾಜ್ಯ ಪಠ್ಯ ಪುಸ್ತಕ ವ್ಯವಸ್ಥಾಪಕ ನಿರ್ದೇಶಕ ಡಿ.ವೀರಣ್ಣ ಚತ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಶಾಲೆಯಲ್ಲಿ ನಡೆಯುವ ಅಕ್ಷರ ದಾಸೋಹದ ಕುರಿತು ಪರೀಕ್ಷಿಸಿ, ಶಾಲೆಯ ಸುವ್ಯವಸ್ಥೆ ಮೆಚ್ಚಿಗೆ ಸೂಚಿಸಿದರು.

ಈ ವೇಳೆ ಶಾಲೆಯ ಚಿತ್ರ ಕಲಾ ಶಿಕ್ಷಕ ತಾಯಪ್ಪ ನಡುವಿನಮನಿ ಚಿತ್ರಿಸಿರುವ ಭಾವ ಚಿತ್ರವನ್ನು ನೆನಪಿನ ಕಾಣಿಕೆಯಾಗಿ ಡಿ.ವೀರಣ್ಣ ಚತ್ತಿ ಅವರಿಗೆ ಶಾಲೆ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪನಿರ್ದೇಶಕ ಎನ್.ಶ್ರೀಕಂಠ, ಬಿಇಒ ಆರ್.ರಂಗಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಹನುಮಂತಪ್ಪ ಹಿಂದಿನಮನಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ.ಎಸ್.ರಾಜಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಆರ್.ರಾಜೇಶ್ವರಿ, ಬಿ.ಆರ್.ಪಿ ಎಂ.ಶ್ರೀಕಾಂತ್, ಶಿಕ್ಷಣ ಸಂಯೋಜಕ ಬಿ.ವಿ.ಶಿವಕುಮಾರ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
